ADVERTISEMENT

ಮಾನಸಿಕ ಅಸ್ವಸ್ಥರಿಗೆ ಸ್ನಾನ, ಹೊಸಬಟ್ಟೆ

ನಗರಸಭೆ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2020, 3:54 IST
Last Updated 8 ನವೆಂಬರ್ 2020, 3:54 IST
ಬಸವಕಲ್ಯಾಣದಲ್ಲಿ ಶುಕ್ರವಾರ ನಗರಸಭೆ ಆಯುಕ್ತರ ನೇತೃತ್ವದಲ್ಲಿ ಮಾನಸಿಕ ಅಸ್ವಸ್ಥರಿಗೆ ಸ್ನಾನ ಮಾಡಿಸಲಾಯಿತು
ಬಸವಕಲ್ಯಾಣದಲ್ಲಿ ಶುಕ್ರವಾರ ನಗರಸಭೆ ಆಯುಕ್ತರ ನೇತೃತ್ವದಲ್ಲಿ ಮಾನಸಿಕ ಅಸ್ವಸ್ಥರಿಗೆ ಸ್ನಾನ ಮಾಡಿಸಲಾಯಿತು   

ಬಸವಕಲ್ಯಾಣ: ನಗರಸಭೆ ಆಯುಕ್ತ ಗೌತಮಬುದ್ಧ ಕಾಂಬಳೆ ಹಾಗೂ ಸಿಬ್ಬಂದಿಯವರು ಶುಕ್ರವಾರ ಇಲ್ಲಿನ ರಸ್ತೆ ಹಾಗೂ ಓಣಿಗಳಲ್ಲಿ ತಿರುಗಾಡುತ್ತಿದ್ದ ಮಾನಸಿಕ ಅಸ್ವಸ್ಥರ ತಲೆಗೂದಲು ಕತ್ತರಿಸಿ, ಸ್ನಾನ ಮಾಡಿಸಿ ಹೊಸ ಬಟ್ಟೆಗಳನ್ನು ತೊಡಿಸಿದರು.

ಮುಖ್ಯ ರಸ್ತೆ, ಅಡತ್ ಬಜಾರ್, ಅಂಬೇಡ್ಕರ್ ವೃತ್ತ ಮುಂತಾದೆಡೆ ತಿರುಗುತ್ತಿದ್ದ ಮಾನಸಿಕ ಅಸ್ವಸ್ಥರ ತಲೆಗೂದಲು ಉದ್ದುದ್ದ ಬೆಳೆದಿದ್ದವು. ಬಟ್ಟೆ, ಮೈಗೆ ಮಣ್ಣು ಹತ್ತಿ ಹೊಲಸಾಗಿತ್ತು. ಸಮೀಪ ನಿಂತರೆ ದುರ್ವಾಸನೆ ಬರುತ್ತಿತ್ತು. ಅಂಥವರನ್ನು ಸಿಬ್ಬಂದಿಯವರು ಹಿಡಿದು ಸ್ವಚ್ಛಗೊಳಿಸುತ್ತಿರುವುದನ್ನು ಜನರು ನೆರೆದು ಸೊಜಿಗದಿಂದ ನೋಡಿದರು.

‘ಎಲ್ಲರೂ ದೀಪಾವಳಿ ಹಬ್ಬವನ್ನು ಸಂತಸ, ಸಂಭ್ರಮದಿಂದ ಆಚರಿಸುತ್ತಾರೆ. ಮಾನಸಿಕ ಅಸ್ವಸ್ಥರು ಕೂಡ ಸಂತಸದಿಂದ ಇರಲಿ ಎಂಬ ಉದ್ದೇಶದಿಂದ ಅವರ ಮೈ ತೊಳೆದು ಹೊಸ ಬಟ್ಟೆ ತೊಡಿಸಲಾಯಿತು’ ಎಂದು ಪೌರಾಯುಕ್ತರು ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.