ADVERTISEMENT

ಕಲಬುರಗಿ ಮಾರ್ಗವಾಗಿ ಬೀದರ್-ಯಶವಂತಪುರ ರೈಲು ಶೀಘ್ರ: ಭಗವಂತ ಖೂಬಾ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2022, 4:43 IST
Last Updated 1 ಮಾರ್ಚ್ 2022, 4:43 IST
ಭಗವಂತ ಖೂಬಾ
ಭಗವಂತ ಖೂಬಾ   

ಬೀದರ್: ಬೀದರ್-ಯಶವಂತಪುರ ರೈಲು ಕಲಬುರಗಿ ಮಾರ್ಗವಾಗಿ ಓಡಿಸಲು ರೈಲ್ವೆ ಇಲಾಖೆ ಒಪ್ಪಿಗೆ ನೀಡಿದೆ ಎಂದು ಕೇಂದ್ರದ ರಾಸಾಯನಿಕ ಹಾಗೂ ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ತಿಳಿಸಿದ್ದಾರೆ.

ಯಶವಂತಪುರ-ಬೀದರ್ (ಸಂಖ್ಯೆ 16571) ಹಾಗೂ ಬೀದರ್- ಯಶವಂತಪುರ (ಸಂಖ್ಯೆ 16572) ರೈಲುಗಳು ವಾರದ ನಾಲ್ಕು ದಿನ ಸಂಚರಿಸಲಿವೆ ಎಂದು ಹೇಳಿದ್ದಾರೆ.

ರೈಲು ಸಂಖ್ಯೆ 16571 ಭಾನು ವಾರ, ಸೋಮವಾರ, ಮಂಗಳವಾರ ಮತ್ತು ಗುರುವಾರ ಯಶವಂತಪು ರದಿಂದ ಸಂಜೆ 7ಕ್ಕೆ ಹೊರಟು ವಾಡಿ, ಕಲಬುರಗಿ, ತಾಜ ಸುಲ್ತಾನಪೂರ, ಕಮಲಾಪೂರ, ಹುಮನಾಬಾದ್, ಹಳ್ಳಿಖೇಡ ಮಾರ್ಗವಾಗಿ ಮರುದಿನ ಬೆಳಿಗ್ಗೆ 8.45ಕ್ಕೆ ಬೀದರ್ ತಲುಪಲಿದೆ ಎಂದಿದ್ದಾರೆ.

ADVERTISEMENT

ರೈಲು ಸಂಖ್ಯೆ 16572 ಸೋಮವಾರ, ಮಂಗಳವಾರ, ಬುಧವಾರ ಹಾಗೂ ಶುಕ್ರವಾರ ಸಂಜೆ 6.15ಕ್ಕೆ ಬೀದರ್‌ನಿಂದ ಹೊರಟು ಇದೇ ಮಾರ್ಗವಾಗಿ ಮರುದಿನ ಬೆಳಿಗ್ಗೆ 7.40ಕ್ಕೆ ಬೆಂಗಳೂರು ತಲುಪಲಿದೆ ಎಂದಿದ್ದಾರೆ.

ಮುಂದಿನ 15 ದಿನಗಳ ಒಳಗೆ ರೈಲ್ವೆ ಸಚಿವರಿಂದ ಈ ಮಾರ್ಗವಾಗಿ ರೈಲು ಸಂಚಾರಕ್ಕೆ ಚಾಲನೆ ನೀಡಲು ಯೋಜಿಸಲಾಗಿದೆ. ಈ ಮಾರ್ಗದಿಂದ ಬೀದರ್ ಕ್ಷೇತ್ರದ ಜನರಿಗೆ ಬಹಳ ಅನುಕೂಲವಾಗಲಿದೆ. ಬರುವ ದಿನಗಳಲ್ಲಿ ಕಲಬುರಗಿ ಮಾರ್ಗವಾಗಿ ಬೀದರ್‌ಗೆ ಇನ್ನೂ ಹೆಚ್ಚು ರೈಲುಗಳು ಸಂಚರಿಸಲಿವೆ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.