ADVERTISEMENT

ಶಿವರಾತ್ರಿ: ಸಾಮೂಹಿಕ ಇಷ್ಟ ಲಿಂಗಪೂಜೆ

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2011, 9:05 IST
Last Updated 5 ಮಾರ್ಚ್ 2011, 9:05 IST

ಚಿಂಚೋಳಿ: ಇಷ್ಟಲಿಂಗಕ್ಕೆ ಜಾತಿ ಮತ ಪಂಥದ ಬೇಧವಿಲ್ಲ. ಪರಮಾತ್ಮನ ಕುರುಹುವಾಗಿ ಅಂಗದ ಮೇಲೆ ಧರಿಸಿಕೊಂಡು ನಿತ್ಯ ಪೂಜೆ ಸಲ್ಲಿಸುವ ಮೂಲಕ ಲಿಂಗಾಂಗ ಸಾಮರಸ್ಯ ಹೊಂದಲು ಸಾಧ್ಯ ಎಂದು ಔರಾದನ ಗುರುಮಠದ ವೀರಭದ್ರಯ್ಯಸ್ವಾಮಿ ಅವರು ನುಡಿದರು.  

ಮಹಾಶಿವರಾತ್ರಿ ಪ್ರಯುಕ್ತ ಬುಧವಾರ ಇಲ್ಲಿನ ಚಂದಾಪುರದ ಗಣೇಶ ಮಂದಿರದಲ್ಲಿ ಸ್ಥಳೀಯ ಶರಣೆ ನೀಲಾಂಬಿಕ ಬಸವತತ್ವ ಸೇವಾ ಟ್ರಸ್ಟ್  ಸಂಜೆ ಹಮ್ಮಿಕೊಂಡ ಸಾಮೂಹಿಕ ಇಷ್ಟಲಿಂಗ ಪೂಜೆ ಕಾರ್ಯಕ್ರಮದಲ್ಲಿ ಇಷ್ಟಲಿಂಗ ಪೂಜಾ ವಿಧಾನಗಳನ್ನು ಬೋಧಿಸಿದರು.

ಇದೇ ಸಂದರ್ಭದಲ್ಲಿ ಇಷ್ಟಲಿಂಗ ಪೂಜೆಯನ್ನು ನೆರವೇರಿಸಿದರು.ಮುಖ್ಯ ಅತಿಥಿಗಳಾಗಿ ಹಿರಿಯ ಅನುಭಾವಿ ಡಾ. ರೇವಣಸಿದ್ದಪ್ಪ ಪಾಟೀಲ ಆಗಮಿಸಿದ್ದರು. ಲಿಂಗವಂತ ಧರ್ಮ ತತ್ವ ಪ್ರಚಾರ ಸಂಸ್ಥೆ ಅಧ್ಯಕ್ಷ ಬಕ್ಕಪ್ಪ ಸೂಗೂರು ಅಧ್ಯಕ್ಷತೆ ವಹಿಸಿದ್ದರು.

ಪ್ರಾಸ್ತಾವಿಕವಾಗಿ ಸುಮಂಗಲಾ ಹುಣಜೆ ಮಾತನಾಡಿದರು. ಶಕುಂತಲಾ ಸೂರ್ಯಕಾಂತ ಹುಲಿ ಸ್ವಾಗತಿಸಿದರು. ಜಯಶ್ರೀ ಸಿದ್ದಯ್ಯ ಮಠಪತಿ ನಿರೂಪಿಸಿದರು. ಸುನೀತಾ ಮಲ್ಲಿಕಾರ್ಜುನ ಪಾಲಾಮೂರು ವಂದಿಸಿದರು. ಕಾರ್ಯಕ್ರಮದಲ್ಲಿ 16 ಮಂದಿ ದೀಕ್ಷೆ ಸ್ವೀಕರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.