ADVERTISEMENT

ಐಟಿಐನಲ್ಲಿ ಬೃಹತ್ ರಾಷ್ಟ್ರೀಯ ಅಪ್ರಂಟಿಷಿಪ್ ಮೇಳ ಅ.4ಕ್ಕೆ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2021, 5:59 IST
Last Updated 3 ಅಕ್ಟೋಬರ್ 2021, 5:59 IST

ಬೀದರ್‌: ಇಲ್ಲಿಯ ಸರ್ಕಾರಿ ಕೈಗಾರಿಕೆ ತರಬೇತಿ ಸಂಸ್ಥೆಯ ಆವರಣದಲ್ಲಿ (ಐಟಿಐ) ಅ.4ರಂದು ಬೆಳಿಗ್ಗೆ 9:30 ರಿಂದ ಸಂಜೆ 6 ಗಂಟೆಯವರೆಗೆ ಬೃಹತ್ ರಾಷ್ಟ್ರೀಯ ಅಪ್ರಂಟಿಷಿಪ್ ಮೇಳ ಏರ್ಪಡಿಸಲಾಗಿದೆ.

ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವಾಣ್ ಮೇಳ ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮ ಶೀಲತೆ ಜೀವನೋಪಾಯ ಇಲಾಖೆ ಸಚಿವ ಸಿ.ಎನ್. ಅಶ್ವತ್ ನಾರಾಯಣ್ ಹಾಗೂ ಕೇಂದ್ರ ನವೀಕರಿಸಬಹುದಾದ ಇಂಧನಮೂಲ, ರಾಸಾಯನಿಕ ಹಾಗೂ ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ, ಪಾಲ್ಗೊಳ್ಳುವರು.‌

ಶಾಸಕ ರಹೀಂ ಖಾನ್ ಅಧ್ಯಕ್ಷತೆ ವಹಿಸಲಿದ್ದಾರೆ. ಅತಿಥಿಗಳಾಗಿ ರಾಜ್ಯ ಕೈಗಾರಿಕಾ ಮತ್ತು ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಶೈಲೇಂದ್ರ ಬೆಲ್ದಾಳೆ, ಜಿಲ್ಲೆಯ ಶಾಸಕರು, ವಿಧಾನ ಪರಿಷತ್ ಸದಸ್ಯರು, ಕೌಶಲ್ಯ ಅಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಸ್ ಸೆಲ್ವಕುಮಾರ, ಕೈಗಾರಿಕಾ ಮತ್ತು ಉದ್ಯೋಗ ಇಲಾಖೆಯ ಆಯುಕ್ತ ಹರೀಶಕುಮಾರ ಕೆ., ಜಿಲ್ಲಾಧಿಕಾರಿ ರಾಮಚಂದ್ರನ್ ಆರ್. ಜಿಲ್ಲಾ ಪಂಚಾಯಿತಿ ಸಿಇಒ ಜಹೀರಾ ನಸೀಂ, ಪೊಲೀಸ್ ವರಿಷ್ಠಾಧಿಕಾರಿ ನಾಗೇಶ ಡಿ.ಎಲ್. ಹಾಗೂ ಕಲಬುರ್ಗಿ ವಿಭಾಗಿಯ ಜಂಟಿ ನಿರ್ದೇಶಕ ರವೀಂದ್ರನಾಥ ಬಳ್ಳಿ ಭಾಗವಹಿಸಲಿದ್ದಾರೆ.

ADVERTISEMENT

ಐಟಿಐನಲ್ಲಿ ಓದಿದ ಅಪ್ರಂಟಿಷಿಪ್ ತರಬೇತಿಯಿಂದ ವಂಚಿತರಾದವರು ಹಾಗೂ ಐಟಿಐ ಪರೀಕ್ಷೆ ಬರೆಯುವವರು ಎಲ್ಲ ಮೂಲ ದಾಖಲಾತಿಗಳೊಂದಿಗೆ ಹತ್ತು ಸೆಟ್ ಝರಾಕ್ಸ್‌ ಪ್ರತಿಗಳೊಂದಿಗೆ ಅ.4ರಂದು ಬೆಳಿಗ್ಗೆ 10 ಗಂಟೆಗೆ ಹೆಸರು ನೋಂದಾಯಿಸಿಕೊಳ್ಳಬೇಕು.

ಮೇಳದಲ್ಲಿ ಬೆಂಗಳೂರಿನ ಬಿಇಎಲ್, ಹೈದರಾಬಾದ್‌ನ ಮಹೀಂದ್ರ, ಟಾಟಾ ಅಡ್ವಾನ್ಸ್ ಸಿಸ್ಟಂ, ರಾಣಿ ಮಡ್ರಾಸ್ ಇಂಡಸ್ಟ್ರೀಸ್, ಇನ್‍ಫೋಸೋರ್ಸ್, ತೋಶಿಬಾ, ಹೈದರಾಬಾದ್‌ನ ರ್‍ಯಾಂಡ್ ಸ್ಟ್ಯಾಂಡ್, ರೀಡ್ ಮ್ಯಾನೇಜ್‌ಮೆಂಟ್, ಇನ್ಫೋಸೋರ್ಸ್ ಸಂಗಾರೆಡ್ಡಿ, ಔರಂಗಾಬಾದ್‌ನ ಧೂತ್ ಟ್ರಾನ್ಸ್‌ಮಿಶನ್ ಹಾಗೂ ಬೀದರ್‌ನ ಅಟೊ ಕ್ಲಸ್ಟರ್, ಜಿಯೋಡೆಸ್ಕ್ ಹಾಗೂ ನಗರದ ವಿವಿಧ ಅಟೊಮೊಬೈಲ್ ಶೋರೂಮಗಳ ಮಾನವ ಸಂಪನ್ಮೂಲ ಅಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ ಎಂದು ಜಿಲ್ಲಾ ನೋಡಲ್‌ ಅಧಿಕಾರಿ ಶಿವಶಂಕರ ಟೋಕರೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.