ADVERTISEMENT

ಬೀದರ್: ಕಲಾವಿದರಿಗೆ ಆಹಾರಧಾನ್ಯ ಕಿಟ್ ವಿತರಣೆ

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2020, 16:54 IST
Last Updated 29 ಸೆಪ್ಟೆಂಬರ್ 2020, 16:54 IST
ಬೀದರ್‌ನ ಕರ್ನಾಟಕ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಜಿಲ್ಲಾಧಿಕಾರಿ ಡಾ. ರಾಮಚಂದ್ರನ್ ಆರ್. ಅವರು ಕಲಾವಿದರಿಗೆ ಆಹಾರಧಾನ್ಯ ಕಿಟ್ ವಿತರಿಸಿದರು
ಬೀದರ್‌ನ ಕರ್ನಾಟಕ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಜಿಲ್ಲಾಧಿಕಾರಿ ಡಾ. ರಾಮಚಂದ್ರನ್ ಆರ್. ಅವರು ಕಲಾವಿದರಿಗೆ ಆಹಾರಧಾನ್ಯ ಕಿಟ್ ವಿತರಿಸಿದರು   

ಬೀದರ್: ಕರ್ನಾಟಕ ಜಾನಪದ ಪರಿಷತ್ ಜಿಲ್ಲಾ ಘಟಕ, ಕರ್ನಾಟಕ ಕಾಲೇಜು ಹಾಗೂ ಕರ್ನಾಟಕ ಸಾಹಿತ್ಯ ಸಂಘದ ವತಿಯಿಂದ ನಗರದ ಕರ್ನಾಟಕ ಕಾಲೇಜಿನಲ್ಲಿ ಜಿಲ್ಲೆಯ 50 ಮಂದಿ ಬಡ ಕಲಾವಿದರಿಗೆ ಆಹಾರ ಧಾನ್ಯ ಕಿಟ್ ಉಚಿತವಾಗಿ ವಿತರಿಸಲಾಯಿತು.

ಜಿಲ್ಲಾಧಿಕಾರಿ ರಾಮಚಂದ್ರನ್ ಆರ್. ಅವರು ಕಿಟ್ ವಿತರಿಸಿ, ಗ್ರಾಮೀಣ ಭಾಗದ ಕಲಾವಿದರು ಆರ್ಥಿಕವಾಗಿ ಬಡವರಾಗಿದ್ದರೂ, ಕಲೆಯಲ್ಲಿ ಶ್ರೀಮಂತರಾಗಿದ್ದಾರೆ. ಕಲಾವಿದರು ತಮ್ಮ ಮಕ್ಕಳ ಶಿಕ್ಷಣಕ್ಕೆ ಆದ್ಯತೆ ಕೊಡಬೇಕು ಎಂದು ಹೇಳಿದರು.

ಕೆಆರ್‍ಇ ಸಂಸ್ಥೆ ಅಧ್ಯಕ್ಷ ಡಾ. ಬಸವರಾಜ ಪಾಟೀಲ ಅಷ್ಟೂರ ಅವರು, ಸಂಸ್ಥೆಯಿಂದ ಪ್ರತಿ ವರ್ಷ 5 ಬಡ ಮಕ್ಕಳ ಸಂಪೂರ್ಣ ಕಾಲೇಜು ಶುಲ್ಕ ಭರಿಸಲಾಗುತ್ತಿದೆ. 100 ರಿಂದ 110 ವಿದ್ಯಾರ್ಥಿಗಳಿಗೆ ಶುಲ್ಕ, ಪುಸ್ತಕ, ಊಟದ ವ್ಯವಸ್ಥೆ ರೂಪದಲ್ಲಿ ನೆರವು ಕಲ್ಪಿಸಲಾಗುತ್ತಿದೆ ತಿಳಿಸಿದರು.

ADVERTISEMENT

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗ್ಯಾನೇಂದ್ರಕುಮಾರ ಗಂಗ್ವಾರ್, ಸಂಸ್ಥೆಯ ಉಪಾಧ್ಯಕ್ಷ ಸಿದ್ರಾಮ ಪಾರಾ, ಕಾರ್ಯದರ್ಶಿ ಬಸವರಾಜ ಜಾಬಶೆಟ್ಟಿ, ಟ್ರಸ್ಟ್ ಅಧ್ಯಕ್ಷ ಚನ್ನಬಸಪ್ಪ ಹಾಲಹಳ್ಳಿ, ನಿರ್ದೇಶಕರಾದ ಸತೀಶ ಪಾರಾ, ಚಂದ್ರಕಾಂತ ಶೆಟಕಾರ್, ವೀರಭದ್ರಪ್ಪ ಬುಯ್ಯಾ, ಮಲ್ಲಿಕಾರ್ಜುನ ಪಾಟೀಲ, ಸತೀಶ ಪಾಟೀಲ, ಶಿವಶಂಕರ ಶೆಟಕಾರ, ವಿ.ಜಿ. ಹತ್ತಿ, ಪ್ರಾಚಾರ್ಯ ಡಾ. ಜಗನ್ನಾಥ ಹೆಬ್ಬಾಳೆ, ಉಪ ಪ್ರಾಚಾರ್ಯ ಡಾ. ಮಲ್ಲಿಕಾರ್ಜುನ ಹಂಗರಗಿ, ಪರಿಷತ್ತಿನ ಡಾ. ರಾಜಕುಮಾರ ಹೆಬ್ಬಾಳೆ, ಯೋಗೇಂದ್ರ ಯದಲಾಪುರೆ, ನಿಜಲಿಂಗಪ್ಪ ತಗಾರೆ, ಸಂಜುಕುಮಾರ ಜುಮ್ಮಾ ಇದ್ದರು. ಸುನೀತಾ ಕೂಡ್ಲಿಕರ್ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.