ADVERTISEMENT

ಹಳಿ ಮೇಲೆ ನಿಂತ ಟೆಂಪೊಗೆ ರೈಲು ಡಿಕ್ಕಿ: ಸಿಬ್ಬಂದಿ ಸಮಯಪ್ರಜ್ಞೆ, ತಪ್ಪಿದ ಅನಾಹುತ

​ಪ್ರಜಾವಾಣಿ ವಾರ್ತೆ
Published 7 ಜುಲೈ 2022, 17:07 IST
Last Updated 7 ಜುಲೈ 2022, 17:07 IST
ಹಳಿ ಮೇಲೆ ನಿಂತ ಟೆಂಪೊಗೆ ರೈಲು ಡಿಕ್ಕಿ: ಸಿಬ್ಬಂದಿ ಸಮಯಪ್ರಜ್ಞೆ, ತಪ್ಪಿದ ಅನಾಹುತ
ಹಳಿ ಮೇಲೆ ನಿಂತ ಟೆಂಪೊಗೆ ರೈಲು ಡಿಕ್ಕಿ: ಸಿಬ್ಬಂದಿ ಸಮಯಪ್ರಜ್ಞೆ, ತಪ್ಪಿದ ಅನಾಹುತ   

ಭಾಲ್ಕಿ (ಬೀದರ್ ಜಿಲ್ಲೆ): ತಾಲ್ಲೂಕಿನ ಸಿದ್ದೇಶ್ವರ ರೈಲ್ವೆ ಗೇಟ್ ಬಳಿ ಮಂಗಳವಾರ ಮಧ್ಯಾಹ್ನ ರೈಲು ಡಿಕ್ಕಿ ಹೊಡೆದು ಟೆಂಪೊ ನಜ್ಜುಗುಜ್ಜಾಯಿತು. ಅದೃಷ್ಟವಶಾತ್ ಪ್ರಾಣಹಾನಿ ಸಂಭವಿಸಲಿಲ್ಲ. ಯಾರಿಗೂ ಗಾಯಗಳು ಆಗಲಿಲ್ಲ.

‘ಸೋಯಾ ಅವರೆ ಚೀಲಗಳಿಂದ ತುಂಬಿದ್ದ ಟೆಂಪೊ ಹಲಬರ್ಗಾದಿಂದ ಕಣಜಿಯತ್ತ ಹೊರಟಿತ್ತು. ರೈಲ್ವೆ ರಕ್ಷಣಾ ಗೇಟ್ ಹಾಕಿದ್ದು, ವೇಗವಾಗಿ ಚಾಲನೆ ಮಾಡುತ್ತಿದ್ದ ಚಾಲಕನಿಗೆ ಟೆಂಪೊ ನಿಯಂತ್ರಿಸಲು ಸಾಧ್ಯವಾಗದೇ ರಕ್ಷಣಾ ಗೇಟ್‌ಗೆ ಡಿಕ್ಕಿ ಹೊಡೆದ. ಟೆಂಪೊ ರೈಲ್ವೆ ಹಳಿ ಮೇಲೆ ನಿಂತಿತು’ ಎಂದು ಸ್ಥಳೀಯರಾದ ಶಶಿಧರ ಸೀತಾ ‘ಪ್ರಜಾವಾಣಿ’ಗೆ ತಿಳಿಸಿದರು.

‘ವಿಚಲಿತಗೊಂಡ ರೈಲ್ವೆ ಗೇಟ್ ಸಿಬ್ಬಂದಿ ಅಪಘಾತ ತಪ್ಪಿಸಲು ಸುಮಾರು 1 ಕಿ.ಮೀ.ವರೆಗೆ ಹಳಿ ಮಧ್ಯೆ ಕೆಂಪು ಧ್ವಜ ಹಿಡಿದು ಓಡಿದ್ದಾರೆ. ಇದನ್ನು ಗಮನಿಸಿದ ಚಾಲಕ ರೈಲು ನಿಲ್ಲಿಸಲು ಹರಸಾಹಸಪಟ್ಟರು. ಆದರೆ, ಸಾಧ್ಯವಾಗದೇ ಟೆಂಪೊಗೆ ಡಿಕ್ಕಿ ಹೊಡೆಯಿತು’ ಎಂದು ತಿಳಿಸಿದರು.

ADVERTISEMENT

ಸ್ಥಳಕ್ಕೆ ಬಂದ ಧನ್ನೂರ ಠಾಣೆ ಪೊಲೀಸರು ಮತ್ತು ಬೀದರ್ ರೈಲ್ವೆ ಪೊಲೀಸರು ಸ್ಥಳಕ್ಕೆ ಟೆಂಪೊ ಚಾಲಕನನ್ನು ಕರೆದೊಯ್ದರು. ರೈಲು ಡಿಕ್ಕಿ ಹೊಡೆದ ವಿಡಿಯೊ ತುಣುಕುಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.