ADVERTISEMENT

ಸಮಾಜಮುಖಿಯಾಗಿ ಬಾಳಿ: ಯುವಕರಿಗೆ ಸಲಹೆ

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕಾರ್ಯಾಗಾರ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2021, 14:55 IST
Last Updated 2 ಫೆಬ್ರುವರಿ 2021, 14:55 IST
ಬೀದರ್‌ನ ಗಿರಿಜಾ ಭವನದಲ್ಲಿ ನಡೆದ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕಾರ್ಯಾಗಾರದಲ್ಲಿ ಗುಲಬರ್ಗಾ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಪ್ರತಿಭಾ ಚಾಮಾ ಮಾತನಾಡಿದರು
ಬೀದರ್‌ನ ಗಿರಿಜಾ ಭವನದಲ್ಲಿ ನಡೆದ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕಾರ್ಯಾಗಾರದಲ್ಲಿ ಗುಲಬರ್ಗಾ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಪ್ರತಿಭಾ ಚಾಮಾ ಮಾತನಾಡಿದರು   

ಬೀದರ್: ಯುವಕರು ರಾಷ್ಟ್ರಪ್ರೇಮ ಮೈಗೂಡಿಸಿಕೊಳ್ಳಬೇಕು. ಸಮಾಜಮುಖಿಯಾಗಿ ಬಾಳಬೇಕು ಎಂದು ಗುಲಬರ್ಗಾ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯೆ ಪ್ರತಿಭಾ ಚಾಮಾ ನುಡಿದರು.

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ ಕಾರ್ಯಕರ್ತರ ಕಾರ್ಯಕ್ಷಮತೆ ಹೆಚ್ಚಿಸಲು ನಗರದ ಗಿರಿಜಾ ಭವನದಲ್ಲಿ ಆಯೋಜಿಸಿದ್ದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಯುವಶಕ್ತಿ ರಾಷ್ಟ್ರದ ಅತಿ ದೊಡ್ಡ ಶಕ್ತಿಯಾಗಿದೆ. ಹೀಗಾಗಿ ಯುವಜನರು ಸೋಮಾರಿತನ ಬಿಡಬೇಕು. ಸಮಯ ಪಾಲನೆ ಮಾಡಬೇಕು. ಗುರುವಿನ ಮಾರ್ಗದರ್ಶನದೊಂದಿಗೆ ನಿರ್ದಿಷ್ಟ ಗುರಿ ತಲುಪಲು ಪ್ರಯತ್ನಿಸಬೇಕು ಎಂದು ಹೇಳಿದರು.

ADVERTISEMENT

ಪರಿಷತ್ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ರೇವಣಸಿದ್ದ ಜಾಡರ್ ಮಾತನಾಡಿ, ಪರಿಷತ್ ಸ್ವಾಮಿ ವಿವೇಕಾನಂದರನ್ನು ಆದರ್ಶವಾಗಿ ಇಟ್ಟುಕೊಂಡು ಏಳು ದಶಕಗಳಿಂದ ತನ್ನ ಕಾರ್ಯ ಚಟುವಟಿಕೆಗಳನ್ನು ನಡೆಸಿಕೊಂಡು ಬಂದಿದೆ. ವಿಶ್ವದ ಅತಿದೊಡ್ಡ ಸಂಘಟನೆಯಾಗಿದೆ. ರಚನಾತ್ಮಕ ಚಟುವಟಿಕೆಗಳ ಮೂಲಕ ಯುವಕರಲ್ಲಿ ರಾಷ್ಟ್ರಾಭಿಮಾನ ಬೆಳೆಸುವ ಕೆಲಸ ಮಾಡುತ್ತಿದೆ ಎಂದು ತಿಳಿಸಿದರು.

ಪರಿಷತ್ ಜಿಲ್ಲಾ ಪ್ರಮುಖ ಯೋಗೇಶ ಎಂ.ಬಿ. ಮಾತನಾಡಿ, ಪರಿಷತ್ ರಾಷ್ಟ್ರ ಭಕ್ತರ ನಿರ್ಮಾಣದ ಕೇಂದ್ರವಾಗಿದೆ ಎಂದು ಹೇಳಿದರು.

ವಿಭಾಗ ಸಂಘಟನಾ ಕಾರ್ಯದರ್ಶಿ ಧನಂಜಯ, ಪ್ರಿಯಾಂಕ ಕುಲಕರ್ಣಿ, ಸ್ವರೂಪರಾಣಿ ನಾಗೂರೆ, ವೀರೇಂದ್ರ, ಪರಶುರಾಮ ಸಿಂಧೆ, ನಾಗೇಶ ಬಿರಾದಾರ, ಜಗಮೋಹನರೆಡ್ಡಿ, ಅಮರ ಸುಲ್ತಾನಪುರೆ, ಅರವಿಂದ ಸುಂದಾಳಕರ್ ಇದ್ದರು. ಶಿವಲೀಲಾಬಾಯಿ ಸ್ವಾಮಿ ನಿರೂಪಿಸಿದರು. ವಿಕಾಸ ಚೋರಮಲ್ಲೆ ವಂದಿಸಿದರು.

ನೇಮಕ: ಕಾರ್ಯಾಗಾರದಲ್ಲಿ ಪರಿಷತ್ ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತು.

ನಗರ ಘಟಕ: ಅನಿಲ್ ಚೌಧರಿ (ಅಧ್ಯಕ್ಷ), ನಾಗೇಶ ಬಿರಾದಾರ (ಉಪಾಧ್ಯಕ್ಷ), ಪ್ರದೀಪ ರೆಡ್ಡಿ (ಕಾರ್ಯದರ್ಶಿ), ಲಿಂಗರಾಜ ಬಿರಾದಾರ, ಜ್ಯೋತಿ, ಪಂಚಶೀಲಾ (ಸಹ ಕಾರ್ಯದರ್ಶಿಗಳು), ಉಜ್ವಲಾ (ನಗರ ವಿದ್ಯಾರ್ಥಿನಿ ಪ್ರಮುಖ), ಪ್ರಿಯಾಂಕ, ಸಂಧ್ಯಾರಾಣಿ, ಕನಕಶ್ರೀ (ನಗರ ವಿದ್ಯಾರ್ಥಿನಿ ಸಹ ಪ್ರಮುಖ).

ತಾಲ್ಲೂಕು ಘಟಕ: ಸಾಯಿ ಮೂಲಗೆ (ಸಂಚಾಲಕ), ಅರವಿಂದ ಸುಂದಾಳಕರ್ (ಎಸ್‍ಎಫ್‍ಡಿ ಪ್ರಮುಖ), ದತ್ತಾತ್ರೇಯ (ಅಧ್ಯಯನ ಸಂಪರ್ಕ ಪ್ರಮುಖ), ಶಿವು ಶೀಲವಂತ (ಹೋರಾಟ ಪ್ರಮುಖ), ಕಿರಣಕುಮಾರ (ಹಾಸ್ಟೇಲ್ ಪ್ರಮುಖ), ಶಿವಾನಂದ ಚಿಮಕೋಡೆ, ಪರಮೇಶ್ವರ್, ನಟರಾಜ, ಆನಂದ, ನಾಗನಾಥ, ಶಿವಕಾಂತ ಪಾಟೀಲ, ಶೀಲವಂತ, ಸಂಜುಕುಮಾರ, ವೀರೇಶ ರೇಕುಳಗಿ ಮತ್ತು ಪ್ರವೀಣ ರೇಕುಳಗಿ (ಕಾರ್ಯಕಾರಿಣಿ ಸದಸ್ಯರು).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.