ADVERTISEMENT

ಹಳಕಟ್ಟಿಯವರ ಸಾಧನೆ ದೊಡ್ಡದು

​ಪ್ರಜಾವಾಣಿ ವಾರ್ತೆ
Published 10 ಜುಲೈ 2012, 6:50 IST
Last Updated 10 ಜುಲೈ 2012, 6:50 IST
ಹಳಕಟ್ಟಿಯವರ ಸಾಧನೆ ದೊಡ್ಡದು
ಹಳಕಟ್ಟಿಯವರ ಸಾಧನೆ ದೊಡ್ಡದು   

ಬಸವಕಲ್ಯಾಣ: ಬಸವಾದಿ ಶರಣರ ಅಮೂಲ್ಯ ವಚನಗಳನ್ನು ಸಂಗ್ರಹಿಸುವ ಮೂಲಕ ಫ.ಗು.ಹಳಕಟ್ಟಿಯವರು ಬಹುದೊಡ್ಡ ಸಾಧನೆ ಮಾಡಿದ್ದಾರೆ ಎಂದು ಹುಲಸೂರ ಗುರುಬಸವೇಶ್ವರ ಸಂಸ್ಥಾನ ಮಠದ ಶಿವಾನಂದ ಸ್ವಾಮೀಜಿ ಅಭಿಪ್ರಾಯಪಟ್ಟರು.

ಇಲ್ಲಿನ ಪ್ರಸಿದ್ಧ ಬಸವೇಶ್ವರ ದೇವಸ್ಥಾನದಲ್ಲಿ ಭಾನುವಾರ ಸಂಜೆ ಹಮ್ಮಿಕೊಂಡ ಮಾಸಿಕ ಶರಣ ಸಂಗಮ ಮತ್ತು ವಚನ ಪಿತಾಮಹ ಫ.ಗು.ಹಳಕಟ್ಟಿಯವರ ಜನ್ಮದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಬಸವಣ್ಣನವರು ಸಮಾಜದಲ್ಲಿನ ಜಾತಿಯ ಭೂತ ಓಡಿಸಲು ಯತ್ನಿಸಿದರು. ಹೆಣ್ಣು- ಗಂಡು ಎಂಬ ಭೇದಭಾವ ತೊಡೆದುಹಾಕಲು ಶ್ರಮಿಸಿದರು. ಅವರು ವಚನಗಳ ಮೂಲಕ ದಿವ್ಯ ಸಂದೇಶ ಕೊಟ್ಟು ಸನ್ಮಾರ್ಗ ತೋರಿದ್ದಾರೆ. ಆ ವಚನಗಳನ್ನು ಹಳಕಟ್ಟಿಯವರು ಸಂಗ್ರಹಿಸದಿದ್ದರೆ ಸಮಾಜಕ್ಕೆ ದೊಡ್ಡ ನಷ್ಟ ಆಗುತ್ತಿತ್ತು ಎಂದರು.

ಅನುಭವ ಮಂಟಪದ ಸಂಚಾಲಕ ವಿ.ಸಿದ್ಧರಾಮಣ್ಣ ಮಾತನಾಡಿ ಫ.ಗು.ಹಳಕಟ್ಟಿಯವರು ಆರ್ಥಿಕ ಸಂಕಟ ಮತ್ತು ಇತರೆ ತೊಂದರೆಗಳ ಮಧ್ಯೆಯೂ ಶರಣರ ವಚನಗಳನ್ನು ಸಂಗ್ರಹಿಸುವ ಕಾರ್ಯ ಕೈಬಿಡಲಿಲ್ಲ ಎಂದರು. ಬಸವಣ್ಣೆಪ್ಪ ತಿಬಶೆಟ್ಟಿ ಮಾತನಾಡಿ ಹಳಕಟ್ಟಿಯವರ ಜೀವನದ ಬಗ್ಗೆ ಹೇಳಿದರು. ಸಹಾಯಕ ಆಯುಕ್ತ ಎಚ್.ಪ್ರಸನ್ನಕುಮಾರ. ವಿಜಯಲಕ್ಷ್ಮಿ ಗಡ್ಡೆ ಮಾತನಾಡಿದರು.

ದೇವಸ್ಥಾನ ಸಮಿತಿ ಅಧ್ಯಕ್ಷ ಅನಿಲಕುಮಾರ ರಗಟೆ, ವಿಭೂತಿ ಬಸವಾನಂದ, ಮಲ್ಲಿಕಾರ್ಜುನ ಸ್ವಾಮಿ, ಪ್ರಮುಖರಾದ ಗದಗೆಪ್ಪ ಹಲಶೆಟ್ಟಿ, ಕಾಶಪ್ಪ ಸಕ್ಕರಬಾವಿ, ಬಸವರಾಜ ಬಾಲಕಿಲೆ, ಶಂಕರ ಲಾತೂರೆ, ಅಶೋಕ ನಾಗರಾಳೆ, ಮಲ್ಲಿಕಾರ್ಜುನ ಕುರಕೋಟೆ. ಶಶಿಕಾಂತ ದುರ್ಗೆ, ನಾಗಣ್ಣ ನಾಸೆ, ಚಂದ್ರಪ್ಪ ಗುಂಗೆ ಉಪಸ್ಥಿತರಿದ್ದರು. ಇಲ್ಲಿಂದ ವರ್ಗಾವಣೆಗೊಂಡಿರುವ ಸಹಾಯಕ ಆಯುಕ್ತ ಎಚ್.ಪ್ರಸನ್ನಕುಮಾರ ಅವರನ್ನು ಈ ಸಂದರ್ಭದಲ್ಲಿ ಸತ್ಕರಿಸಲಾಯಿತು. ನಿರ್ಮಲಾ ಶೆಟಗಾರ್ ನಿರೂಪಿಸಿದರು. ಮಾಯಾದೇವಿ ಮುರಾಳೆ ವಂದಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.