ADVERTISEMENT

ಕುಂಚದಲ್ಲಿ ಕಲೆ ಸೆರೆಹಿಡಿದ ವಿದ್ಯಾರ್ಥಿಗಳು

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2019, 12:33 IST
Last Updated 13 ಡಿಸೆಂಬರ್ 2019, 12:33 IST
ಹುಮನಾಬಾದ್‍ನ ಜಲಸಂಗಿ ಗ್ರಾಮದ ಚಾಲುಕ್ಯರ ಕಾಲದ ಮಹಾದೇವ ಮಂದಿರದಲ್ಲಿ ಈಚೆಗೆ ನಡೆದ ವನಮಹೋತ್ಸವ ಕಾರ್ಯಕ್ರಮಲ್ಲಿ ವೀರಭದ್ರೇಶ್ವರ ಚಿತ್ರಕಲಾ ಮಹಾವಿದ್ಯಾಲಯ ವಿದ್ಯಾರ್ಥಿಗಳು ಚಿತ್ರಕಲಾ ಕೃತಿಗಳನ್ನು ಬಿಡಿಸಿದರು
ಹುಮನಾಬಾದ್‍ನ ಜಲಸಂಗಿ ಗ್ರಾಮದ ಚಾಲುಕ್ಯರ ಕಾಲದ ಮಹಾದೇವ ಮಂದಿರದಲ್ಲಿ ಈಚೆಗೆ ನಡೆದ ವನಮಹೋತ್ಸವ ಕಾರ್ಯಕ್ರಮಲ್ಲಿ ವೀರಭದ್ರೇಶ್ವರ ಚಿತ್ರಕಲಾ ಮಹಾವಿದ್ಯಾಲಯ ವಿದ್ಯಾರ್ಥಿಗಳು ಚಿತ್ರಕಲಾ ಕೃತಿಗಳನ್ನು ಬಿಡಿಸಿದರು   

ಹುಮನಾಬಾದ್: ಪಟ್ಟಣದ ವೀರಭದ್ರೇಶ್ವರ ಚಿತ್ರಕಲಾ ಮಹಾವಿದ್ಯಾಲಯದಿಂದ ತಾಲ್ಲೂಕಿನ ಜಲಸಂಗಿ ಗ್ರಾಮದ ಮಹಾದೇವ ಮಂದಿರದಲ್ಲಿ ಈಚೆಗೆ ಹೊರಾಂಗಣ ಚಿತ್ರಕಲೆ ಬಿಡಿಸುವುದು ಮತ್ತು ವನಭೋಜನ ಕಾರ್ಯಕ್ರಮ ನಡೆಯಿತು.

ವೀರಭದ್ರೇಶ್ವರ ಚಿತ್ರಕಲಾ ಮಹಾವಿದ್ಯಾಲಯದ ಚಿತ್ರಕಲಾ ವಿದ್ಯಾರ್ಥಿಗಳಿಂದ ಡಿ,10 ರಿಂದ 12ರವೆಗೆ ಜಲಸಂಗಿ ಗ್ರಾಮದ ಕಲ್ಯಾಣ ಚಾಲುಕ್ಯರ ಕಾಲದ ಮಹಾದೇವ ಮಂದಿರದಲ್ಲಿರುವ ಶಿಲ್ಪ ಕಲಾಕೃತಿಗಳ ಚಿತ್ರವನ್ನು ಬಿಡಿಸಿದರು.

ನಿರ್ದೇಶಕ ಧನರಾಜ ಮೇತ್ರೆ ಅವರ ಮಾರ್ಗದರ್ಶನದಲ್ಲಿ ಚಿತ್ರಕಲಾ ವಿಭಾಗದ ವಿದ್ಯಾರ್ಥಿಗಳಾದ ಸಂಪತ ಕುಲಕರ್ಣಿ, ವಿಶಾಲಾಕ್ಷಿ ಮಠಪತಿ, ಸಚಿನ, ವಿಲಾಸ, ಭವಾನಿ, ಮಾಲಾಶ್ರೀ, ವಿಜಯಲಕ್ಷ್ಮಿ, ಪ್ರತಿಕ್ಷಾ ಹುಲಸೂರೆ, ರೇಣುಕಾ ಹಿರೊಳೆ, ಸಪ್ನಾ, ಅಶ್ವಿನಿ, ಅಮರ ದಾಡಗೆ, ಸಾಯಿನಾಥ, ಪವನ ಹಾಗೂ ಮಲ್ಲಿಕಾರ್ಜುನ ಸೇರಿದಂತೆ ಇತರೆ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಸೇರಿ ಸುಂದರವಾದ ಚಿತ್ರ ಕಲಾಕೃತಿಗಳು ಬಿಡಿಸಿದರು.

ADVERTISEMENT

ಸಂಸ್ಥೆಯ ಕಾರ್ಯದರ್ಶಿ ಗುಂಡಪ್ಪ ದೊಡ್ಡಮನಿ ಹಾಗೂ ಪ್ರಾಚಾರ್ಯ ವಿ.ಎನ್.ಜಾಧವ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.