ADVERTISEMENT

‘ಆರೋಗ್ಯ, ಶಿಕ್ಷಣಕ್ಕೆ ಕ್ರೈಸ್ತರ ಕೊಡುಗೆ ಅನನ್ಯ’

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2013, 7:46 IST
Last Updated 11 ಡಿಸೆಂಬರ್ 2013, 7:46 IST

ಜನವಾಡ: ಆರೋಗ್ಯ ಹಾಗೂ ಶಿಕ್ಷಣ ಕ್ಷೇತ್ರಕ್ಕೆ ಕ್ರೈಸ್ತರ ಕೊಡುಗೆ ಅನನ್ಯವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ನುಡಿದರು. ಬೀದರ್ ತಾಲ್ಲೂಕಿನ ಆಣದೂರು ಗ್ರಾಮದಲ್ಲಿ ಸೋಮವಾರ ನಡೆದ ಸೇಂಟ್ ಪೌಲ್ ಮೆಥೋಡಿಸ್ಟ್ ಚರ್ಚ್ ಸುವರ್ಣ ಮಹೋತ್ಸವ ಹಾಗೂ ನೂತನ ಮಹಾದ್ವಾರ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.

ಅನೇಕ ಕ್ರೈಸ್ತ ಧರ್ಮ ಗುರುಗಳು ಗ್ರಾಮೀಣ ಪ್ರದೇಶದ ಜನರಿಗೆ ಆರೋಗ್ಯ ಸೇವೆ ಹಾಗೂ ಶಿಕ್ಷಣ ಒದಗಿ­ಸುವಲ್ಲಿ ಕಾರ್ಯೋನ್ಮುಖ­ರಾಗಿದ್ದಾರೆ. ಸಮಾಜಕ್ಕೆ ಪ್ರೀತಿ, ಶಾಂತಿಯ ಸಂದೇಶ­ವನ್ನು ಯೇಸು ನೀಡಿದ್ದಾರೆ. ತಮಗೆ ಕಿರುಕುಳ, ಹಿಂಸೆ ನೀಡಿದವರನ್ನೂ ಕ್ಷಮಿಸುವ ಗುಣ ಬೆಳೆಸಿಕೊಳ್ಳ ಬೇಕು ಎಂದು ಸಾರಿದ್ದಾರೆ ಎಂದು ಹೇಳಿದರು.

ಪ್ರಸ್ತುತ ಸಮಾಜ ಕವಲು ದಾರಿ­ಯಲ್ಲಿದೆ. ಗಾಂಧೀಜಿಯವರ ಅಂಹಿಸಾ ತತ್ವ ಮರೆಯಾಗುತ್ತಿದೆ. ಎಲ್ಲೆಡೆ ಸ್ವಾರ್ಥಕ್ಕಾಗಿ ಹಿಂಸೆ ವಾತಾವರಣವನ್ನು ಕಾಣಲಾಗುತ್ತಿದೆ. ಪರಸ್ಪರ ದ್ವೇಷದ ಸ್ಥಿತಿ ಇದೆ. ಹಿಂದೆ ಕ್ರೈಸ್ತ ಧಾರ್ಮಿಕ ಕ್ಷೇತ್ರಗಳ ಮೇಲೆ ನಡೆದ ದಾಳಿ ಸಮಾಜ ತಲೆ ತಗ್ಗಿಸುವ ಸಂಗತಿಗಳಾಗಿವೆ ಎಂದು ಬೇಸರ ವ್ಯಕ್ತಪಡಿಸಿದರು.

ಮೇಲು- ಕೀಳು ಎನ್ನುವ ಭಾವನೆ ತೊಲಗಬೇಕು. ಪರಸ್ಪರ ಸಹೋದರ­ತ್ವದ ಭಾವನೆ ಎಲ್ಲರಲ್ಲಿ ಬರಬೇಕು ಎಂದು ಸಲಹೆ ಮಾಡಿದರು.
ಯೇಸು ವಿಶ್ವಕ್ಕೆ ಪ್ರೀತಿ, ಕರುಣೆ, ದಯೆ, ಕ್ಷಮೆ, ಪಶ್ಚಾತಾಪದ ಸಂದೇಶಗಳನ್ನು ನೀಡಿದ್ದರು. ಧಾರ್ಮಿಕ ಜಾಗೃತಿ ಮೂಡಿಸಿದ್ದರು ಎಂದು ಭಾಲ್ಕಿ ಶಾಸಕ ಈಶ್ವರ ಖಂಡ್ರೆ ಹೇಳಿದರು. ಬೆಂಗಳೂರಿನ ಬಿಷಪ್ ಡಾ. ತಾರಾ­ನಾಥ ಎಸ್. ಸಾಗರ್ ಉದ್ಘಾ­ಟನೆ ನೆರವೇರಿಸಿ ಮಾತನಾಡಿದರು.

ಮಾಜಿ ಸಚಿವ ಬಂಡೆಪ್ಪ ಕಾಶೆಂ­ಪೂರ್, ಮಾಜಿ ಶಾಸಕ ಸೈಯದ್ ಜುಲ್ಫೇ­ಕಾರ್ ಹಾಷ್ಮಿ, ಜಿಲ್ಲಾ ಪಂಚಾ­ಯಿತಿ ಮಾಜಿ ಅಧ್ಯಕ್ಷ ನಸೀಮುದ್ದೀನ್ ಪಟೇಲ್, ರೆವರೆಂಡ್ ಡೇವಿಡ್ ನಥಾ­ನಿಯಲ್, ಬಸವ ಪ್ರಭು ಸ್ವಾಮೀಜಿ, ರೆವರೆಂಡ್ ಎಂ.ಪಿ. ಜಯಪಾಲ್, ಭಂತೆ ಧಮ್ಮಾನಂದ, ಸೇಂಟ್ ಪೌಲ್ ಮೆಥೋ­ಡಿಸ್ಟ್ ಚರ್ಚ್ ಜಿಲ್ಲಾ ಮೇಲ್ವಿ­ಚಾರಕ ರೆವರೆಂಡ್ ಎ. ಸಿಮಿಯೋನ್, ಪ್ರಮುಖರಾದ ರಮೇಶ್ ಪಾಟೀಲ್ ಸೋಲಪುರ, ರೋಹಿದಾಸ್‌ ಘೋಡೆ,  ರಾಜು ಕಡ್ಯಾಳ್, ಡಾ. ಅಮರ ಏರೋಳಕರ್, ಸುರೇಶ್ ಶಿಂಧೆ, ಜೋಸೆಫ್ ಕೊಡ್ಡಿಕರ್ ಇದ್ದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.