ADVERTISEMENT

ಮಕ್ಕಳಿಗೆ ವಿದ್ಯೆ ಜತೆ ಸಂಸ್ಕಾರ ಅಗತ್ಯ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2020, 10:23 IST
Last Updated 18 ಫೆಬ್ರುವರಿ 2020, 10:23 IST
ಔರಾದ್ ನವಚೇತನ ಗುರುಕುಲ ಶಾಲೆಯಲ್ಲಿ ಶನಿವಾರ ಪಾಲಕರಿಂದ ಮಕ್ಕಳಿಗೆ ಕೈತುತ್ತು ನೀಡುವ ಕಾರ್ಯಕ್ರಮದ ಉದ್ಘಾಟನೆಯಲ್ಲಿ ಹಣೆಗಾಂವ್ ಶಂಕರಲಿಂಗ ಶಿವಾಚಾರ್ಯರು, ಸುಭಾಷಾ ಬಹೆನಜೀ ಇದ್ದರು
ಔರಾದ್ ನವಚೇತನ ಗುರುಕುಲ ಶಾಲೆಯಲ್ಲಿ ಶನಿವಾರ ಪಾಲಕರಿಂದ ಮಕ್ಕಳಿಗೆ ಕೈತುತ್ತು ನೀಡುವ ಕಾರ್ಯಕ್ರಮದ ಉದ್ಘಾಟನೆಯಲ್ಲಿ ಹಣೆಗಾಂವ್ ಶಂಕರಲಿಂಗ ಶಿವಾಚಾರ್ಯರು, ಸುಭಾಷಾ ಬಹೆನಜೀ ಇದ್ದರು   

ಔರಾದ್: 'ಮಕ್ಕಳಿಗೆ ವಿದ್ಯೆ ಜತೆ ಉತ್ತಮ ಸಂಸ್ಕಾರ ಕಲಿಸುವುದು ಅಷ್ಟೇ ಮುಖ್ಯವಾಗಿದೆ' ಎಂದು ಹಣೆಗಾಂವ್ ಶಂಕರಲಿಂಗ ಶಿವಾಚಾರ್ಯರು ಹೇಳಿದರು.

ಪಟ್ಟಣದ ನವಚೇತನ ಗುರುಕುಲ ಶಾಲೆಯಲ್ಲಿ ಶನಿವಾರ ಪಾಲಕರಿಂದ ಮಕ್ಕಳಿಗೆ ಕೈತುತ್ತು ಉಣಿಸುವ ಕಾರ್ಯಕ್ರಮದ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.

'ಪಾಲಕರು ತಮ್ಮ ಮಕ್ಕಳನ್ನು ಯಂತ್ರದಂತೆ ಬೆಳೆಸುತ್ತಿದ್ದೇವೆ. ಈ ಕಾರಣ ವೃದ್ಧಾಶ್ರಮಗಳು ಜಾಸ್ತಿಯಾಗುತ್ತಿವೆ' ಎಂದು ಕಳವಳವ್ಯಕ್ತಪಪಡಿಸಿದರು.

ADVERTISEMENT

ಬ್ರಹ್ಮಕುಮಾರಿ ಈಶ್ವರಿ ವಿದ್ಯಾಲಯದ ಸುಭಾಷಾ ಬಹೆನಜೀ ಮಾತನಾಡಿ 'ಶಾಲೆಗಳಲ್ಲಿ ವಿದ್ಯೆ ಜತೆ ಸಂಸ್ಕಾರ ಕಲಿಸಬೇಕು. ಮಹಾತ್ಮರ ವಿಚಾರಗಳು ಮಕ್ಕಳ ತಲೆಯಲ್ಲಿ ಹಾಕಬೇಕು' ಎಂದರು.

ಗುಂಡಯ್ಯ ಸ್ವಾಮಿ, ಪ್ರಭುರಾವ ಕಸ್ತೂರೆ, ಅಮೃತಪ್ಪ ಪಾರಾ, ಸಂಜುಕುಮಾರ ಶೆಟಕಾರ ಮತ್ತಿತರರು ಇದ್ದರು. ಜಗದೇವಿ ಜಾಂತೆ ಸ್ವಾಗತಿಸಿದರು.ಇದೇ ವೇಳೆ ಮಕ್ಕಳು ಪಾಲಕರನ್ನು ಪೂಜಿಸಿದರು. ಪಾಲಕರು ತಮ್ಮ ಮಕ್ಕಳಿಗೆ ಕೈತುತ್ತು ಉಣಬಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.