ADVERTISEMENT

99 ಐಟಿಐ ಕುಶಲಕರ್ಮಿಗಳಿಗೆ ಉದ್ಯೋಗ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2020, 14:43 IST
Last Updated 22 ಸೆಪ್ಟೆಂಬರ್ 2020, 14:43 IST
ಬೀದರ್‌ನ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ನಡೆದ ಕ್ಯಾಂಪಸ್ ಸಂದರ್ಶನದಲ್ಲಿ ಆಯ್ಕೆಯಾದ ಐಟಿಐ ಕುಶಲಕರ್ಮಿಗಳಿಗೆ ಇನ್ಫೊ ಸೋರ್ಸ್ ಕಂಪನಿಯ ಪ್ರಧಾನ ವ್ಯವಸ್ಥಾಪಕ ಕಿಶೋರಕುಮಾರ ಅವರು ನೇಮಕಾತಿ ಪತ್ರ ನೀಡಿದರು
ಬೀದರ್‌ನ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ನಡೆದ ಕ್ಯಾಂಪಸ್ ಸಂದರ್ಶನದಲ್ಲಿ ಆಯ್ಕೆಯಾದ ಐಟಿಐ ಕುಶಲಕರ್ಮಿಗಳಿಗೆ ಇನ್ಫೊ ಸೋರ್ಸ್ ಕಂಪನಿಯ ಪ್ರಧಾನ ವ್ಯವಸ್ಥಾಪಕ ಕಿಶೋರಕುಮಾರ ಅವರು ನೇಮಕಾತಿ ಪತ್ರ ನೀಡಿದರು   

ಬೀದರ್: ಇಲ್ಲಿಯ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ನಡೆದ ಕ್ಯಾಂಪಸ್ ಸಂದರ್ಶನದಲ್ಲಿ ಇನ್ಫೊ ಸೋರ್ಸ್ ಕಂಪನಿಯು 99 ಐಟಿಐ ಕುಶಲಕರ್ಮಿಗಳಿಗೆ ಉದ್ಯೋಗ ಒದಗಿಸಿದೆ.

ಕಂಪನಿಯ ಪ್ರಧಾನ ವ್ಯವಸ್ಥಾಪಕ ಕಿಶೋರಕುಮಾರ ಅವರು ಆಯ್ಕೆಯಾದವರಿಗೆ ನೇಮಕಾತಿ ಪತ್ರ ನೀಡಿದರು.

ಕ್ಯಾಂಪಸ್ ಸಂದರ್ಶನಕ್ಕೆ 182 ಮಂದಿ ಹಾಜರಾಗಿದ್ದಾರೆ. ಅರ್ಹತೆ, ಅನುಭವ, ನೇರ ಸಮಾಲೋಚನೆ ಆಧರಿಸಿ 99 ಐಟಿಐ ಕುಶಲಕರ್ಮಿಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಆಯ್ಕೆಯಾದವರಿಗೆ ಆರಂಭದಲ್ಲಿ ₹9 ಸಾವಿರ ಮಾಸಿಕ ವೇತನ, ಇಎಸ್‍ಐ, ಪಿಎಫ್, ಉಚಿತ ವಸತಿ, ಕಡಿಮೆ ದರದಲ್ಲಿ ಊಟ, ಉಪಾಹಾರ ಸೌಲಭ್ಯ ಕಲ್ಪಿಸಲಾಗುವುದು ಎಂದು ಅವರು ತಿಳಿಸಿದರು.

ADVERTISEMENT

ಪ್ರಭಾರ ಪ್ರಾಚಾರ್ಯ ಶಿವಶಂಕರ ಟೋಕರೆ ಅವರು, ಜಿಲ್ಲೆಯ ಐಟಿಐ ಕುಶಲಕರ್ಮಿಗಳಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಕ್ಯಾಂಪಸ್ ಸಂದರ್ಶನ ಆಯೋಜಿಸಲಾಗಿದೆ ಎಂದು ಹೇಳಿದರು.

ಡಿಸಿಸಿ ಬ್ಯಾಂಕ್‍ನ ಹುಮನಾಬಾದ್ ತಾಲ್ಲೂಕು ಅಭಿವೃದ್ಧಿ ಅಧಿಕಾರಿ ಶರಣಬಸಪ್ಪ ಚಲುವಾ, ಪತ್ರಕರ್ತ ಗಂಧರ್ವ ಸೇನಾ,
ಇನ್ಫೊ ಸೋರ್ಸ್ ಕಂಪನಿಯ ಮಾನವ ಸಂಪನ್ಮೂಲ ಅಧಿಕಾರಿ ವಿಜಯ ಮಹಾಂತೇಶ, ಸಿಇಒ ಸಿರಿಶಾ, ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಆಡಳಿತಾಧಿಕಾರಿ ಪ್ರಕಾಶ ಜನವಾಡಕರ್, ಅಧೀಕ್ಷಕ ಸುದರ್ಶನಕುಮಾರ ಮಂಗಲಗಿಕರ್ ಉಪಸ್ಥಿತರಿದ್ದರು.

ಯುಸೂಫ್‍ಮಿಯಾ ಜೋಜನಾ ಸ್ವಾಗತಿಸಿದರು. ಬಾಬು ಪ್ರಭಾಜಿ ನಿರೂಪಿಸಿದರು. ರಾಘವೇಂದ್ರ ಮುತ್ತಂಗಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.