ADVERTISEMENT

ಬೀದರ್‌ ಭೇಟಿ ನೀಡಿದ ಬಾಬಾ ಗಜೇಂದ್ರಸಿಂಗ್‌

ಸಾಹಸ ಪ್ರದರ್ಶನ ನೀಡಿದ ಸಿಖ್‌ರ ಅಶ್ವದಳ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2021, 13:38 IST
Last Updated 17 ಅಕ್ಟೋಬರ್ 2021, 13:38 IST
ಬೀದರ್‌ನ ಗುರುದ್ವಾರ ಸಮೀಪದ ಮೈದಾನದಲ್ಲಿ ಭಾನುವಾರ ಜೋಡು ಕುದುರೆ ಮೇಲೆ ಸವಾರಿ ಮಾಡಿ ಗಮನ ಸೆಳೆದ ಸಿಖ್‌ರು
ಬೀದರ್‌ನ ಗುರುದ್ವಾರ ಸಮೀಪದ ಮೈದಾನದಲ್ಲಿ ಭಾನುವಾರ ಜೋಡು ಕುದುರೆ ಮೇಲೆ ಸವಾರಿ ಮಾಡಿ ಗಮನ ಸೆಳೆದ ಸಿಖ್‌ರು   

ಬೀದರ್‌: ಪಂಜಾಬದ ಅಮೃತಸರದಲ್ಲಿರುವ ಬಾಬಾ ಬಕಾಲಾ ಸಾಹಿಬ್‌ ಗುರುದ್ವಾರದ ಬಾಬಾ ಬಕಾಲಾಸಾಹೇಬ ಮಿಷನ್‌ ಸಂಹಿತಾದ 15ನೇ ಮುಖ್ಯಸ್ಥ ಬಾಬಾ ಗಜೇಂದ್ರಸಿಂಗ್‌ ಭಾನುವಾರ ಇಲ್ಲಿಯ ಗುರುದ್ವಾರಕ್ಕೆ ಭೇಟಿ ನೀಡಿದರು.

ಅಮೃತಸರ್‌ದಿಂದ ಮಹಾರಾಷ್ಟ್ರದ ನಾಂದೇಡ್‌ದ ಗುರುದ್ವಾರಕ್ಕೆ ಬಂದಿದ್ದ ಬಾಬಾ ಗಜೇಂದ್ರಸಿಂಗ್‌ ಅವರು ಭಕ್ತರ ಮನವಿ ಮೇರೆಗೆ ಅಶ್ವದಳದೊಂದಿಗೆ ಇಲ್ಲಿಗೆ ಬಂದಿದ್ದರು. ಭಕ್ತರು ಅವರಿಂದ ಆಶೀರ್ವಾದ ಪಡೆದರು.

ಸಿಖ್‌ರ ಅಶ್ವ ದಳ ಗುರುದ್ವಾರ ಸಮೀಪದ ಮೈದಾನದಲ್ಲಿ ಹಲವು ಸಾಹಸ ಪ್ರದರ್ಶನ ನೀಡಿತು. ಕೆಲ ಯುವಕರು ಜೋಡು ಕುದುರೆ ಮೇಲೆ ನಿಂತು ಸವಾರಿ ಮಾಡಿ ಮೈನವಿರೇಳುವಂತೆ ಮಾಡಿದರೆ, ಇನ್ನು ಕೆಲ ಯುವಕರು ಆರ್ಭಟದೊಂದಿಗೆ ಕತ್ತಿ ವರಸೆ ಪ್ರದರ್ಶನ ನೀಡಿದರು.

ADVERTISEMENT

ಗುರುದ್ವಾರ ಪ್ರಬಂಧಕ ಕಮಿಟಿ ಪದಾಧಿಕಾರಿಗಳು ಪ್ರದರ್ಶನಕ್ಕೆ ಸಕಲ ವ್ಯವಸ್ಥೆ ಮಾಡಿದ್ದರು. ಸಿಖ್‌ರು ಬಾಬಾ ಗಜೇಂದ್ರಸಿಂಗ್‌ ಅವರ ಆಶೀರ್ವಾದ ಪಡೆದುಕೊಂಡರು. ಆಶ್ವದಳ ಸಂಜೆ ಮತ್ತೆ ನಾಂದೇಡ್‌ಗೆ ಪ್ರಯಾಣ ಬೆಳೆಸಿತು.

ಸಿಖ್‌ ಸಮುದಾಯದ ಪ್ರಮುಖರಾದ ಬಲಬೀರ್‌ ಸಿಂಗ್, ದರ್ಬಾರಾ ಸಿಂಗ್, ಮನಪ್ರೀತ್‌ ಸಿಂಗ್‌ ಬಂಟಿ, ಜಸ್ಪ್ರೀತ್ ಸಿಂಗ್ ಮೊಂಟಿ ಮೊದಲಾದವರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.