ADVERTISEMENT

ಭಾಲ್ಕಿ: ಅಂಬೇಡ್ಕರ್ ಭಾವಚಿತ್ರ ಇಡದಿದ್ದಕ್ಕೆ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2025, 7:27 IST
Last Updated 16 ಆಗಸ್ಟ್ 2025, 7:27 IST
<div class="paragraphs"><p>ಡಾ. ಅಂಬೇಡ್ಕರ್</p></div>

ಡಾ. ಅಂಬೇಡ್ಕರ್

   

ಭಾಲ್ಕಿ: ತಾಲ್ಲೂಕಿನ ಭಾತಂಬ್ರಾ ಗ್ರಾಮದ ವಂದೇ ಮಾತರಂ ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಅಂಬೇಡ್ಕರ್ ಭಾವಚಿತ್ರ ಇಡದೇ ಇರುವುದನ್ನು ಖಂಡಿಸಿ ಮಹಿಳೆಯರು ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ. ಈ ಸಂಬಂಧ ಮಾಹಿತಿ ದೊರೆತ ನಂತರ ಶಾಲೆಗೆ ಇಸಿಒ, ಸಿಆರ್‌ಪಿ ಭೇಟಿಗೆ ಬಂದಾಗ ಅಂಬೇಡ್ಕರ್ ಅವರ ಭಾವಚಿತ್ರವಿಟ್ಟು ಪೂಜೆ ಮಾಡಿದ್ದಾರೆ. ಇದೊಂದು ಅನುದಾನ ರಹಿತ ಶಾಲೆ ಆಗಿದ್ದು, ಈ ಘಟನೆಯ ವರದಿಯನ್ನು ಡಿಡಿಪಿಐ ಅವರಿಗೆ ಸಲ್ಲಿಸಲಾಗುವುದು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಜಿ.ಹಳ್ಳದ್ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT