ಬಸವಕಲ್ಯಾಣ: ‘ವಿವಿಧ ಕಾರ್ಯಕ್ರಮಗಳ ಮೂಲಕ ಬಾಬಾಸಾಹೇಬ್ ಅಂಬೇಡ್ಕರ್ ಕುರಿತು ಜಾಗೃತಿ ಮೂಡಿಸಲಾಗಿದ್ದು ವಿರೋಧಿಗಳ ಮನಸ್ಸು ಸಹ ಪರಿವರ್ತನೆ ಆಗುವಂಥ ವಾತಾವರಣ ನಿರ್ಮಾಣಗೊಂಡಿದೆ’ ಎಂದು ಸಮಾಜ ಕಲ್ಯಾಣ ಸಚಿವ ಎಚ್.ಸಿ.ಮಹಾದೇವಪ್ಪ ಹೇಳಿದರು.
ತಾಲ್ಲೂಕಿನ ಹಿರೇನಾಗಾಂವದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ಅನಾವರಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಬಸವಕಲ್ಯಾಣದವರೆಗೆ ನಡೆದ ಪ್ರಜಾಪ್ರಭುತ್ವ ಉಳಿವಿನ ಮಾನವ ಸರಪಳಿ ನಿರ್ಮಾಣ ಅಭಿಯಾನ, ಸಂವಿಧಾನ ಪೀಠಿಕೆಯ ಓದು ಹಾಗೂ ಇತರೆ ಸಮಾವೇಶಗಳನ್ನು ಸರ್ಕಾರದಿಂದ ಆಯೋಜಿಸಲಾಗಿತ್ತು. ಹೀಗಾಗಿ ಅನೇಕರ ದೃಷ್ಟಿ ಸಂವಿಧಾನದೆಡೆಗೆ ಮತ್ತು ಅಂಬೇಡ್ಕರ್ ಕಡೆಗೆ ಹೊರಳಿದೆ. ರಾಜಕೀಯ ಪಕ್ಷಗಳು ಸಹ ಎಚ್ಚೆತ್ತುಕೊಂಡು ಸಂವಿಧಾನದ ಮಹತ್ವ ಸಾರುವಂತಾಗಿದೆ’ ಎಂದರು.
‘ಅಂಬೇಡ್ಕರ್ ಅವರು ಶೋಷಿತರಿಗೆ ಸ್ವಾಭಿಮಾನದ ಬದುಕು ನೀಡಿದ್ದಾರೆ. ಆದರೂ, ಶಿಕ್ಷಣ, ಉದ್ಯೋಗದಿಂದ ಅನೇಕರು ವಂಚಿತರಾಗಿದ್ದಾರೆ. ಅಸ್ಪೃಶ್ಯತೆ, ಬಹಿಷ್ಕಾರದಂಥ ಘಟನೆಗಳು ನಡೆಯುತ್ತಿದ್ದು, ಈ ಸಮಸ್ಯೆಗಳನ್ನು ಹೋಗಲಾಡಿಸಲು ಪ್ರಯತ್ನಿಸಬೇಕಾಗಿದೆ’ ಎಂದರು.
ಬಾಬಾಸಾಹೇಬ್ ಅಂಬೇಡ್ಕರ್ ಅವರು ಶೋಷಿತ ಸಮುದಾಯದ ಘನತೆ ಗೌರವದ ಬದುಕಿಗೆ ಪ್ರೇರಣಾ ಶಕ್ತಿ ಆಗಿದ್ದಾರೆ. ಅವರ ಸಂದೇಶದ ಪಾಲನೆ ಅಗತ್ಯವಾಗಿದೆ.- ಎಚ್.ಸಿ.ಮಹಾದೇವಪ್ಪ ಸಚಿವರು
ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಘಟಕದ ಅಧ್ಯಕ್ಷ ಡಿ.ಜಿ.ಸಾಗರ ಅಧ್ಯಕ್ಷತೆ ವಹಿಸಿದ್ದರು.
ವಿಧಾನ ಪರಿಷತ್ ಸದಸ್ಯ ಎಂ.ಜಿ.ಮುಳೆ, ಮಾಜಿ ಸಚಿವ ರಾಜಶೇಖರ ಪಾಟೀಲ, ಮೀನುಗಾರಿಕೆ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಾಲಾ ನಾರಾಯಣರಾವ್, ದಲಿತ ಸಂಘರ್ಷ ಸಮಿತಿ ರಾಜ್ಯ ಸಂಘಟನಾ ಸಂಚಾಲಕ ಮಾರುತಿ ಬೌದ್ಧೆ, ತಾಲ್ಲೂಕು ಸಂಚಾಲಕ ವಾಮನ ಮೈಸಲಗೆ, ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷ ಮಲ್ಲಿಕಾರ್ಜುನ ಮಾಲೆ, ಸುರೇಶ ಹಾದಿಮನಿ, ಅಂಬೇಡ್ಕರ್ ವೈಸ್ ಸಂಘಟನೆ ಅಧ್ಯಕ್ಷ ಸುರೇಶ ಮೋರೆ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸವಿತಾ ಕಾಂಬಳೆ, ಜಯಶಾಂತಲಿಂಗ ಸ್ವಾಮೀಜಿ, ಮಿಲಿಂದ ಗುರೂಜಿ, ರವೀಂದ್ರ ಪ್ರತಾಪುರ, ಲೋಕೇಶ ಮಹಾರಾಜ, ಉದಯಕುಮಾರ ರಾಂಬಾಣ, ರಮೇಶ ಉಮಾಪುರೆ, ಶಂಭುಲಿಂಗ ದೇವಕರ್, ಸಂಜೀವಕುಮಾರ, ನಾಗಣ್ಣ ಘಾಂಗ್ರೆ, ಪ್ರೇಮಕುಮಾರ ಬುಡಕೆ, ಈಶ್ವರ ರಾಂಬಾಣ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.