ಬೀದರ್: ‘ಸ್ಟಾರ್ ಏರ್ ಸಂಸ್ಥೆಯು ಜೂನ್ 15ರಿಂದ ಬೆಂಗಳೂರು– ಬೀದರ್ ನಡುವೆ ವಿಮಾನಯಾನ ಆರಂಭಿಸಲಿದ್ದು, ಇದರ ಕುರಿತು ವಿಮಾನಯಾನ ಸಚಿವರು ಶೀಘ್ರವೇ ಮಾಹಿತಿ ನೀಡಲಿದ್ದಾರೆ’ ಎಂದು ಕೇಂದ್ರ ರಸಗೊಬ್ಬರ ಖಾತೆ ಸಚಿವ ಭತವಂತ ಖೂಬಾ ತಿಳಿಸಿದ್ದಾರೆ.
‘ಕೋವಿಡ್ ಕಾರಣ ಬೀದರ್–ಬೆಂಗಳೂರು ವಿಮಾನ ಹಾರಾಟ ಸ್ಥಗಿತಗೊಂಡಿದೆ. ಟ್ರೂಜೆಟ್ ವಿಮಾನ ಸೇವೆ ಆರಂಭಿಸುತ್ತಿಲ್ಲ. ವಿಮಾನಯಾನ ಸಚಿವಾಲಯದ ಅಧಿಕಾರಿಗಳ ಜೊತೆ ಚರ್ಚಿಸಿದ ಬಳಿಕ ಅವರು ಬೇರೆ ಕಂಪನಿಯ ವಿಮಾನ ಸೇವೆ ಒದಗಿಸಲು ಒಪ್ಪಿದರು’ ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.