ADVERTISEMENT

ಕರ್ನಾಟಕ ಶಾಲೆಗೆ ಸಾಕ್ಷಿ ಟಾಪರ್

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2021, 6:07 IST
Last Updated 4 ಆಗಸ್ಟ್ 2021, 6:07 IST
ಸಾಕ್ಷಿ ಪಾಟೀಲ
ಸಾಕ್ಷಿ ಪಾಟೀಲ   

ಬೀದರ್: ಪ್ರಸಕ್ತ ಸಾಲಿನ ಸಿಬಿಎಸ್‍ಇ 10ನೇ ಪರೀಕ್ಷೆಯಲ್ಲಿ ಇಲ್ಲಿಯ ಕೆಆರ್‌ಇ ಸಂಸ್ಥೆ ಸಂಚಾಲಿತ ಕರ್ನಾಟಕ ಪಬ್ಲಿಕ್ ಶಾಲೆಗೆ ಸಾಕ್ಷಿ ಪಾಟೀಲ ಟಾಪರ್ ಆಗಿ ಹೊರ ಹೊಮ್ಮಿದ್ದಾರೆ.

ಸಾಕ್ಷಿ ಶೇ 96 ರಷ್ಟು ಅಂಕ ಗಳಿಸಿದ್ದಾರೆ. ವೈಷ್ಣವಿ ವಡ್ಡಿ ಶೇ 95, ಮಹಮ್ಮದ್ ಜೈದ್ ಇಮ್ರಾನ್ ಹಾಗೂ ಮನೀಷ್ ಕುಲಕರ್ಣಿ ಶೇ 90 ರಷ್ಟು ಅಂಕ ಗಳಿಸಿ ಗಮನ ಸೆಳೆದಿದ್ದಾರೆ.

ಶಾಲೆಗೆ ಶೇ 100ಕ್ಕೆ 100 ರಷ್ಟು ಫಲಿತಾಂಶ ಬಂದಿದೆ. ನಾಲ್ವರು ಶೇ 90 ಮೇಲ್ಪಟ್ಟು ಹಾಗೂ ಏಳು ಮಂದಿ ಶೇ 75 ಮೇಲ್ಪಟ್ಟು ಅಂಕ ಪಡೆದಿದ್ದಾರೆ ಎಂದು ಪ್ರಾಚಾರ್ಯ ಪ್ರೊ. ಎಸ್.ಎಸ್. ದೇವರಕಲ್ ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.