ADVERTISEMENT

‘ಅಕ್ಕಮಹಾದೇವಿ ಸಂದೇಶ ಸಾರ್ವಕಾಲಿಕ’

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2025, 15:35 IST
Last Updated 12 ಏಪ್ರಿಲ್ 2025, 15:35 IST
ಭಾಲ್ಕಿ ತಾಲ್ಲೂಕಿನ ಹಾಲಹಳ್ಳಿ ಗ್ರಾಮದ ಬೀದರ್ ವಿಶ್ವವಿದ್ಯಾಲಯದಲ್ಲಿ ಶನಿವಾರ ಅಕ್ಕಮಹಾದೇವಿ ಜಯಂತಿ ಆಚರಿಸಲಾಯಿತು
ಭಾಲ್ಕಿ ತಾಲ್ಲೂಕಿನ ಹಾಲಹಳ್ಳಿ ಗ್ರಾಮದ ಬೀದರ್ ವಿಶ್ವವಿದ್ಯಾಲಯದಲ್ಲಿ ಶನಿವಾರ ಅಕ್ಕಮಹಾದೇವಿ ಜಯಂತಿ ಆಚರಿಸಲಾಯಿತು   

ಭಾಲ್ಕಿ: ಕನ್ನಡದ ಪ್ರಥಮ ಕವಯತ್ರಿ, 12ನೇ ಶತಮಾನದ ಪ್ರಮುಖ ವಚನಕಾರ್ತಿ ಅಕ್ಕಮಹಾದೇವಿಯವರ ಜೀವನ ಸಂದೇಶಗಳು ಸಾರ್ವತ್ರಿಕ, ಸಾರ್ವಕಾಲಿಕವಾಗಿ ಸಮಾಜಕ್ಕೆ ದಾರಿದೀಪವಾಗಿ ಕಂಗೊಳಿಸುತ್ತಿವೆ ಎಂದು ಬೀದರ್‌ ವಿಶ್ವವಿದ್ಯಾಲಯದ ಆಡಳಿತ ಕುಲಸಚಿವೆ ಸುರೇಖಾ ಹೇಳಿದರು.

ತಾಲ್ಲೂಕಿನ ಹಾಲಹಳ್ಳಿ ಗ್ರಾಮದಲ್ಲಿರುವ ಬೀದರ್ ವಿಶ್ವವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ವೈರಾಗ್ಯನಿಧಿ ಅಕ್ಕಮಹಾದೇವಿ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಬಸವಾದಿ ಶರಣರು ಈ ಜಗತ್ತಿಗೆ ತಮ್ಮ ವಚನಗಳ ಮೂಲಕ ನೀಡಿದ ದಿವ್ಯ ಸಂದೇಶಗಳು ಇಂದಿಗೂ ಅಜರಾಮರವಾಗಿವೆ. ಅಕ್ಕಮಹಾದೇವಿಯಂತಹ ಹೆಣ್ಣು ಮಗಳು ಅಂದಿನ ಅನುಭವ ಮಂಟಪದಲ್ಲಿ ಸ್ವತಂತ್ರವಾಗಿ ಮಾತನಾಡಿದ್ದು, ಅಂದಿನ ಸ್ತ್ರೀ ಸಮಾನತೆಯನ್ನು ಎತ್ತಿಹಿಡಿಯುತ್ತಿತ್ತು. ಸತ್ವಯುತವಾದ ಅಕ್ಕಮಹಾದೇವಿಯವರ ವಚನಗಳು ಇಂದಿಗೂ ನಿತ್ಯನೂತನವಾಗಿವೆ  ಎಂದು ತಿಳಿಸಿದರು.

ADVERTISEMENT

ವಿಶ್ವವಿದ್ಯಾಲಯದ ವಿಶೇಷಾಧಿಕಾರಿ ರವೀಂದ್ರನಾಥ.ವಿ.ಗಬಾಡಿ ಮಾತನಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.