ADVERTISEMENT

‘ಅಂಬೇಡ್ಕರ್ ಜಯಂತಿ ಸಂಭ್ರಮದಿಂದ ಆಚರಿಸಿ’

ತಹಶೀಲ್ದಾರ್ ಕಚೇರಿಯಲ್ಲಿ ಪೂರ್ವಭಾವಿ ಸಭೆ

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2022, 5:14 IST
Last Updated 5 ಏಪ್ರಿಲ್ 2022, 5:14 IST
ಭಾಲ್ಕಿಯ ತಹಶೀಲ್ದಾರ್ ಕಚೇರಿಯಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಅವರ 131ನೇ ಜಯಂತ್ಯುತ್ಸವದ ಪೂರ್ವಭಾವಿ ಸಭೆ ನಡೆಯಿತು. ಶಾಸಕ ಈಶ್ವರ ಖಂಡ್ರೆ ಇದ್ದರು
ಭಾಲ್ಕಿಯ ತಹಶೀಲ್ದಾರ್ ಕಚೇರಿಯಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಅವರ 131ನೇ ಜಯಂತ್ಯುತ್ಸವದ ಪೂರ್ವಭಾವಿ ಸಭೆ ನಡೆಯಿತು. ಶಾಸಕ ಈಶ್ವರ ಖಂಡ್ರೆ ಇದ್ದರು   

ಭಾಲ್ಕಿ: ಡಾ.ಬಿ.ಆರ್.ಅಂಬೇಡ್ಕರ್ ಅವರ 131ನೇ ಜಯಂತಿ ಪ್ರಯುಕ್ತ ಪಟ್ಟಣದಲ್ಲಿ ಪೂರ್ವಭಾವಿ ಸಭೆ ಜರುಗಿತು.

ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ಶಾಸಕ ಈಶ್ವರ ಖಂಡ್ರೆ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ವಿವಿಧ ಸಂಘ ಸಂಸ್ಥೆಗಳ ಮುಖಂಡರು, ಪ್ರಮುಖರು ಜಯಂತಿ ಯಶಸ್ವಿಗೆ ಹಲವು ಸಲಹೆ–ಸೂಚನೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ಈಶ್ವರ ಖಂಡ್ರೆ ಮಾತನಾಡಿ,‘ಡಾ.ಬಿ.ಆರ್.ಅಂಬೇಡ್ಕರ್ ಅವರು ಸಂವಿಧಾನದ ಮೂಲಕ ದೇಶಕ್ಕೆ ಅದ್ಭುತ ಕೊಡುಗೆ ನೀಡಿದ್ದಾರೆ. ಅಂಥವರ ಜಯಂತಿ ಆಚರಣೆ ಮಾಡುವ ಮೂಲಕ ಯುವ ಪೀಳಿಗೆಗೆ ಅವರ ತತ್ವ, ಸಂದೇಶ ಸಾರುವ ಕೆಲಸ ಆಗಬೇಕಿದೆ’ ಎಂದರು.

ADVERTISEMENT

ಕಳೆದ ನಾಲ್ಕು ವರ್ಷಗಳಿಂದ ಚುನಾವಣೆ ಸೇರಿ ಕೋವಿಡ್ ಕಾರಣದಿಂದ ಅಂಬೇಡ್ಕರ್ ಅವರ ಜಯಂತಿಯನ್ನು ಸರಳವಾಗಿ ಆಚರಿಸಿಕೊಂಡು ಬರಲಾಗಿತ್ತು. ಈ ಬಾರಿ ಕೋವಿಡ್ ಆತಂಕ ದೂರವಾಗಿದೆ. ಹಾಗಾಗಿ, ಏ.14 ರಂದು ನಡೆಯಲಿರುವ ಜಯಂತಿಯನ್ನು ಅರ್ಥಪೂರ್ಣ ಮತ್ತು ಸಂಭ್ರಮದಿಂದ ಆಚರಿಸಲು ತಾಲ್ಲೂಕು ಆಡಳಿತ ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು. ಅಧಿಕಾರಿಗಳು ಸಾಥ್ ನೀಡಬೇಕು’ ಎಂದು ತಿಳಿಸಿದರು.

ತಹಶೀಲ್ದಾರ್ ಕೀರ್ತಿ ಚಾಲಕ್, ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ದೀಪಿಕಾ ನಾಯ್ಕರ್, ನಗರ ಪೊಲೀಸ್ ಠಾಣೆಯ ಸಿಪಿಐ ಸುಶೀಲಕುಮಾರ, ಪ್ರಮುಖರಾದ ವಿಲಾಸ ಮೋರೆ, ಶ್ರಾವಣಕುಮಾರ ಗಾಯಕವಾಡ್, ವಿಶ್ವನಾಥ ಮೋರೆ, ಪ್ರಕಾಶ ಭಾವಿಕಟ್ಟಿ, ಸಂಜೀವಕುಮಾರ ಭಾವಿಕಟ್ಟಿ, ಪ್ರಶಾಂತ ಕೊಟಗೀರಾ, ರಾಹುಲ್ ಬೌದ್ಧೆ, ನಾಗೇಶ ಸಿಂಧೆ, ಮಹೇಂದ್ರ ಪ್ಯಾಗೆ, ಶಿವಕುಮಾರ ಮೋರೆ, ಶಿವಕುಮಾರ ಮೇತ್ರೆ, ರಾಜಭೂಷಣ ಭಾಟಸಾಂಗವಿ, ಮಾಣಿಕಪ್ಪ ರೇಷ್ಮೆ, ಡಾ.ಕಾಶಿನಾಥ, ಪ್ರವೀಣ ಮೋರೆ, ಜೈಪಾಲ್ ಬೋರಾಳೆ ಹಾಗೂ ಧನರಾಜ ಕುಂದೆ ಇದ್ದರು.

ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಸತೀಶ ಸಂಗನ್ ಸ್ವಾಗತಿಸಿದರು. ದೀಪಕ ಠಮಕೆ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.