ADVERTISEMENT

ಕಮಲನಗರ ತಾ.ಪಂ ಬಿಜೆಪಿ ವಶ

ಅಧ್ಯಕ್ಷರಾಗಿ ಗಿರೀಶ್‌ ಒಡೆಯರ್, ಉಪಾಧ್ಯಕ್ಷರಾಗಿ ಕಸ್ತೂರಬಾಯಿ ಆಯ್ಕೆ

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2020, 6:20 IST
Last Updated 8 ನವೆಂಬರ್ 2020, 6:20 IST
ಕಮಲನಗರ ತಾಲ್ಲೂಕು ಪಂಚಾಯಿತಿಗೆ ಶನಿವಾರ ಆಯ್ಕೆಯಾದ ಅಧ್ಯಕ್ಷ ಗಿರೀಶ್ ಒಡೆಯರ್, ಉಪಾಧ್ಯಕ್ಷೆ ಕಸ್ತೂರಬಾಯಿ ಬಿರಾದಾರ ಅವರು ಸಚಿವ ಪ್ರಭು ಚವ್ಹಾಣ ಅವರೊಂದಿಗೆ ವಿಜಯದ ಸಂಕೇತ ತೋರಿಸಿದರು
ಕಮಲನಗರ ತಾಲ್ಲೂಕು ಪಂಚಾಯಿತಿಗೆ ಶನಿವಾರ ಆಯ್ಕೆಯಾದ ಅಧ್ಯಕ್ಷ ಗಿರೀಶ್ ಒಡೆಯರ್, ಉಪಾಧ್ಯಕ್ಷೆ ಕಸ್ತೂರಬಾಯಿ ಬಿರಾದಾರ ಅವರು ಸಚಿವ ಪ್ರಭು ಚವ್ಹಾಣ ಅವರೊಂದಿಗೆ ವಿಜಯದ ಸಂಕೇತ ತೋರಿಸಿದರು   

ಕಮಲನಗರ: ನೂತನ ತಾಲೂಕು ಪಂಚಾಯಿತಿಯ ಅಧಿಕಾರದ ಗದ್ದುಗೆ ಬಿಜೆಪಿ ಪಾಲಾಗಿದೆ. ಪರಿಶಿಷ್ಟ ಜಾತಿಗೆ ಮೀಸಲಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಗಿರೀಶ್ ಒಡೆಯರ್, ಸಾಮನ್ಯ ಮಹಿಳೆಗೆ ಮೀಸಲಾಗಿದ್ದ ಉಪಾಧ್ಯಕ್ಷ ಸ್ಥಾನಕ್ಕೆ ಕಸ್ತೂರಬಾಯಿ ಬಿರಾದಾರ ಆಯ್ಕೆಯಾದರು.

ಔರಾದ್ ತಾಲ್ಲೂಕನ್ನು ವಿಭಜನೆ ಮಾಡಿ ಕಮಲನಗರವನ್ನು ನೂತನ ತಾಲ್ಲೂಕು ಆಗಿ ರಚನೆ ಮಾಡಿದ ನಂತರ ಮೊದಲ ಬಾರಿಗೆ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಗೆ ಶನಿವಾರ ಚುನಾವಣೆ ನಿಗದಿಪಡಿಸಲಾಗಿತ್ತು.

ತಾಲ್ಲೂಕು ಪಂಚಾಯಿತಿಯ ಒಟ್ಟು 12 ಸದಸ್ಯರಲ್ಲಿ 6 ಜನ ಬಿಜೆಪಿ ಹಾಗೂ 6 ಜನ ಕಾಂಗ್ರೆಸ್ ಸದಸ್ಯರಿದ್ದಾರೆ. ಕಾಂಗ್ರೆಸ್‍ನಿಂದ ಆಯ್ಕೆಯಾಗಿದ್ದ ಕಸ್ತೂರಬಾಯಿ ಬಿರಾದಾರ ಹಾಗೂ ಸೋಮನಾಥ ಖಡಕೆ ಅವರು ಕಾಂಗ್ರೆಸ್‍ಗೆ ಕೈ ಕೊಟ್ಟು ಬಿಜೆಪಿ ಅಧಿಕಾರ ಗದ್ದುಗೆ ಹಿಡಿಯಲು ಹಾದಿ ಸುಗಮಗೊಳಿಸಿದರು.

ADVERTISEMENT

ಚುನಾವಣಾಧಿಕಾರಿ ಸಹಾಯಕ ಆಯುಕ್ತೆ ಗರೀಮಾ ಪನ್ವಾರ್ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆಯನ್ನು ಘೋಷಿಸಿದರು. ಆಯ್ಕೆ ಪ್ರಕಟಿಸುತ್ತಿದ್ದಂತೆ ಬಿಜೆಪಿ ಕಾರ್ಯಕರ್ತರು, ಅಭಿಮಾನಿಗಳು ಜಯಘೋಷ ಹಾಕಿ, ಸಿಹಿ ವಿತರಿಸಿ ಸಂಭ್ರಮಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ, ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ರಾಮಶೆಟ್ಟಿ ಪನ್ನಾಳೆ, ಮುಖಂಡ ಪ್ರಕಾಶ ಟೊಣ್ಣೆ, ಬಂಡೆಪ್ಪಾ ಕಂಟೆ, ವಿಜಯಕುಮಾರ ಪಾಟೀಲ ಗಾದಗಿ, ಬಂಟಿ ರಾಂಪುರೆ, ಶಿವಾನಂದ ವಡ್ಡೆ, ಶ್ರೀರಂಗ ಪರಿಹಾರ, ನಾಗೇಶ ಪತ್ರೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.