ADVERTISEMENT

ಬೀದರ್‌: ಜಿಲ್ಲೆಯಲ್ಲಿ 30 ಸಖಿ ಮತಗಟ್ಟೆ

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2019, 14:44 IST
Last Updated 22 ಏಪ್ರಿಲ್ 2019, 14:44 IST
   

ಬೀದರ್‌: ಲೋಕಸಭಾ ಚುಣಾವಣೆಯಲ್ಲಿ ಜಿಲ್ಲೆಯಲ್ಲಿ ಒಟ್ಟು 30 ಸಖಿ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.

ಜಿಲ್ಲಾ ಪಂಚಾಯಿತಿ ಕಟ್ಟಡದಲ್ಲಿರುವ ಮತಗಟ್ಟೆ ಸಂಖ್ಯೆ 104ರಲ್ಲಿ ವಿಶೇಷಚೇತನರು ಕಾರ್ಯನಿರ್ವಹಿಸುವ ವಿಶೇಷ ಮತಗಟ್ಟೆಯೊಂದನ್ನು ಸ್ಥಾಪಿಸಲಾಗಿದೆ.

ಬಸವಕಲ್ಯಾಣ ಮತಕ್ಷೇತ್ರದ ಶಾಂತಿನಿಕೇತನ ಹಿರಿಯ ಪ್ರಾಥಮಿಕ ಶಾಲೆ ಕಟ್ಟಡ, ನಗರಸಭೆ ಹಳೆಯ ಕಚೇರಿ ಕಟ್ಟಡ, ಕೃಷಿ ಉತ್ಪನ್ನ ಮಾರುಕಟ್ಟೆ ಕಟ್ಟಡ, ಚನ್ನವೀರ ಶಿವಾಚಾರ್ಯ ಕೈಗಾರಿಕಾ ತರಬೇತಿ ಕೇಂದ್ರದ ವಿವೇಕಾನಂದ ಶಿಕ್ಷಣ ಸಂಸ್ಥೆ ಕಟ್ಟಡ(ಬಲ ಭಾಗ) ಹಾಗೂ ಬೇಟಬಾಲ್ಕುಂದಾದ ಗ್ರಾಮ ಪಂಚಾಯಿತಿ ಕಚೇರಿ ಕಟ್ಟಡ.

ADVERTISEMENT

ಹುಮನಾಬಾದ್ ಮತಕ್ಷೇತ್ರದ ಹಳೆಯ ತಹಸೀಲ್ ಕಚೇರಿ, ಸರ್ಕಾರಿ ಉರ್ದು ಪ್ರಾಥಮಿಕ ಶಾಲೆ ಕಟ್ಟಡ ಹಳ್ಳಿಖೇಡ(ಬಿ),
ಸರ್ಕಾರಿ ಪಿಯು ಜೂನಿಯರ್ ಕಾಲೇಜು ಕಟ್ಟಡ(ಪೂರ್ವ ಭಾಗ), ಫಾತ್ಮಾಪೂರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಟ್ಟಡ, ಚಿಟಗುಪ್ಪದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಟ್ಟಡ.

ಬೀದರ್‌ ಕ್ಷೇತ್ರದಲ್ಲಿ ಜಮೀಸ್ತಾಪುರದ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆ ಕಟ್ಟಡ , ಅಮಲಾಪುದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಟ್ಟಡ(ದಕ್ಷಿಣ ಭಾಗ), ಚಿಟ್ಟಾವಾಡಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಟ್ಟಡ, ಮಲ್ಲಿಕ ಮರ್ಜಾಪುರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಟ್ಟಡ, ನಿರ್ಣಾದ ಸರ್ಕಾರಿ ಪಿಯು ಕಾಲೇಜು ಕಟ್ಟಡ, ಸಿಕಂದರಾಬಾದ್‌ನ ಎಐಎಂಎ ಕಾಲೇಜು ಆವರಣ, ಜನವಾಡ ರಸ್ತೆಯ ಸರ್ಕಾರಿ ಶಿಕ್ಷಕರ ತರಬೇತಿ ಕೇಂದ್ರ ಮರಾಠಿ ಹಳೆ ಡೈಟ್‌ ಕಟ್ಟಡ, ಹಳ್ಳದಕೇರಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಟ್ಟಡ,ಮಂಗಲಪೇಟೆಯ ನಾರ್ಮಾ ಫ್ರೆಂಡ್‍ರಿಚ್ ಹಿರಿಯ ಪ್ರಾಥಮಿಕ ಶಾಲೆ ಮತ್ತು ಪಿಯು ಕಾಲೇಜು, ಮಾಮನಕೇರಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಟ್ಟಡ.

ಭಾಲ್ಕಿ ಮತಕ್ಷೇತ್ರದ ಸಹಾಯಕ ಕೃಷಿ ನಿರ್ದೇಶಕರ ಕಚೇರಿ ನೂತನ ಕಟ್ಟಡದಲ್ಲಿರುವ ಸಭಾಂಗಣ, ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಕಟ್ಟಡ ಸಿ.ಬಿ ನಗರ ಹಾಗೂ ಸೆವಂತ್ ಡೇ ಅಡ್ವಾಂಟಿಸ್ಟ್ ಪ್ರೌಢ ಶಾಲೆ ಕಟ್ಟಡ. ಔರಾದ್(ಬಿ) ಮತಕ್ಷೇತ್ರ: ಔರಾದ್‌ ಬಸವನಗಲ್ಲಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಅಮರೇಶ್ವರ ಕಾಲೇಜು, ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಹಾಗೂ ಬಲ್ಲೂರಿನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಕಟ್ಟಡ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.