ADVERTISEMENT

ಸಮಾಜದ ಒಳತಿಗಾಗಿ ಸಂಘ ಬಳಕೆಯಾಗಲಿ

​ಪ್ರಜಾವಾಣಿ ವಾರ್ತೆ
Published 28 ಮೇ 2012, 9:15 IST
Last Updated 28 ಮೇ 2012, 9:15 IST

ಔರಾದ್:  ದೇಶ ಮತ್ತು ಸಮಾಜದ ಒಳತಿಗಾಗಿ ಸಂಘಟನೆಗಳ ಬಳಕೆಯಾಗಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕದ ನೂತನ ಅಧ್ಯಕ್ಷ ಚಂದ್ರಕಾಂತ ನಿರ್ಮಳೆ ಹೇಳಿದರು.

ಪಟ್ಟಣದಲ್ಲಿ ಈಚೆಗೆ ಲಿಂಗಾಯತ ಯುವ ಸಮಾಜದ ಕಾರ್ಯಾಲಯ ಉದ್ಘಾಟಿಸಿ ಮಾತನಾಡಿದರು. ಬಸವಣ್ಣನ ತತ್ವದ ಮೇಲೆ ನಿಂತಿರುವ ಲಿಂಗಾಯತ ಸಮಾಜ. ಆ ತತ್ವಗಳು ಜನ ಮನಕ್ಕೆ ಮುಟ್ಟಿಸಬೇಕು. ಜತೆಗೆ ತಾವು ಅವುಗಳು ನಿಜ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಸಲಹೆ                     ನೀಡಿದರು.

ಲಿಂಗಾಯತ ಯುವ ಸಮಾಜದ ಅಧ್ಯಕ್ಷ ವಿರೇಶ ಅಲ್ಮಾಜೆ, ಮನೋಹರ ಕಾಡೋದೆ, ರೇವಣಪ್ಪ ಜಾಂತೆ, ಬಿ.ಎಂ. ಅಮರವಾಡಿ, ಜಗನ್ನಾಥ ಮೂಲಗೆ, ಕಲ್ಲಪ್ಪ ಬಾವುಗೆ, ಶರಣು ಪಾಟೀಲ, ರಮೇಶ ಮುಳೆ, ಜಗನ್ನಾಥ ಪಾಟೀಲ, ಬಸವರಾಜ ಹಳ್ಳೆ, ಧನರಾಜ ನಿಟ್ಟೂರೆ, ವಿದ್ಯಾಸಾಗರ ಮಳ್ಳೆ, ಹಣಮಂತ ಪಾಟೀಲ, ಸಿದ್ರಾಮಪ್ಪ ನಿಡೋದೆ,. ಮಹೇಶ ಟೊಣಪೆ ಉಪಸ್ಥಿತರಿದ್ದರು. ಇದೇ ವೇಳೆ ಕಸಾಪ ನೂತನ ಅಧ್ಯಕ್ಷ ಚಂದ್ರಕಾಂತ ನಿರ್ಮಳೆ ಅವರನ್ನು ಶಾಲು ಹೊದಿಸಿ ಸತ್ಕರಿಸಲಾಯಿತು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.