ADVERTISEMENT

`ಹಬ್ಬಗಳಿಂದ ಬಾಂಧವ್ಯ ವೃದ್ಧಿ'

​ಪ್ರಜಾವಾಣಿ ವಾರ್ತೆ
Published 26 ಡಿಸೆಂಬರ್ 2012, 5:48 IST
Last Updated 26 ಡಿಸೆಂಬರ್ 2012, 5:48 IST
ಬಸವಕಲ್ಯಾಣದ ರಥ ಮೈದಾನದ ಹಿಂದುಗಡೆಯ ಚರ್ಚ್‌ನಲ್ಲಿ ಮಂಗಳವಾರ ಹಮ್ಮಿಕೊಂಡ ಕ್ರಿಸ್‌ಮಸ್ ಹಬ್ಬದ ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ ಮಾತನಾಡಿದರು. ಫಾದರ್ ರಮೇಶ, ಶಬ್ಬೀರಪಾಶಾ ಉಪಸ್ಥಿತರಿದ್ದರು
ಬಸವಕಲ್ಯಾಣದ ರಥ ಮೈದಾನದ ಹಿಂದುಗಡೆಯ ಚರ್ಚ್‌ನಲ್ಲಿ ಮಂಗಳವಾರ ಹಮ್ಮಿಕೊಂಡ ಕ್ರಿಸ್‌ಮಸ್ ಹಬ್ಬದ ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ ಮಾತನಾಡಿದರು. ಫಾದರ್ ರಮೇಶ, ಶಬ್ಬೀರಪಾಶಾ ಉಪಸ್ಥಿತರಿದ್ದರು   

ಬಸವಕಲ್ಯಾಣ: ಹಬ್ಬಗಳ ಆಚರಣೆಯಿಂದ ಬಾಂಧವ್ಯ ವೃದ್ಧಿಸುತ್ತದೆ. ಭಕ್ತಿ ಭಾವನೆ, ಹಿತ ಚಿಂತನೆ ಮತ್ತು ಪ್ರಾರ್ಥನೆಯಿಂದ ಮನ ಶುದ್ಧಗೊಳ್ಳುತ್ತದೆ ಎಂದು ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ ಹೇಳಿದರು.

ಇಲ್ಲಿನ ರಥ ಮೈದಾನದ ಹಿಂದುಗಡೆಯ ಚರ್ಚ್‌ನಲ್ಲಿ ಮಂಗಳವಾರ ಕ್ರಿಸ್‌ಮಸ್ ಹಬ್ಬದ ಅಂಗವಾಗಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಮಾತನಾಡಿದರು.ಯೇಸು ಹೇಳಿದ ಮಾರ್ಗದಲ್ಲಿ ಸಾಗಬೇಕು. ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಬೇಕು ಆಗ ಮಾತ್ರ ಪ್ರತಿಯೊಬ್ಬರು ಅಭಿವೃದ್ಧಿ ಪಥದಲ್ಲಿ ಮುನ್ನಡೆಯಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಫಾದರ್ ರಮೇಶ ಮಾತನಾಡಿ ದೇವರನ್ನು ಪ್ರತಿನಿತ್ಯ ಪ್ರಾರ್ಥಿಸಿದರೆ ಒಳ್ಳೆಯದನ್ನು ಮಾಡುತ್ತಾನೆ. ಪ್ರತಿ ಕೆಲಸದಲ್ಲಿಯೂ ಯಶಸ್ಸು ದೊರಕುತ್ತದೆ ಎಂದರು.ಸಿಸ್ಟರ್ ಮೇರಿ, ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಶಬ್ಬೀರಪಾಶಾ ಮುಜಾವರ್, ಪ್ರಮುಖರಾದ ದಿಲೀಪಗಿರಿ ಗೋಕುಳ, ಶಿರೋಮಣಿ, ಮಲ್ಲಿಕಾರ್ಜುನ ಮೇತ್ರೆ, ಅಮೃತರಾವ, ಮನೋಹರ, ಧೂಳಪ್ಪ, ಸ್ನೇಹಲತಾ ಮೇತ್ರೆ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಕೇಕ್ ಕತ್ತರಿಸಿ ಮಕ್ಕಳಿಗೆ ಹಂಚಲಾಯಿತು. ಚರ್ಚ್‌ನ್ನು ವಿಶೇಷವಾಗಿ ಸಿಂಗರಿಸಲಾಗಿತ್ತು. ಗೋದಲಿ ಸಿದ್ಧಪಡಿಸಿ ಯೇಸುವಿನ ಜನ್ಮದ ಪ್ರತಿಕೃತಿ ತಯಾರಿಸಲಾಗಿತ್ತು. ಈ ಸಂದರ್ಭದಲ್ಲಿ ಅನೇಕ ಬಾಂಧವರು ಚರ್ಚ್‌ಗೆ ಆಗಮಿಸಿ ಪ್ರಾರ್ಥನೆ            ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.