ADVERTISEMENT

ಬಾವುಗೆ ಸಂಪಾದಿತ ಮರೆಯಲಾಗದ ಮಹಾನುಭಾವರು ಗ್ರಂಥ ಲೋಕಾರ್ಪಣೆ

​ಪ್ರಜಾವಾಣಿ ವಾರ್ತೆ
Published 8 ಜೂನ್ 2025, 15:54 IST
Last Updated 8 ಜೂನ್ 2025, 15:54 IST
ಭಾಲ್ಕಿ ತಾಲ್ಲೂಕಿನ ಡೋಣಗಾಪೂರ ಗ್ರಾಮದಲ್ಲಿ ಸಾಹಿತಿ ವೀರಶೆಟ್ಟಿ ಬಾವುಗೆ ಸಂಪಾದಿತ ಮರೆಯಲಾಗದ ಮಹಾನುಭಾವರು ಗ್ರಂಥವನ್ನು ಸಚಿವ ಈಶ್ವರ ಖಂಡ್ರೆ ಲೋಕಾರ್ಪಣೆ ಮಾಡಿದರು
ಭಾಲ್ಕಿ ತಾಲ್ಲೂಕಿನ ಡೋಣಗಾಪೂರ ಗ್ರಾಮದಲ್ಲಿ ಸಾಹಿತಿ ವೀರಶೆಟ್ಟಿ ಬಾವುಗೆ ಸಂಪಾದಿತ ಮರೆಯಲಾಗದ ಮಹಾನುಭಾವರು ಗ್ರಂಥವನ್ನು ಸಚಿವ ಈಶ್ವರ ಖಂಡ್ರೆ ಲೋಕಾರ್ಪಣೆ ಮಾಡಿದರು   

ಭಾಲ್ಕಿ: ‘ಗ್ರಾಮದ ಸುಧಾರಣೆಯ ಚಿಂತಕ ದಿ.ಸಂಗಪ್ಪ ಬಿರಾದಾರ ಅವರ ಸೇವೆ ಯಾರೂ ಮರೆಯುವಂತಿಲ್ಲ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಹೇಳಿದರು.

ತಾಲ್ಲೂಕಿನ ಡೋಣಗಾಪೂರ ಗ್ರಾಮದಲ್ಲಿ ಸಾಹಿತಿ ವೀರಶೆಟ್ಟಿ ಬಾವುಗೆ ಸಂಪಾದಿತ ಮರೆಯಲಾಗದ ಮಹಾನುಭಾವರು ಎಂಬ ಗ್ರಂಥ ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು.

‘ಸಂಗಪ್ಪ ಬಿರಾದಾರ ಕುರಿತು ವೀರಶೆಟ್ಟಿ ಬಾವುಗೆ ಸಂಪಾದಿತ ಮರೆಯಲಾಗದ ಮಹಾನುಭಾವರು ಕೃತಿ ಅವರ ಜೀವನ ಪ್ರತಿಬಿಂಬಿಸುವ ಅತ್ಯುತ್ತಮ ದರ್ಪಣವಾಗಿದೆ. ಯಾವ ವ್ಯಕ್ತಿ ನಿಸ್ವಾರ್ಥ ಭಾವದಿಂದ ಸಮಾಜ ಸೇವೆ ಮಾಡುತ್ತಾನೆ. ಆತ ಕಣ್ಮರೆಯಾದ ನಂತರವೂ ಗ್ರಾಮದ ಜನ ಮರೆಯುವುದಿಲ್ಲ. ಅದಕ್ಕೆ ತಾಜಾ ನಿದರ್ಶನ ದಿ.ಸಂಗಪ್ಪ ಬಿರಾದಾರ ಅವರ ಕುರಿತು ರಚಿಸಿದ ಗ್ರಂಥ ಬಿಡುಗಡೆ ಸಮಾರಂಭಕ್ಕೆ ಸೇರಿದ ಅಪಾರ ಜನರೇ ಸಾಕ್ಷಿ’ ಎಂದರು.

ADVERTISEMENT

ತಮಲೂರಿನ ಶಿವಾನಂದ ಶಿವಾಚಾರ್ಯರು, ಕಸಾಪ ಮಾಜಿ ಜಿಲ್ಲಾಧ್ಯಕ್ಷ ಸಿದ್ರಾಮಪ್ಪ ಮಾಸಿಮಾಡೆ, ಬೀದರ್ ವಿಶ್ವವಿದ್ಯಾಲಯ ಪ್ರಾಧ್ಯಾಪಕ ರಾಮಚಂದ್ರ ಗಣಾಪೂರ ಮಾತನಾಡಿದರು. ಸಾಹಿತಿ ವೀರಶೆಟ್ಟಿ ಬಾವುಗೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಂ.ಜಿ.ಎಸ್.ಎಸ್.ಕೆ.ಅಧ್ಯಕ್ಷ ವೈಜಿನಾಥ ಪಾಟೀಲ, ಬಸವರಾಜ ವಂಕೆ, ಶಿವರಾಜ ಮಾಲಿಪಾಟೀಲ, ಪಿಕೆಪಿಎಸ್ ಅಧ್ಯಕ್ಷ ಶಾಂತವೀರ ಪಾಟೀಲ,ಕಸಾಪ ಅಧ್ಯಕ್ಷ ನಾಗಭೂಷಣ ಮಾಮಡಿ,ಪ್ರಮುಖರಾದ ಶ್ರೀಕಾಂತ ಬಿರಾದಾರ,ಮಂಜುನಾಥ ಬಿರಾದಾರ ಸೇರಿದಂತೆ ಇತರರು ಹಾಜರಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.