ADVERTISEMENT

ಬೊಮ್ಮಗೊಂಡೇಶ್ವರ ಉತ್ಸವಕ್ಕೆ ಭರದ ಸಿದ್ಧತೆ

ಔರಾದ್, ಕಮಲನಗರ ತಾಲ್ಲೂಕು ಸಮಿತಿ ರಚನೆ

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2023, 12:48 IST
Last Updated 22 ಫೆಬ್ರುವರಿ 2023, 12:48 IST
ಬೊಮ್ಮಗೊಂಡೇಶ್ವರ ಉತ್ಸವ ಪ್ರಯುಕ್ತ ಔರಾದ್ ಪಟ್ಟಣದಲ್ಲಿ ನಡೆದ ತಾಲ್ಲೂಕು ಸಮಿತಿ ಪದಾಧಿಕಾರಿಗಳ ಆಯ್ಕೆ ಸಭೆಯಲ್ಲಿ ಸಾಹಿತಿ ಬಾಲಾಜಿ ಅಮರವಾಡಿ ಮಾತನಾಡಿದರು
ಬೊಮ್ಮಗೊಂಡೇಶ್ವರ ಉತ್ಸವ ಪ್ರಯುಕ್ತ ಔರಾದ್ ಪಟ್ಟಣದಲ್ಲಿ ನಡೆದ ತಾಲ್ಲೂಕು ಸಮಿತಿ ಪದಾಧಿಕಾರಿಗಳ ಆಯ್ಕೆ ಸಭೆಯಲ್ಲಿ ಸಾಹಿತಿ ಬಾಲಾಜಿ ಅಮರವಾಡಿ ಮಾತನಾಡಿದರು   

ಬೀದರ್: ಮಾ.12 ರಂದು ನಗರದ ರಂಗ ಮಂದಿರದಲ್ಲಿ ನಡೆಯಲಿರುವ ಬೊಮ್ಮಗೊಂಡೇಶ್ವರ ಉತ್ಸವಕ್ಕೆ ಜಿಲ್ಲಾ ಗೊಂಡ ವಿದ್ಯಾರ್ಥಿ ಸಂಘವು ಭರದ ಸಿದ್ಧತೆ ನಡೆಸಿದೆ. ಉತ್ಸವದ ಯಶಸ್ವಿಗೆ ಪೂರಕವಾಗಿ ತಾಲ್ಲೂಕು ಸಮಿತಿಗಳನ್ನು ರಚಿಸುತ್ತಿದೆ.

ಔರಾದ್ ಹಾಗೂ ಕಮಲನಗರದಲ್ಲಿ ಜಿಲ್ಲಾ ಗೊಂಡ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸಂತೋಷಕುಮಾರ ಜೋಳದಾಪಕೆ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಎರಡೂ ತಾಲ್ಲೂಕುಗಳ ಸಮಿತಿ ರಚಿಸಲಾಯಿತು.

ಬೊಮ್ಮಗೊಂಡೇಶ್ವರರ ಜೀವನ ಮತ್ತು ಸಾಧನೆಗಳನ್ನು ಯುವ ಪೀಳಿಗೆಗೆ ಪರಿಚಯಿಸುವ ದಿಸೆಯಲ್ಲಿ ಹಮ್ಮಿಕೊಂಡಿರುವ ಬೊಮ್ಮಗೊಂಡೇಶ್ವರ ಉತ್ಸವದ ಯಶಸ್ವಿಗೆ ಈಗಾಗಲೇ ಸಿದ್ಧತೆ ಆರಂಭಿಸಲಾಗಿದೆ ಎಂದು ಸಂತೋಷಕುಮಾರ ಜೋಳದಾಪಕೆ ತಿಳಿಸಿದರು.

ADVERTISEMENT

ಭಾಲ್ಕಿ, ಔರಾದ್, ಕಮಲನಗರದಲ್ಲಿ ತಾಲ್ಲೂಕು ಸಮಿತಿಗಳನ್ನು ರಚಿಸಲಾಗಿದೆ. ಇನ್ನುಳಿದ ತಾಲ್ಲೂಕುಗಳಲ್ಲೂ ಸಮಿತಿ ರಚಿಸಲಾಗುವುದು. ಜಿಲ್ಲೆಯ ಪ್ರತಿ ಗ್ರಾಮಗಳಲ್ಲೂ ಉತ್ಸವದ ಪ್ರಚಾರ ಮಾಡಲಾಗುವುದು. ಜನರನ್ನು ಉತ್ಸವಕ್ಕೆ ಆಹ್ವಾನಿಸಲಾಗುವುದು ಎಂದು ಹೇಳಿದರು.

ತಾಲ್ಲೂಕು ಸಮಿತಿಗಳ ಪದಾಧಿಕಾರಿಗಳು ಉತ್ಸವದ ಸಿದ್ಧತಾ ಕಾರ್ಯಗಳಲ್ಲಿ ಸಕ್ರೀಯವಾಗಿ ಭಾಗವಹಿಸಬೇಕು. ಹೆಚ್ಚು ಹೆಚ್ಚು ಜನರನ್ನು ಉತ್ಸವಕ್ಕೆ ಕರೆ ತರಬೇಕು ಎಂದು ಮನವಿ ಮಾಡಿದರು.

ತಾಲ್ಲೂಕು ಘಟಕಗಳ ಪದಾಧಿಕಾರಿಗಳು: ಔರಾದ್: ಬಂಡೆಪ್ಪ ಕೋಟೆ (ಗೌರವಾಧ್ಯಕ್ಷ), ದತ್ತಾತ್ರಿ ಬಾಪುರೆ (ಅಧ್ಯಕ್ಷ), ವಿಲಾಸರಾವ್ ಮೇತ್ರೆ, ಮಲ್ಲಿಕಾರ್ಜುನ ಜಂಬಗಿ (ಉಪಾಧ್ಯಕ್ಷ), ರಾಜಕುಮಾರ ಮುದಾಳೆ (ಕಾರ್ಯದರ್ಶಿ), ಅಂಬರೀಷ್ ಮುದಾಳೆ (ಸಂಘಟನಾ ಕಾರ್ಯದರ್ಶಿ), ವಿಜಯಕುಮಾರ ಬಾಳೂರೆ, ನಾಗನಾಥ ಕೋಟೆ, ಸಂಘಗೊಂಡ ಮೇತ್ರೆ, ಬೀರಪ್ಪ ಮೇತ್ರೆ, ಶಿವಕಾಂತ ರ್ಯಾಕಲೆ, ಲಕ್ಷ್ಮಣ ಭಂಗೆ, ಶ್ರೀಕಾಂತ ಮೇತ್ರೆ, ಸಚಿನ್ ಭಂಗೆ ಮತ್ತು ಅರ್ಜುನ ಭಂಗೆ (ಕಾರ್ಯಕಾರಿಣಿ ಸದಸ್ಯರು).
ಕಮಲನಗರ: ಕಲ್ಲಪ್ಪ ಹುಲಸೂರು (ಗೌರವಾಧ್ಯಕ್ಷ), ಜ್ಞಾನೇಶ್ವರ ಹಿಪ್ಪಳಗಾಂವ್ (ಅಧ್ಯಕ್ಷ), ಓಂಕಾರ ಚಾಂದೊರಿ (ಉಪಾಧ್ಯಕ್ಷ), ಮಲ್ಲಿಕಾರ್ಜುನ ಹೊಳಸಮುದ್ರ (ಕಾರ್ಯದರ್ಶಿ), ನರಸಿಂಗ್ ಮೇತ್ರೆ, ಬಸವರಾಜ ಗುಡಮೆ, ಪರಶುರಾಮ ಮೇತ್ರೆ, ರಾಜಕುಮಾರ ಮಾಳಗೆ, ಅಮೂಲ ಮಾಳಗೆ ಹಾಗೂ ಹಣಮಂತ ಮಾಳಗೆ (ಸಂಘಟನಾ ಕಾರ್ಯದರ್ಶಿ).
ಪದಾಧಿಕಾರಿಗಳ ಆಯ್ಕೆ ಸಭೆಯಲ್ಲಿ ಪ್ರಮುಖರಾದ ರಾಜಕುಮಾರ ಮೇತ್ರೆ, ಗಣಪತಿ ಮೇತ್ರೆ, ಸಂದೀಪ್ ಮೇತ್ರೆ, ಮಾದಪ್ಪ ಕೋಟೆ, ಬಾಲಾಜಿ ಅಮರವಾಡಿ, ಅನಿಲ್ ಚಾಂದೊರಿ, ದಯಾನಂದ ಮೇತ್ರೆ, ವಿಲಾಸ ಖಂಡಿವಾಲೆ, ದೇವಿದಾಸ ಹೊನ್ನಾಳೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.