ಕಮಲನಗರ: ತಾಲ್ಲೂಕಿನ ಬೆಳಕೋಣಿ (ಭೋ) ಗ್ರಾಮದಲ್ಲಿ ಬುಧವಾರ ಗೌತಮ ಬುದ್ಧರ ಜಯಂತಿ ಆಚರಿಸಲಾಯಿತು.
ಪ್ರೊ.ದಿಗಂಬರ್ ಡೊಂಗ್ರೆ ಪಂಚಶೀಲ ಧ್ವಜಾರೋಹಣ ನೆರವೇರಿಸಿದರು. ಕಪಿಲ್ ಡೊಂಗ್ರೆ ಬುದ್ಧ, ಡಾ.ಅಂಬೇಡ್ಕರ್ ಮೂರ್ತಿಗೆ ಪೂಜೆ ಸಲ್ಲಿಸಿದರು.
ಸುಖದೇವ್ ಡೊಂಗ್ರೆ ಮಾತನಾಡಿ,‘ಭಗವಾನ ಬುದ್ಧರು ಪ್ರಸ್ತುತಪಡಿಸಿದ ಸಮಾನತೆ, ಸಹೋದರತೆ ಮೌಲ್ಯಯುತ ಆದರ್ಶ ಚಿಂತನೆಗಳು ವಿಶ್ವಶಾಂತಿಗೆ ಪ್ರೇರಕವಾಗಿವೆ’ ಎಂದರು.
ಪಂಚಶೀಲ ಬುದ್ಧ ವಿಹಾರದಿಂದ ಅಂಬೇಡ್ಕರ್ ವೃತ್ತದವರೆಗೆ ಮೊಂಬತ್ತಿ ಮೆರವಣಿಗೆ ನಡೆಯಿತು. ಮೆರವಣಿಗೆಯಲ್ಲಿ ಮಕ್ಕಳು, ಮಹಿಳೆಯರು, ವಿದ್ಯಾರ್ಥಿಗಳು, ಮತ್ತು ಹಿರಿಯರು ಉತ್ಸಾಹದಿಂದ ಭಾಗವಹಿಸಿದರು.
ಈ ವೇಳೆ ರಾಜಕುಮಾರ್ ಡೊಂಗ್ರೆ, ಶಿಕಿಂದರ್ ಕಾಂಬಳೆ, ತಾನಾಜಿ ಕಾಂಬಳೆ, ರಾಹುಲ್ ಗಾಯಕವಾಡ್, ರಾಜ್ ಡೊಂಗ್ರೆ, ಯಾದವರಾವ್ ರಾನಡೆ, ಮಾರುತಿ ರಾನಡೆ, ಲೋಕೇಶ್ ರಾನಡೆ, ಮಾಧಬಾಯಿ ರಾನಡೆ, ದತ್ತಾ ಸಾವಂತ್, ವೈಭವ್ ಕಾಂಬಳೆ, ಸುಖದೇವ್ ಡೊಂಗ್ರೆ ಹಾಗೂ ಇನ್ನಿತರರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.