ಹುಮನಾಬಾದ್: ತಾಲ್ಲೂಕಿನ ಸುಲ್ತಾನಬಾದವಾಡಿ ಗ್ರಾಮದಲ್ಲಿ ಸೋಮವಾರ ನಡೆದ ಇತಿಹಾಸ ಪ್ರಸಿದ್ಧ ರಾಮಲಿಂಗೇಶ್ವರ ಜಾತ್ರೆಗೆ ಆಗಮಿಸಿದ್ದ ಭಕ್ತಾದಿಗಳು ಕೃತಾರ್ಥರಾದರಿ
ಜಾತ್ರೆ ನಿಮಿತ್ತ ಸೋಮವಾರ ಬೆಳಿಗ್ಗೆ ದೇವಸ್ಥಾನದ ರಾಮಲಿಂಗ ದೇವರಿಗೆ ವಿಶೇಷ ಪೂಜೆ ಮತ್ತು ಅಭಿಷೇಕ ನೇರವೇರಿಸಲಾಯಿತು. ಬಳಿಕ ಮಂಗಳಾರತಿ ಕಾರ್ಯಕ್ರಮ ಜರುಗಿತು. ಬೆಳಿಗ್ಗೆ 11ರಿಂದ 2ರವರೆಗೆ ಗುಲ್ಬರ್ಗ ಜಿಲ್ಲೆ ಚಿಂಚೋಳಿ ತಾಲ್ಲೂಕು ಯಲಮಡಗಿ ಗ್ರಾಮದ ಖ್ಯಾತ ತತ್ವಪದಕಾರ ಕರಬಸಯ್ಯಸ್ವಾಮಿ ಮಠಪತಿ ಅವರು ಭಜನೆ ನಡೆಸಿಕೊಟ್ಟರು. ನಂತರ ಭಕ್ತರು ವಿವಿಧ ಇಷ್ಟಾರ್ಥ ಪೂರೈಕೆಗೊಂಡಿರುವ ಹಿನ್ನೆಲೆಯಲ್ಲಿ ಹರಕೆ ತೀರಿಸುತರ‌್ತಿರುವುದು ಕಂಡುಬಂತು.
ಜಂಗಿಕುಸ್ತಿ: ಮದ್ಯಾಹ್ನ 1ಕ್ಕೆ ಆರಂಭಗೊಂಡ ಜಂಗಿಕುಸ್ತಿಗೆ ದೇವಸ್ಥಾನ ಸಮಿತಿಯ ಅಧ್ಯಕ್ಷ ವೀರಶೆಟ್ಟೆಪ್ಪ ಜಾಂತಿ ಮತ್ತು ಗ್ರಾಮದ ಗಣ್ಯರಾದ ಕುಪೇಂದ್ರ ಕಲ್ಲೂರೆ ಹಾಗೂ ಬಸಯ್ಯಸ್ವಾಮಿ ಚಾಲನೆ ನೀಡಿದರು. ಬೀದರ್- ಗುಲ್ಬರ್ಗ, ವಿಜಾಪೂರ, ಮಹಾರಾಷ್ಟ್ರ ಉದಗಿರ್, ನಿಲಂಗಾ, ಉಮರರ್ಗಾ ಮತ್ತಿತರ ಕಡೆಗಳಿಂದ ಆಗಮಿಸಿದ್ದ ಕುಸ್ತಿ ಪೈಲ್ವಾನರು ತಮ್ಮ ಸಾಹಸ ಪ್ರದರ್ಶಿಸಿದರು.10ವರ್ಷದ ಬಾಲಕರಿಂದ ಹಿಡಿದು 50ವರ್ಷ ವಯಸ್ಸಿನ ಪಟುಗಳು ಸ್ಪರ್ಧೆಯಲ್ಲಿ ಭಾಗವಹಿಸಿದರು. ಕುಸ್ತಿ ಸಂದರ್ಭದಲ್ಲಿ ನೆರೆದ ಪ್ರೇಕ್ಷಕವರ್ಗ ಮತ್ತು ಹಲಗೆ ವಾದ್ಯತಂಡ ಸ್ಪರ್ಧಾಳುಗಳನ್ನು ಪ್ರೋತ್ಸಾಹಿಸುತ್ತಿರುವುದು ವಿಶೇಷವಾಗಿತ್ತು.
ಬಸವರಾಜ ಜಾಂತಿ, ಶಿವರಾಜ ಕುಂಬಾರ, ಬಾಬುರಾವ ಸೇಡೋಳೆ, ರಾಮಚಂದ್ರ ಉಪ್ಪಾರ, ವೀರೂಪಾಕ್ಷಯ್ಯ ಸ್ವಾಮಿ, ರಾಜಪ್ಪ ಮೇತ್ರೆ, ಬಲವಂತ ಉಪ್ಪಾರ್, ಮಾರುತಿ ಚಿಂಚೋಳಿ, ಶಿವರಾಜ ಹಿಲಾಕಲಪೂರ್, ದೇವಸ್ಥಾನ ವ್ಯವಸ್ಥಾಪಕ ಚಿತೇಂದ್ರ ಜಮಾದಾರ, ಅಣುಮಂತ ಜಾಂತಿ, ಪ್ರಕಾಶರಾವ ದಾಡಗೆ, ಧನರಾಜ, ರಾಮಲಿಂಗಯ್ಯಸ್ವಾಮಿ, ಧನರಾಜ ಇದ್ದರು. ದುಬಲಗುಂಡಿ, ಮುಗನೂರ, ಕುಮಾರಚಿಂಚೋಳಿ ಮೊದಲಾದ ಗ್ರಾಮಗಳ ಸಾವಿರಾರು ಸಂಖ್ಯೆ ಭಕ್ತರು ದರ್ಶನ ಪಡೆದು, ಪ್ರಸಾದ ಸ್ವೀಕರಿಸಿ, ಕೃತಾರ್ಥರಾದರು. ಜಾತ್ರೆ ಹಿನ್ನೆಲೆಯಲ್ಲಿ ಹಳ್ಳಿಖೇಡ(ಬಿ) ಪೊಲೀಸ್ ಠಾಣೆ ವತಿಯಿಂದ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.