ADVERTISEMENT

ಔರಾದ್: ಗಡಿಯಲ್ಲಿ ಅಪರೂಪದ ಕರಿ ನವಿಲು ಪತ್ತೆ

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2021, 2:02 IST
Last Updated 12 ಅಕ್ಟೋಬರ್ 2021, 2:02 IST
ಔರಾದ್‌ ಸಮೀಪದ ಅರಣ್ಯದಲ್ಲಿ ಕ್ಯಾಮೆರಾದ ಕಣ್ಣಿನಲ್ಲಿ ಸೆರೆಯಾದ ಕರಿ ನವಿಲು
ಔರಾದ್‌ ಸಮೀಪದ ಅರಣ್ಯದಲ್ಲಿ ಕ್ಯಾಮೆರಾದ ಕಣ್ಣಿನಲ್ಲಿ ಸೆರೆಯಾದ ಕರಿ ನವಿಲು   

ಔರಾದ್ (ಬೀದರ್‌): ಜಿಲ್ಲೆಯ ಗಡಿ ಭಾಗದ ಅರಣ್ಯ ಪ್ರದೇಶದಲ್ಲಿ ಎರಡು ಅಪರೂಪದ ಕರಿ ನವಿಲುಗಳು ಪತ್ತೆಯಾಗಿವೆ.

ಸಮೀಪದ ಚಟ್ನಾಳ ಹಾಗೂ ಬೀದರ್ ಸಮೀಪದ ಚೊಂಡಿ ಬಳಿ ಪತ್ತೆಯಾದ ಈ ಅಪರೂಪದ ನವಿಲುಗಳು ಪಕ್ಷಿ ಪ್ರಿಯರ ಗಮನ ಸೆಳೆದಿವೆ.

ಬಾಂಬೆ ನ್ಯಾಚುರಲ್ ಹಿಸ್ಟರಿ ಸೊಸೈಟಿಯ (ಬಿಎನ್‌ಎಚ್‌ಎಸ್) ನಿರ್ದೇಶಕ ಡಾ. ಬಿವಾಶ್‌ ಪಾಂಡವ್ ಅವರು ಭಾನುವಾರ ಇವುಗಳನ್ನು ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದಾರೆ.

ADVERTISEMENT

‘ಇದು ಅಳಿವಿನಂಚಿನಲ್ಲಿರುವ ಪಕ್ಷಿ. ಅಧ್ಯಯನದ ಪ್ರಕಾರ ದೇಶದಲ್ಲಿ ಇಂಥ 600 ಪಕ್ಷಿಗಳು ಮಾತ್ರ ಇವೆ. ಕರ್ನಾಟಕದಲ್ಲಿ ಬೀದರ್ ಹೊರತುಪಡಿಸಿ ಎಲ್ಲಿಯೂ ಈ ಪಕ್ಷಿ ಕಾಣಸಿಗುವುದಿಲ್ಲ. ಗುಜರಾತ್, ರಾಜಸ್ಥಾನ ಹಾಗೂ ಮಹಾರಾಷ್ಟ್ರದಲ್ಲಿ ಕಾಣಸಿಗುತ್ತವೆ ಎಂದು ಸಂಶೋಧಕರು ಮಾಹಿತಿ ನೀಡಿದ್ದಾರೆ’ ಎಂದು ವಲಯ ಅರಣ್ಯಾಧಿಕಾರಿ ಪ್ರೇಮಶೇಖರ್ ಚಾಂದೋರಿ ಹಾಗೂ ಜಿಲ್ಲಾ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಸ್. ಶಿವಶಂಕರ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.