ADVERTISEMENT

ಬಸವಕಲ್ಯಾಣ: ಸೌಹಾರ್ದಕ್ಕಾಗಿ ಮಲ್ಲಯ್ಯ ಮುತ್ತ್ಯಾ ಯಾತ್ರೆ

ಕೂಡಲಸಂಗಮದಿಂದ ಬಸವಕಲ್ಯಾಣದವರೆಗಿನ ಪಾದಯಾತ್ರೆ ಸಮಾರೋಪ: ಶಾಸಕ ಭಾಗಿ

​ಪ್ರಜಾವಾಣಿ ವಾರ್ತೆ
Published 31 ಮೇ 2022, 3:52 IST
Last Updated 31 ಮೇ 2022, 3:52 IST
ಬಸವಕಲ್ಯಾಣದಲ್ಲಿ ಸೋಮವಾರ ಮಲ್ಲಯ್ಯ ಮುತ್ತ್ಯಾ ಅವರ ಪಾದಯಾತ್ರೆಯಲ್ಲಿ ಬಸವೇಶ್ವರರ ಪುತ್ಥಳಿಯ ಮೇಲೆ ಪುಷ್ಪವೃಷ್ಟಿಗೈಯಲಾಯಿತು. ಶಾಸಕ ಶರಣು ಸಲಗರ ಪಾಲ್ಗೊಂಡಿದ್ದರು
ಬಸವಕಲ್ಯಾಣದಲ್ಲಿ ಸೋಮವಾರ ಮಲ್ಲಯ್ಯ ಮುತ್ತ್ಯಾ ಅವರ ಪಾದಯಾತ್ರೆಯಲ್ಲಿ ಬಸವೇಶ್ವರರ ಪುತ್ಥಳಿಯ ಮೇಲೆ ಪುಷ್ಪವೃಷ್ಟಿಗೈಯಲಾಯಿತು. ಶಾಸಕ ಶರಣು ಸಲಗರ ಪಾಲ್ಗೊಂಡಿದ್ದರು   

ಬಸವಕಲ್ಯಾಣ: ‘ನಿರ್ಗುಡಿ ಮಲ್ಲಯ್ಯ ಮುತ್ತ್ಯಾ ಅವರು ಸಮಾಜದಲ್ಲಿ ಸೌಹಾರ್ದ ವಾತಾವರಣ ನಿರ್ಮಾಣಕ್ಕಾಗಿ ಹಾಗೂ ರಾಷ್ಟ್ರಭಕ್ತಿ ಬೆಳೆಸುವ ಧ್ಯೇಯದಿಂದ ಪಾದಯಾತ್ರೆ ಕೈಗೊಂಡಿದ್ದಾರೆ’ ಎಂದು ಶಾಸಕ ಶರಣು ಸಲಗರ ಹೇಳಿದ್ದಾರೆ.

ನಗರದ ತೇರು ಮೈದಾನದಲ್ಲಿನ ಸಭಾಭವನದಲ್ಲಿ ಸೋಮವಾರ ಜೈ ಭಾರತ ಮಾತಾ ಸೇವಾ ಸಮಿತಿ ಆಯೋಜಿಸಿದ್ದ ನಿರ್ಗುಡಿ ಮಲ್ಲಯ್ಯ ಮುತ್ತ್ಯಾ ಅವರು ಬಸವ ಜಯಂತಿ ಅಂಗವಾಗಿ ಬಸವಣ್ಣನವರ ಜನ್ಮಭೂಮಿ ಬಸವನ ಬಾಗೇವಾಡಿಯಿಂದ ಕಾರ್ಯಕ್ಷೇತ್ರ ಬಸವಕಲ್ಯಾಣದವರೆಗೆ ನಡೆಸಿದ ಪಾದಯಾತ್ರೆಯ ಸಮಾರೋಪದಲ್ಲಿ ಅವರು ಮಾತನಾಡಿದರು.
‘ಸತ್ಪುರುಷರ, ರಾಷ್ಟ್ರಭಕ್ತರ ಪುತ್ಥಳಿಗಳನ್ನು ಪಾದಯಾತ್ರೆಯಲ್ಲಿ ಕೊಂಡೊಯ್ಯುವ ಮೂಲಕ ದೇಶದ ಸುಭದ್ರತೆಗಾಗಿ ಪ್ರೇರಣೆ ನೀಡಲಾಗಿದೆ. ಭಗತ್‌ಸಿಂಗ್, ಸಂಗೊಳ್ಳಿ ರಾಯಣ್ಣ, ಕಿತ್ತೂರು ರಾಣಿ ಚೆನ್ನಮ್ಮ ನಾಡಿನ ಸ್ವಾತಂತ್ರ್ಯ ಮತ್ತು ಸುರಕ್ಷತೆಗಾಗಿ ಪ್ರಾಣಾರ್ಪಣೆ ಮಾಡಿದ್ದಾರೆ’ ಎಂದು ಅವರು ಹೇಳಿದರು.

ನಿರ್ಗುಡಿ ಮಲ್ಲಯ್ಯ ಮುತ್ತ್ಯಾ ನೇತೃತ್ವ ವಹಿಸಿದ್ದರು. ಮಾಜಿ ಸಚಿವ ಡಾ.ಶರಣಪ್ರಕಾಶ ಪಾಟೀಲ, ಜೈ ಭಾರತ ಮಾತಾ ಸೇವಾ ಸಮಿತಿ ಅಧ್ಯಕ್ಷ ಗುಂಡುರೆಡ್ಡಿ ಕಮಲಾಪುರೆ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಅನಿಲ ಭೂಸಾರೆ, ಕಾಂಗ್ರೆಸ್ ಮುಖಂಡರಾದ ಮಾಲಾ ನಾರಾಯಣರಾವ್, ರವಿ ಗಾಯಕವಾಡ, ಬಾಬು ಹೊನ್ನಾನಾಯಕ್, ದಲಿತ ಸಂಘರ್ಷ ಸಮಿತಿ ಜಿಲ್ಲಾ ಘಟಕದ ಅಧ್ಯಕ್ಷ ಮಾರುತಿ ಬೌದ್ಧೆ, ರತಿಕಾಂತ ಕೊಹಿನೂರ, ಜೆಡಿಎಸ್ ಮುಖಂಡ ಯಶ್ರಬ ಅಲಿ ಖಾದ್ರಿ, ಬಸವಣ್ಣಪ್ಪ ನೆಲ್ಲಗಿ, ಸಂಜೀವ ಸಂಗನೂರೆ, ರಾಜೀವ ಪಾಟೀಲ ಹಳ್ಳಿ, ಸಂಜೀವ ಶ್ರೀವಾಸ್ತವ, ಮನೋಜಕುಮಾರ ಮಾಶೆಟ್ಟೆ, ಜೀತೇಂದ್ರ ಧಾಮಿ, ಸೈಯದ್ ಹುಸೇನ್, ವೈಜನಾಥ ಝಳಕಿ, ವಿಕಾಸ ಪಾಟೀಲ, ಭಕ್ತ ಕುಂಬಾರ ಮೊದಲಾದವರು ಉಪಸ್ಥಿತರಿದ್ದರು.

ADVERTISEMENT

ರಾಷ್ಟ್ರೀಯ ಹೆದ್ದಾರಿಯಿಂದ ಬಂದ ಪಾದಯಾತ್ರೆಗೆ ಸಸ್ತಾಪುರ ಬಂಗ್ಲಾ ಹತ್ತಿರದಲ್ಲಿ ಭವ್ಯವಾಗಿ ಸ್ವಾಗತಿಸಲಾಯಿತು. ಏಳು ಕಿ.ಮೀ ವರೆಗೆ ಪಾದಯಾತ್ರೆ ನಡೆಯಿತು. ತ್ರಿಪುರಾಂತ ಮಡಿವಾಳ ವೃತ್ತದಲ್ಲಿ ಜೆಸಿಬಿ ಯಂತ್ರಗಳಿಂದ ಮೆರವಣಿಗೆಯಲ್ಲಿನ ಪುತ್ಥಳಿಗಳ ಮೇಲೆ ಹಾಗೂ ಪಾಲ್ಗೊಂಡವರ ಮೇಲೆ ಪುಷ್ಪವೃಷ್ಟಿಗೈಯಲಾಯಿತು. ವಾದ್ಯ ಮೇಳದವರು ಪಾಲ್ಗೊಂಡಿದ್ದರು. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.