ADVERTISEMENT

ಬೀದರ್: ಇಂದಿನಿಂದ ತೆಲಂಗಾಣಕ್ಕೆ ಬಸ್‌ ಆರಂಭ

ಸಂಚಾರ ನಿಯಂತ್ರಣಾಧಿಕಾರಿ ರಾಜೇಂದ್ರ ಜಾಧವ

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2020, 19:30 IST
Last Updated 27 ಸೆಪ್ಟೆಂಬರ್ 2020, 19:30 IST
ರಾಜೇಂದ್ರ ಜಾಧವ
ರಾಜೇಂದ್ರ ಜಾಧವ   

ಬೀದರ್: ನೆರೆಯ ತೆಲಂಗಾಣಕ್ಕೆ ಸೋಮವಾರದಿಂದ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಸೇವೆ ಆರಂಭವಾಗಲಿದೆ. ಮೊದಲ ದಿನವೇ 20 ಬಸ್‌ಗಳನ್ನು ಹೈದರಾಬಾದ್‌ಗೆ ಓಡಿಸಲಾಗುವುದು’ ಎಂದು ಬೀದರ್‌ ವಿಭಾಗೀಯ ಸಂಚಾರ ನಿಯಂತ್ರಣಾಧಿಕಾರಿ ರಾಜೇಂದ್ರ ಜಾಧವ ತಿಳಿಸಿದ್ದಾರೆ.

ಲಾಕ್‌ಡೌನ್‌ ಮೊದಲು ಬೀದರ್‌ ಜಿಲ್ಲೆಯ ತಾಲ್ಲೂಕು ಕೇಂದ್ರಗಳಿಂದಲೂ ಸೇರಿ ಒಟ್ಟು 60 ಬಸ್‌ಗಳು ಹೈದರಾಬಾದ್‌ಗೆ ಹೋಗಿ ಬರುತ್ತಿದ್ದವು. ಮೊದಲ ದಿನ 20 ಬಸ್‌ಗಳನ್ನು ಓಡಿಸಲು ನಿರ್ಧರಿಸಲಾಗಿದೆ. ಪ್ರಯಾಣಿಕರಿಂದ ಉತ್ತಮ ಸ್ಪಂದನೆ ದೊರೆತರೆ ಹೆಚ್ಚುವರಿಯಾಗಿ ಬಸ್‌ ಓಡಿಸಲಾಗುವುದು’ ಎಂದು ಹೇಳಿದ್ದಾರೆ.

ತೆಲಂಗಾಣ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ಗಳು ಸಹ ಹೈದರಾಬಾದ್‌ ಹಾಗೂ ಜಹೀರಾಬಾದ್‌ನಿಂದ ಬೀದರ್‌ಗೆ ಬರಲಿವೆ. ಅಲ್ಲಿಯ ಸಾರಿಗೆ ಸಂಸ್ಥೆ ಈಗಾಗಲೇ ಪತ್ರವನ್ನು ಕಳಿಸಿಕೊಟ್ಟಿದೆ ಎಂದು ತಿಳಿಸಿದ್ದಾರೆ.

ADVERTISEMENT

ರಾತ್ರಿ ಬಸ್‌ ಕ್ಯಾನ್ಸಲ್‌: ಮಹಾರಾಷ್ಟ್ರದ ಪ್ರಮುಖ ನಗರಗಳಿಂದ ಬೀದರ್ ಜಿಲ್ಲೆಗೆ ಬರುವ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ಗಳ ರಾತ್ರಿ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ಆದರೆ, ಬೆಳಗಿನ ಅವಧಿಯಲ್ಲಿ ಬಸ್‌ಗಳು ಎಂದಿನಂತೆ ಸಂಚರಿಸಲಿವೆ ಎಂದು ಹೇಳಿದ್ದಾರೆ.

ಮಹಾರಾಷ್ಟ್ರದ ಮೀರಜ್‌ಗೆ ಮಾತ್ರ ರಾತ್ರಿ ಬಸ್‌ ಹೊರಡುತ್ತಿದೆ. ಆದರೆ, ಮುಂಬೈ, ಪುಣೆ, ಔರಂಗಾಬಾದ್, ತುಳಜಾಪುರದಲ್ಲಿ ಸಂಜೆ 6 ಗಂಟೆಗೆ ಲಾಕ್‌ಡೌನ್‌ ಮಾಡಲಾಗುತ್ತಿದೆ. ಹೀಗಾಗಿ ಆ ಕಡೆಯಿಂದ ಸಂಜೆ ಬಸ್‌ಗಳು ಬರುತ್ತಿಲ್ಲ. ಪ್ರಯಾಣಿಕರ ಹಿತವನ್ನು ಗಮನದಲ್ಲಿಟ್ಟುಕೊಂಡು ಬೆಳಿಗ್ಗೆ ಸಾರಿಗೆ ಸೇವೆಯನ್ನು ಒದಗಿಸಲಾಗಿದೆ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.