ADVERTISEMENT

ಸೇವೆಗೆ ಕಂಕಣಬದ್ಧರಾಗಲು ಪ್ರೇರಣೆ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2011, 7:20 IST
Last Updated 2 ಫೆಬ್ರುವರಿ 2011, 7:20 IST

ಬಸವಕಲ್ಯಾಣ: ಗುಲ್ಬರ್ಗ ವಿಶ್ವವಿದ್ಯಾಲಯದ ಆಶ್ರಯದಲ್ಲಿ ಒಂದು ವಾರದಿಂದ ಇಲ್ಲಿ ನಡೆದ ಪದವಿ ಕಾಲೇಜುಗಳ ರಾಷ್ಟ್ರೀಯ ಸೇವಾ ಯೋಜನೆ ಘಟಕಗಳ ರಾಜ್ಯಮಟ್ಟದ ವಿಶೇಷ ಶಿಬಿರದ ಸಮಾರೋಪ ಸಮಾರಂಭ ಮಂಗಳವಾರ ನಡೆಯಿತು.ಈ ಸಂದರ್ಭದಲ್ಲಿ ಎಂಟು ಜನ ಶಿಬಿರಾರ್ಥಿಗಳು ತಮ್ಮ ಅನುಭವ ಹಂಚಿಕೊಂಡು ಸಮಾಜ ಸೇವೆಗೆ ಕಂಕಣಬದ್ಧರಾಗಲು ಶಿಬಿರ ಪ್ರೇರಣೆ ಕೊಟ್ಟಿದೆ. ಶ್ರಮದಾನ ಹಾಗೂ ಇತರೆ ವಿಷಯಗಳ ಮಹತ್ವದ ಬಗ್ಗೆ ಶಿಬಿರದಿಂದ ತಿಳಿದುಕೊಳ್ಳುವಂತಾಯಿತು ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಗುಲ್ಬರ್ಗ ವಿಶ್ವವಿದ್ಯಾಲಯದ ಯೋಜನಾಧಿಕಾರಿ ಡಾ.ರಮೇಶ ಲಂಡನಕರ್ ಮಾತನಾಡಿ ಬರೀ ತೋರಿಕೆಯ ಸೇವೆ ಆಗಿರಬಾರದು. ಶ್ರಮದಾನ ಮಾಡಲು ನಾಚೀಕೆ, ಅಂಜಿಕೆ ಪಡಬಾರದು ಎಂದರು. ರಾಜ್ಯದ ವಿವಿಧೆಡೆಯಿಂದ ಆಗಮಿಸಿದ ಶಿಬಿರಾರ್ಥಿಗಳು ದೈನಂದಿನ ಚಟುವಟಿಕೆಗಳಲ್ಲಿ ಉತ್ಸಾಹದಿಂದ ಪಾಲ್ಗೊಂಡು ಶಿಬಿರ ಯಶಸ್ವಿ ಮಾಡಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.

ಸಹಾಯಕ ಆಯುಕ್ತ ಎಚ್.ಪ್ರಸನ್ನಕುಮಾರ, ಬಸವಕಲ್ಯಾಣ ಅಭಿವೃದ್ಧಿ ಮಂಡಳಿ ಆಯುಕ್ತ ಕಾಶಿನಾಥ ಗೋಕಳೆ ಮಾತನಾಡಿದರು ಈ ಸಂದರ್ಭದಲ್ಲಿ ‘ಉಘೇ ಉಘೇ ಹುಲಿಗೆಮ್ಮ’ ಕಿರು ನಾಟಕ ಪ್ರದರ್ಶಿಸಿದ ಶ್ರೀಪತಿ ಬೇಲೂರ ಹಾಗೂ ತಂಡದವರಿಗೆ ಹಾಗೂ ‘ಅನುಭವ ಮಂಟಪ’ ನಾಟಕ ಪ್ರದರ್ಶಿಸಿದ ಅಕ್ಕಮಹಾದೇವಿ ತಂಡದವರಿಗೆ ಬಹುಮಾನ ಕೊಡಲಾಯಿತು.

ರಕ್ತದಾನ ಮಾಡಿದ 45 ಶಿಬಿರಾರ್ಥಿಗಳಿಗೆ ಮಹಾತ್ಮ ಗಾಂಧಿಯವರ ಆತ್ಮಚರಿತ್ರೆ ಪುಸ್ತಕವನ್ನು ಸಹಾಯಕ ಆಯುಕ್ತರು ವಿತರಿಸಿದರು. ಡಾ.ಗವಿಸಿದ್ಧಪ್ಪ ಪಾಟೀಲ ಸ್ವಾಗತಿಸಿದರು.ಡಾ.ಜಯಕುಮಾರ ಸಿಂಧೆ ನಿರೂಪಿಸಿದರು. ಡಾ.ಚಂದ್ರಕಲಾ ಬಿದರಿ ವಂದಿಸಿದರು. ವಿವಿಧೆಡೆಯಿಂದ ಆಗಮಿಸಿದ್ದ ಎನ್.ಎಸ್.ಎಸ್ ಘಟಕಗಳ ಯೋಜನಾಧಿಕಾರಿಗಳು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.