ಭಾಲ್ಕಿ: ‘ಡಾ.ಚನ್ನಬಸವ ಪಟ್ಟದ್ದೇವರು ಪತ್ತಿನ ಸಹಕಾರ ಸಂಘಕ್ಕೆ ₹32 ಲಕ್ಷ ನಿವ್ವಳ ಲಾಭವಾಗಿದೆ’ ಎಂದು ಸಂಘದ ಅಧ್ಯಕ್ಷ ಡಿ.ಕೆ.ಸಿದ್ರಾಮ ತಿಳಿಸಿದರು.
ಪಟ್ಟಣದ ಕುಂಬಾರ ಗುಂಡಯ್ಯ ಕಲ್ಯಾಣ ಮಂಟಪದಲ್ಲಿ ನಡೆದ 19ನೇ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪ್ರತಿವರ್ಷ ಸಹಕಾರ ಸಂಘ ಪ್ರಗತಿ ಪಥದಲ್ಲಿ ಸಾಗುತ್ತಿರುವುದು ಖುಷಿ ತಂದು ಕೊಟ್ಟಿದೆ. ಪ್ರಾಮಾಣಿಕ ವ್ಯಾಪಾರಿಗಳನ್ನು ಗುರುತಿಸಿ ಸಾಲ ನೀಡುವ ಮೂಲಕ ಅವರ ಆರ್ಥಿಕ ಏಳಿಗೆಗೆ ಸಹಕರಿಸಬೇಕು ಎಂದು ಸಿಬ್ಬಂದಿಗೆ ತಿಳಿಸಿದರು.
ಸಾನ್ನಿಧ್ಯ ವಹಿಸಿ ಮಾತನಾಡಿದ ಗುರುಬಸವ ಪಟ್ಟದ್ದೇವರು,‘ದೇಶದ ಆರ್ಥಿಕ ಪ್ರಗತಿಯಲ್ಲಿ ಸಹಕಾರ ಸಂಘಗಳು ಮುಖ್ಯ ಪಾತ್ರ ವಹಿಸುತ್ತಿವೆ’ ಎಂದು ಹೇಳಿದರು.
ಉತ್ತಮ ಗ್ರಾಹಕರಾದ ವೀರಶೆಟ್ಟಿ ಉಮಾ, ಬಸವರಾಜ ಹಡಪದ, ಶಾಂತಯ್ಯ ಸ್ವಾಮಿ ಹಾಗೂ ಅಡವೆಪ್ಪ ಪಟ್ನೆ ಅವರನ್ನು ಸನ್ಮಾನಿಸಲಾಯಿತು.
ನಿರ್ದೇಶಕರಾದ ರಾಜಶೇಖರ ಅಷ್ಟೂರೆ, ಬಾಬುರಾವ್ ಜಲ್ದೆ, ಶರದ ಸಿರ್ಸೆ, ಲೆಕ್ಕ ಪರಿಶೋಧಕ ಚಂದ್ರಶೇಖರ ಪಾಟೀಲ, ಬಂಡೆಪ್ಪ ಕಂಟೆ ಹಾಗೂ ರವಿ ಮೀಸೆ ಇದ್ದರು.
ಉಪಾಧ್ಯಕ್ಷ ಶರಣಪ್ಪ ಬಿರಾದಾರ ಸ್ವಾಗತಿಸಿದರು. ವ್ಯವಸ್ಥಾಪಕ ಗಣಪತಿ ಬಾವಗೆ ಹಣಕಾಸು ವಹಿವಾಟಿನ ವರದಿ ಮಂಡಿಸಿದರು. ವೀರಣ್ಣ ಕುಂಬಾರ ನಿರೂಪಿಸಿದರು. ಅನಿಲ್ ಕುಮಾರ ಹಾಲಕುಡೆ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.