ADVERTISEMENT

ಗಡಿ ರಸ್ತೆಗೆ ₹ 4.49 ಕೋಟಿ ಅನುದಾನ

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2020, 12:28 IST
Last Updated 14 ಆಗಸ್ಟ್ 2020, 12:28 IST
ತೆಲಂಗಾಣದ ನಾರಾಯಣಖೇಡ ಶಾಸಕ ಭೋಪಾಲರೆಡ್ಡಿ ಅವರು ಜನಪದ ಕಲಾವಿದರ ಬಳಗದ ಅಧ್ಯಕ್ಷ ವಿಜಯಕುಮಾರ ಸೋನಾರೆ ಅವರಿಗೆ ಅಭಿನಂದನಾ ಪತ್ರ ನೀಡಿದರು
ತೆಲಂಗಾಣದ ನಾರಾಯಣಖೇಡ ಶಾಸಕ ಭೋಪಾಲರೆಡ್ಡಿ ಅವರು ಜನಪದ ಕಲಾವಿದರ ಬಳಗದ ಅಧ್ಯಕ್ಷ ವಿಜಯಕುಮಾರ ಸೋನಾರೆ ಅವರಿಗೆ ಅಭಿನಂದನಾ ಪತ್ರ ನೀಡಿದರು   

ಬೀದರ್: ಕರ್ನಾಟಕದ ಗಡಿಯನ್ನು ಸಂಪರ್ಕಿಸುವ ರಸ್ತೆಗಳ ಅಭಿವೃದ್ಧಿಗೆ ತೆಲಂಗಾಣ ಸರ್ಕಾರ ₹ 4.49 ಕೋಟಿ ಅನುದಾನ ಒದಗಿಸಿದೆ ಎಂದು ತೆಲಂಗಾಣದ ನಾರಾಯಣಖೇಡದ ಶಾಸಕ ಭೋಪಾಲರೆಡ್ಡಿ ತಿಳಿಸಿದ್ದಾರೆ.

ಬೀದರ್‌ನ ಜನಪದ ಕಲಾವಿದರ ಬಳಗವು 2019ರ ನವೆಂಬರ್ 2 ರಂದು ಬೀದರ್ ತಾಲ್ಲೂಕಿನ ಗಡಿ ಗ್ರಾಮ ಚಿಲ್ಲರ್ಗಿಯಲ್ಲಿ ಹಮ್ಮಿಕೊಂಡಿದ್ದ ಗಡಿನಾಡು ಉತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಂತರ ರಸ್ತೆ ಸಮಸ್ಯೆ ನನ್ನ ಗಮನಕ್ಕೆ ಬಂದಿತು. ವಿಷಯ ಮುಖ್ಯಮಂತ್ರಿ ಗಮನಕ್ಕೆ ತಂದ ಬಳಿಕ ಅನುದಾನ ಬಿಡುಗಡೆ ಮಾಡಿದ್ದಾರೆ ಎಂದು ಹೇಳಿದ್ದಾರೆ.

ಗಡಿಭಾಗದ ಜನಕ್ಕೆ ಸಾಂಸ್ಕೃತಿಕ ಚಟುವಟಿಕೆ ಅಗತ್ಯವಿದೆ. ಜನಪದ ಕಲಾವಿದರ ಬಳಗ ಈ ದಿಸೆಯಲ್ಲಿ ಕೆಲಸ ಮಾಡುತ್ತಿದೆ. ಗಡಿಯಲ್ಲಿ ಅಭಿವೃದ್ಧಿ ಚಟುವಟಿಕೆಗಳೂ ನಡೆಯಬೇಕಾಗಿದೆ. ಸಂಸ್ಥೆಗೆ ಬೀದರ್ ಜಿಲ್ಲಾಡಳಿತ ಅನುದಾನ ಒದಗಿಸಿದ್ದಲ್ಲಿ ತೆಲಂಗಾಣ ಸರ್ಕಾರ ಕೂಡ ಕೈಜೋಡಿಸಲಿದೆ ಎಂದು ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.