ಬಸವಕಲ್ಯಾಣ: ತಂದೆಯನ್ನೇ ಕೊಲೆ ಮಾಡಿ ಬಂಧನಕ್ಕೊಳಗಾಗಿ ನಂತರ ಜಾಮೀನಿನ ಮೇಲೆ ಬಿಡುಗಡೆಗೊಂಡು ಪೊಲೀಸರ ಕಣ್ತಪ್ಪಿಸಿ ಓಡಾಡುತ್ತಿದ್ದ ಮಹೇಶ ಕಲ್ಯಾಣಿ ಎಂಬ ಆರೋಪಿಯನ್ನು ಗುರುವಾರ ಮತ್ತೆ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.
ಕೊಹಿನೂರವಾಡಿ ಗ್ರಾಮದ ಮಹೇಶ 2022ರಲ್ಲಿ ತಂದೆಯ ಕೊಲೆಗೈದು ಸಮೀಪದ ಅಟ್ಟೂರ್ ಕ್ರಾಸ್ ಬಳಿ ದೇಹ ಬೀಸಾಕಿದ್ದ. ನಂತರ ಪರಾರಿ ಆಗಿದ್ದ ಈತನನ್ನು ಬಂಧಿಸಲಾಗಿತ್ತು. ಆದರೆ, ಜಾಮೀನಿನ ಬಿಡುಗಡೆಗೊಂಡ ನಂತರದಲ್ಲಿ ನ್ಯಾಯಾಲಯಕ್ಕೆ ಹಾಜರಾಗಿರಲಿಲ್ಲ.
ಮತ್ತೆ ಹುಡುಕಾಟ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ. ಮಂಠಾಳ ಠಾಣೆ ಸಬ್‌ಇನ್‌ಸ್ಪೆಕ್ಟರ್ ಸುವರ್ಣಾ ಮಲಶೆಟ್ಟಿ ನೇತೃತ್ವದಲ್ಲಿ ಶ್ರೀನಿವಾಸ, ಸತೀಶ ಮತ್ತು ಮಲ್ಲಿನಾಥ ಅವರು ಈತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.