ADVERTISEMENT

‘ಮೂಲಸೌಕರ್ಯಕ್ಕೆ ಹೆಚ್ಚಿನ ಆದ್ಯತೆ’

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2018, 10:17 IST
Last Updated 1 ಫೆಬ್ರುವರಿ 2018, 10:17 IST

ಚಿಟಗುಪ್ಪ: ‘ಪಟ್ಟಣದಲ್ಲಿ ನೀರು, ಚರಂಡಿ, ವಿದ್ಯುತ್ ಪೂರೈಕೆ ಸೇರಿದಂತೆ ಸಮಗ್ರ ಪ್ರಗತಿಗೆ 2018–19ನೇ ಸಾಲಿನ ಬಜೆಟ್‌ನಲ್ಲಿ ಒತ್ತು ನೀಡಲಾಗಿದೆ’ ಎಂದು ಪುರಸಭೆ ಅಧ್ಯಕ್ಷೆ ಗೌರಮ್ಮ ನರನಾಳ್ ಹೇಳಿದರು.

ಇಲ್ಲಿಯ ಪುರಸಭೆ ಕಚೇರಿಯಲ್ಲಿ ಬುಧವಾರ ನಡೆದ 2018–19ನೇ ಸಾಲಿನ ಬಜೆಟ್‌ ಮಂಡನೆ ಸಭೆಯಲ್ಲಿ ಅವರು ಮಾತನಾಡಿದರು. ಮುಖ್ಯಾಧಿಕಾರಿ ಹುಸಾಮೊದ್ದಿನ್ ಅವರು 2018–19ನೇ ಸಾಲಿನ ₹ 37,67 ಲಕ್ಷ ಮೊತ್ತದ ಉಳಿತಾಯ ಬಜೆಟ್ ಮಂಡಿಸಿದರು. ಲೆಕ್ಕಿಗ ನರೇಶ್ ಘನಾತೆ ₹12.02 ಕೋಟಿ ಮೊತ್ತದ ಆಯ, ₹18.73 ಕೋಟಿ ಮೊತ್ತದ ವ್ಯಯದ ಅಂದಾಜು ಪಟ್ಟಿ ಸಭೆಗೆ ಓದಿ ತಿಳಿಸಿದರು.

ರಾಜಸ್ವ ಮುಕ್ತ ನಿಧಿ ಅನುದಾನದಿಂದ ₹2 ಕೋಟಿ, 14ನೇ ಹಣಕಾಸಿನಲ್ಲಿ ₹ 1.99 ಕೋಟಿ, ನೂತನವಾಗಿ ನಿರ್ಮಿಸಲಾದ ಪುರಸಭೆ ಮಳಿಗೆಗಳ ವಾರ್ಷಿಕ ಆದಾಯ ₹ 15 ಲಕ್ಷ , ಆಸ್ತಿ ತೆರಿಗೆಯಿಂದ ₹27.70 ಲಕ್ಷ, ಖಾತೆಗಳ ವರ್ಗಾವಣೆಯಿಂದ ₹15 ಲಕ್ಷ, ನೀರಿನ ತೆರಿಗೆಯಿಂದ ₹25 ಲಕ್ಷ, ವಿವಿಧ ಪ್ರಮಾಣ ಪತ್ರಗಳಿಂದ ₹10 ಲಕ್ಷ, ಕಟ್ಟಡ ಪರವಾನಗಿಯಿಂದ ₹ 5 ಲಕ್ಷ, ಅಭಿವೃದ್ಧಿ ಶುಲ್ಕ ₹ 4 ಲಕ್ಷ, ಉದ್ದಿಮೆ ಪರವಾನಗಿಯಿಂದ ₹3 ಲಕ್ಷ, ಇತರ ಮೂಲಗಳಿಂದ ₹ 12 ಕೋಟಿ ಆದಾಯ ಬರಲಿದೆ ಎಂದು ಬಜೆಟ್‌ನಲ್ಲಿ ಉಲ್ಲೇಖಿಸಲಾಗಿದೆ. 2018–19ನೇ ಸಾಲಿನ ಆಯವ್ಯಯಕ್ಕೆ ಎಲ್ಲ ಸದಸ್ಯರು ಅನುಮೋದನೆ ನೀಡಿದರು.

ADVERTISEMENT

ಪುರಸಭೆ ಉಪಾಧ್ಯಕ್ಷ ಮಹ್ಮದ್ ಲೈಕೋದ್ದೀನ್, ಸದಸ್ಯರಾದ ಮಲ್ಲಿಕಾರ್ಜುನ ಪಾಟೀಲ, ಭೀಮಣ್ಣ ಶಾಖಾ, ಸುಭಾಷ ಕುಂಬಾರ್, ಕರಬಸಪ್ಪ ಗಡಮಿ, ಮೀರ ಮುಜಾಫರ್ ಅಲಿ ಪಟೇಲ್, ವಿಜಯ ಕುಮಾರ ಬಮ್ಮಣಿ, ಗೋವಿಂಧರಾವ್ ಬುರಾಳೆ, ಮನೋಜ ಕುಮಾರ ಶರ್ಮಾ, ಕ್ರಿಸ್ತಾನಂದ್ ಕೇರುರಕರ್, ಮೊಹಿಯೋದ್ದೀನ್ ಲಾಠೋಡಿ, ರಾಜಕುಮಾರ ಗುತ್ತೆದಾರ್, ಜಲೀಸಾ ಬೇಗಂ, ಸಾಲಾರಬಿ ಅಬ್ದುಲ್ ಖಾದರ್, ನಿರ್ಮಲಾ ದಿಲೀಪ ಕುಮಾರ್, ಪಾರ್ವತಿ ರಮೇಶ್, ಅರ್ಚನಾ ವೆಂಕಟೇಶ್, ಗೌಸಿಯಾ ಬೇಗಂ. ಸಿಬ್ಬಂದಿ ನರಸಿಂಹಲು, ಉಮೇಶ್ ಗುಡ್ಡದ್, ಸಂತೋಷ್ ಬಿರಾದಾರ್, ಅಲ್ತಾಫ್ ರಸೂಲ್, ಅಶೋಕ ಚನ್ನಕೋಟೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.