ADVERTISEMENT

’ರೋಗ ಬುರುವ ಮುನ್ನ ಜಾಗ್ರತೆವಹಿಸಿ’

ಆನೆಕಾಲು ರೋಗ ನಿರ್ಮೂಲನೆ ಮಾತ್ರೆ ವಿತರಣೆ

​ಪ್ರಜಾವಾಣಿ ವಾರ್ತೆ
Published 6 ನವೆಂಬರ್ 2019, 14:47 IST
Last Updated 6 ನವೆಂಬರ್ 2019, 14:47 IST
ಆರೋಗ್ಯ ಇಲಾಖೆಯಿಂದ ಸೋನಾಳ ಸರ್ಕಾರಿ ಪ್ರೌಢ ಶಾಲೆಯಲ್ಲಿ ಆಯೋಜಿಸಿದ್ದ ಆನೆಕಾಲು ರೋಗ ಮಾತ್ರೆ ವಿತರಣೆ ಕಾರ್ಯಕ್ರಮದಲ್ಲಿ ಬಂಟಿ ರಾಂಪೂರೆ ಮಾತನಾಡಿದರು.
ಆರೋಗ್ಯ ಇಲಾಖೆಯಿಂದ ಸೋನಾಳ ಸರ್ಕಾರಿ ಪ್ರೌಢ ಶಾಲೆಯಲ್ಲಿ ಆಯೋಜಿಸಿದ್ದ ಆನೆಕಾಲು ರೋಗ ಮಾತ್ರೆ ವಿತರಣೆ ಕಾರ್ಯಕ್ರಮದಲ್ಲಿ ಬಂಟಿ ರಾಂಪೂರೆ ಮಾತನಾಡಿದರು.   

ಕಮಲನಗರ: ‘ರೋಗ ಬಂದ ಬಳಿಕ ಚಿಕಿತ್ಸೆ ಪಡೆಯುವುದಕ್ಕಿಂತ ರೋಗ ಬಾರದಂತೆ ಮುನ್ನೆಚ್ಚರಿಕೆ ವಹಿಸುವುದು ಅಗತ್ಯ’ ಎಂದು ಶಿಕ್ಷಕ ಬಂಟಿ ರಾಮಪೂರೆ ಅಭಿಪ್ರಾಯಪಟ್ಟರು.

ತಾಲ್ಲೂಕಿನ ಸೋನಾಳ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಮಂಗಳವಾರ ಆರೋಗ್ಯ ಇಲಾಖೆ ವತಿಯಿಂದ ನಡೆದ ಆನೆಕಾಲು ರೋಗ ಮಾತ್ರೆ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಆನೆಕಾಲು ರೋಗವು ಸೊಳ್ಳೆಗಳಿಂದ ಹರಡುತ್ತದೆ. ಇದು ಸಾಂಕ್ರಾಮಿಕ ರೋಗವಾಗಿದ್ದು, ಒಬ್ಬರಿಂದ ಒಬ್ಬರಿಗೆ ಹರಡುತ್ತದೆ. ಈ ಸೊಳ್ಳೆಗಳು ನಿಂತ ನೀರು, ಕೊಳಚೆ ಸ್ಥಳ ಮತ್ತು ಕಸದ ಗುಂಡಿಗಳಲ್ಲಿ ಹೆಚ್ಚು ಕಂಡುಬರುತ್ತವೆ. ಆದ್ದರಿಂದ ಜನರು ರಾತ್ರಿ ಮಲಗುವಾಗ ಸೊಳ್ಳೆ ಪರದೆ ಬಳಸಬೇಕು’ ಎಂದರು.

ADVERTISEMENT

ಪ್ರಬಾರಿ ಮುಖ್ಯ ಶಿಕ್ಷಕ ಪ್ರಕಾಶ ಸ್ವಾಮಿ ಮಾತನಾಡಿ, ‘ಎರಡು ವರ್ಷದೊಳಗಿನ ಮಕ್ಕಳು, ಗರ್ಭಿಣಿಯರು ತೀವ್ರ ಕಾಯಿಲೆಯಿದ ನರಳುತ್ತಿರುವವರನ್ನು ಹೊರತುಪಡಿಸಿ ಎಲ್ಲರೂ ಊಟದ ನಂತರ ಆನೆಕಾಲು ರೋಗ ಮಾತ್ರೆಗಳನ್ನು ನುಂಗಬೇಕು. ಇಡೀ ದೇಶವನ್ನು ಆನೆಕಾಲು ರೋಗ ಮುಕ್ತವಾಗಿಸಲು ಸರ್ಕಾರ ಪಣತೊಟ್ಟಿದೆ. ಅದಕ್ಕೆ ನಿಮ್ಮೇಲ್ಲರ ಸಹಕಾರ ಅಗತ್ಯ’ ಎಂದರು.

ಸಹಶಿಕ್ಷಕರಾದ ಜಗನ್ನಾಥ ಮುದ್ದಾ, ನಾಗನಾಥ ಉದಗೀರೆ, ಬಸವರಾಜ ಪಾಟೀಲ, ಕಿರಿಯ ಆರೋಗ್ಯ ಸಹಾಯಿಕಿ ಸೋನಮ್ಮ ಮಿತ್ರ, ಸತ್ಯವತಿ ಹುಲಸೂರೆ, ದಾಕ್ಷಯಿಣಿ ಬಿರಾದಾರ, ಪ್ರಶಾಂತ ಕಡಾಳೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.