ಕಮಲನಗರ: ‘ಕನ್ನಡ ಮಣ್ಣಿನಲ್ಲಿ ಜನಿಸಿದ ಬಾಳುಮಾವ ಮಹಾರಾಜ ಅವರು ಕುರಿ ಕಾಯುತ್ತ ಅನೇಕ ರೀತಿ ಪವಾಡ ಮಾಡಿದ ಸಂತ’ ಎಂದು ಸಂತೋಷ ಖಿಂಡಿವಾಲೆ ಹೇಳಿದರು.
ತಾಲ್ಲೂಕಿನ ಮುರ್ಕಿ ಗ್ರಾಮದ ಖಂಡೋಬಾ ಮಂದಿರದಲ್ಲಿ ಸೋಮವಾರ ಬಾಳುಮಾಮ ಮಹಾರಾಜ ಅವರ ಜಯಂತ್ಯುತ್ಸವ ಪ್ರಯುಕ್ತ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಬೆಳಗಾಂವ ಜಿಲ್ಲೆಯ ಚಿಕ್ಕೋಡಿ ಬಳಿಯ ಅಕ್ಕೋಲ್ ಎಂಬ ಗ್ರಾಮದಲ್ಲಿ ಕುರುಬ ಜನಾಂಗದಲ್ಲಿ ಜನಿಸಿದ ಮಹಾರಾಜರು ತಮ್ಮ ಬಳಿ ಸಹಾಯ ಬೇಡಿ ಬಂದ ಭಕ್ತರಿಗೆ ಉದ್ದಾರ ಮಾಡಿದ ಪವಾಡ ಪುರುಷರು. ಕುರಿ ಹಾಲಿನಿಂದ ಜನರ ಕಣ್ಣು ಬರಿಸಿದ ಶಿವನ ಅವತಾರ ಪುರುಷರಲ್ಲಿ ಒಬ್ಬರು’ ಎಂದರು.
ನಂತರ ಬಾಳುಮಾಮ ಮಹಾರಾಜರ ಭವ್ಯ ಭಾವಚಿತ್ರದ ಮೆರವಣಿಗೆ ನಡೆಯಿತು. ಮೆರವಣಿಗೆ ಖಂಡೋಬಾ ಮಂದಿರದಿಂದ ಹೊರಟು ಬಸವ ಮಂಟಪ, ಬಸ್ ನಿಲ್ದಾಣ ಮೂಲಕ ಪ್ರಮುಖ ಬೀದಿಗಳಲ್ಲಿ ಸಂಚರಿಸಿತ್ತು. ಡಿಜೆ ಸಂಗೀತಕ್ಕೆ ತಕ್ಕಂತೆ ಮಹಿಳೆ, ಮಕ್ಕಳು ಮತ್ತು ಯುವಕರು ಹೆಜ್ಜೆ ಹಾಕಿ ಕುಣಿದು ಕುಪ್ಪಳಿಸಿದರು.
ಈ ವೇಳೆ ಗ್ರಾಮದ ಹಣಮಂತ ಖಿಂಡಿವಾಲೆ, ಶತೃಘನ್ ಪಂಡರೆ, ವಿಜಯಕುಮಾರ ಮೇತ್ರೆ, ದಾಮೋದರ ಮೋಹಾರೆ, ಸೋಮನಾಥ ಪಂಡರೆ, ಮಚ್ಛೇಂದ್ರ ಪಂಡರೆ, ರಾಮಕಿಶನ ರಾಯಗೊಂಡ, ಇಂದ್ರಜೀತ ಪಂಡರೆ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.