ಬೀದರ್: ಕರ್ನಾಟಕ ಲೋಕಾಯುಕ್ತ ಬೀದರ್ ಪೊಲೀಸ್ ಠಾಣೆ ವತಿಯಿಂದ ಜೂ.17ರಂದು ಬೆಳಿಗ್ಗೆ 11ರಿಂದ ಮಧ್ಯಾಹ್ನ 1ರ ವರೆಗೆ ಔರಾದ್ (ಬಿ) ಪಟ್ಟಣದ ಪ್ರವಾಸಿ ಮಂದಿರ, ಮಧ್ಯಾಹ್ನ 2ರಿಂದ 5ರವರೆಗೆ ಬೀದರ್‌ನ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಅಹವಾಲು ಸ್ವೀಕಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಮಾಹಿತಿಗೆ ಡಿವೈಎಸ್ಪಿ, ಲೋಕಾಯುಕ್ತ ಬೀದರ್ ಅವರ ಮೊಬೈಲ್ ಸಂಖ್ಯೆ: 9364062571, ಪೊಲೀಸ್ ಇನ್‌ಸ್ಪೆಕ್ಟರ್-4 ಕರ್ನಾಟಕ ಲೋಕಾಯುಕ್ತ ಬೀದರ್ ಅವರ ಮೊಬೈಲ್ ಸಂಖ್ಯೆ: 9364062675 ಸಂಪರ್ಕಿಸಬಹುದಾಗಿದೆ ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.