ADVERTISEMENT

ಶೀಘ್ರ 371ನೇ ಕಲಂ ತಿದ್ದುಪಡಿಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 18 ಜನವರಿ 2011, 12:35 IST
Last Updated 18 ಜನವರಿ 2011, 12:35 IST

ಹುಮನಾಬಾದ್:  ಸಂವಿಧಾನ 371ನೇ ಕಲಂ ಶೀಘ್ರ ತಿದ್ದುಪಡಿ ಆಗದಿದ್ದರೆ ಜಿಲ್ಲೆಯಾದ್ಯಂತ ಉಗ್ರ ಹೋರಾಟ ನಡೆಸಲಾಗುವುದು ಎಂದು ಕನ್ನಡ ಸೇನೆ ರಾಜ್ಯ ಸಂಚಾಲಕ ರವಿಸ್ವಾಮಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು. ಸೇನೆ ತಾಲ್ಲೂಕು ಘಟಕ ವತಿಯಿಂದ ಸೋಮವಾರ ನಡೆದ ರ್ಯಾಲಿ ಉದ್ದೇಶಿಸಿ ಮಾತನಾಡಿದರು.

ಹೈದರಾಬಾದ್ ಕರ್ನಾಟಕ ಅಭಿವೃದ್ದಿಗೆ ಸಂವಿಧಾನ ಕಲಂ 371ನೇ ತಿದ್ದುಪಡಿ ಒಂದೇ ಮಾರ್ಗ. ಈ ಭಾಗದ ಜನತೆಯ ಮನವಿಗೆ ಸ್ಪಂದಿಸಿ, ಕೂಡಲೇ ಆದೇಶ ಹೊರಡಿಸಬೇಕು. ಈ ಸಂಬಂಧ ಇದೇ 19ಕ್ಕೆ ಬೆಂಗಳೂರಿನಲ್ಲಿ ಧರಣಿ ನಡೆಸಲಾಗುತ್ತಿದೆ ಎಂದು ರವಿಸ್ವಾಮಿ ತಿಳಿಸಿದರು. ಪ್ರಧಾನಮಂತ್ರಿ ಅವರ ಹೆಸರಿಗೆ ಬರೆದ ಮನವಿಪತ್ರವನ್ನು ತಹಸೀಲ್ದಾರ ಎಸ್.ಎನ್.ವಾರಿ ಅವರಿಗೆ ಸಲ್ಲಿಸಿದರು.

ಜಿಲ್ಲಾ ಕಾರ್ಯದರ್ಶಿ ರೇವಣಯ್ಯಸ್ವಾಮಿ, ತಾಲ್ಲೂಕು ಅಧ್ಯಕ್ಷ ಬಾಲಾಜಿ ಪಾಟೀಲ, ಪ್ರಮುಖರಾದ ಉಸ್ಮಾನ ಗುತ್ತೆದಾರ, ನಿಂಗಪ್ಪ ವಾರಿ, ಶಾಂತಕುಮಾರ, ರೇವಣಸಿದ್ದ, ನೀಲಕಂಠ ಪಾಟೀಲ, ಆನಂದರೆಡ್ಡಿ, ಸಂಜು ಬಿಜಾಪೂರೆ, ನಾರಾಯಣ ವಾಲಿ, ಮಸ್ತಾನ್ ಪಟೇಲ, ಬಿ.ಎಸ್.ಸ್ವಾಮಿ, ತಾಹೇರ್ ಬಾಗವಾನ, ಮಹೇಶ ಧುಮ್ಮನಸೂರ, ಸಂದೀಪ ಪಾಟೀಲ, ಸಿದ್ದು ಅಕ್ಕಂಪೇಟೆ, ಮಲ್ಲಯ್ಯಸ್ವಾಮಿ, ಡೇವಿಡ, ಬಸವಾರೆಡ್ಡಿ ಚೀನಕೇರಿ, ತಾಜೋದ್ದೀನ್, ಅತೀಖ ಜಮಾದಾರ, ಕರಬಸಯ್ಯಾ, ಅಂಬರೀಶ, ಬಾಬು ಯರಬಾಗ, ಜಡ್ಸ್‌ನ್ ಒಂಟಿ, ಗಂಗಾಧರ ಉಡಬಾಳ, ಜನಾರ್ಧನ ಸಾವರರ್ಗೆಕರ್, ಬಸವಾರೆಡ್ಡಿ ಇಟಗಾ ಅಲ್ಲದೇ ಜಿಲ್ಲೆಯ ಭಾಲ್ಕಿ ಇನ್ನೂ ವಿವಿಧ ತಾಲ್ಲೂಕು ಘಟಕ ಪದಾಧಿಕಾರಿಗಳು ಕಾರ್ಯಕರ್ತರು ಇದ್ದರು.ಇದಕ್ಕೂ ಮುನ್ನ ಪಟ್ಟಣದ ಶಿವಾಜಿ ವೃತ್ತದಿಂದ ಅಂಬೇಡ್ಕರ ವೃತ್ತದ ಮೂಲಕ ಶಾಸಕರ ನಿವಾಸ ಎದುರಿನಿಂದ ಮಿನಿ ವಿಧಾನಸೌಧ ವರೆಗೆ ರ್ಯಾಲಿ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.