ಬೀದರ್: ಸಂಗೀತ ಕಲಾ ಮಂಡಲ ಹಾಗೂ ದೇವಿ ಗ್ರೂಪ್ ವತಿಯಿಂದ ದಸರಾ ಮಹೋತ್ಸವ ಪ್ರಯುಕ್ತ ನಗರದ ದೇವಿ ಕಾಲೊನಿಯ ದೇವಿ ಮಂದಿರದಲ್ಲಿ ಅಕ್ಟೋಬರ್ 8 ರಿಂದ 11 ರ ವರೆಗೆ ಸಂಗೀತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಪ್ರತಿ ದಿನ ಸಂಜೆ 6 ರಿಂದ 8 ರ ವರೆಗೆ ಕಾರ್ಯಕ್ರಮ ನಡೆಯಲಿದೆ ಎಂದು ಸಂಗೀತ ಕಲಾ ಮಂಡಲ ಅಧ್ಯಕ್ಷ ರಾಜೇಂದ್ರಸಿಂಗ್ ಪವಾರ್ ತಿಳಿಸಿದ್ದಾರೆ.
8 ರಂದು ಬಸವರಾಜ ಹಾಗೂ ತಂಡ, 9 ರಂದು ಜಗನ್ನಾಥ ನಾನಕೇರಿ ಮತ್ತು ತಂಡ, 10 ರಂದು ರಾಮಲು ಗಾದಗಿ ಹಾಗೂ ತಂಡ, 11 ರಂದು ಶಿವದಾಸ ಸ್ವಾಮಿ ಹಾಗೂ ತಂಡದವರು ಸಂಗೀತ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.