ADVERTISEMENT

ಬೀದರ್ | ಉದ್ಘಾಟನೆಯಾಗದ ರೈತ ಸಂಪರ್ಕ ಕೇಂದ್ರ

ಖಟಕಚಿಂಚೋಳಿ: ಬಾಡಿಗೆ ಕಟ್ಟಡದಲ್ಲಿ ಗೊಬ್ಬರ, ಬಿತ್ತನೆ ಬೀಜ ಸಂಗ್ರಹ

​ಪ್ರಜಾವಾಣಿ ವಾರ್ತೆ
Published 10 ಮೇ 2022, 4:17 IST
Last Updated 10 ಮೇ 2022, 4:17 IST
ಖಟಕಚಿಂಚೋಳಿ ಗ್ರಾಮದಲ್ಲಿರುವ ರೈತ ಸಂಪರ್ಕ ಕೇಂದ್ರದ ಕಟ್ಟಡ
ಖಟಕಚಿಂಚೋಳಿ ಗ್ರಾಮದಲ್ಲಿರುವ ರೈತ ಸಂಪರ್ಕ ಕೇಂದ್ರದ ಕಟ್ಟಡ   

ಖಟಕಚಿಂಚೋಳಿ: ಕೆಆರ್‌ಐಡಿಎಲ್‌ ವತಿಯಿಂದ ಗ್ರಾಮದಲ್ಲಿ ನಿರ್ಮಿಸಲಾದ ರೈತ ಸಂಪರ್ಕ ಕೇಂದ್ರ ಕಟ್ಟಡ ಉದ್ಘಾಟನೆ ಭಾಗ್ಯ ಕಾಣದೇ ಪಾಳು ಬೀಳುತ್ತಿದೆ. ಇದರಿಂದ ಪರದಾಡುವಂತಾಗಿದೆ ಎಂದು ರೈತರು ಅಸಮಾಧಾನ ವ್ಯಕ್ತಪಡಿಸುತ್ತಾರೆ.

ರೈತ ಸಂಪರ್ಕ ಕೇಂದ್ರಕ್ಕೆ ಸ್ವಂತ ಕಟ್ಟಡ ಇಲ್ಲದಿರುವುದರಿಂದ ಸರ್ಕಾರದಿಂದ ನೀಡುವ ಗೊಬ್ಬರ ಹಾಗೂ ಬೀಜಗಳನ್ನು ಬಾಡಿಗೆ ಕಟ್ಟಡದಲ್ಲಿ ಸಂಗ್ರಹಿಸಲಾಗುತ್ತಿದೆ. ಇದರಿಂದ ಬಾಕಿ ಉಳಿದ ಹಾಗೂ ಮಾರಾಟವಾದ ಬೀಜ ಹಾಗೂ ರಸಗೊಬ್ಬರ ಚೀಲಗಳ ಮಾಹಿತಿ ರೈತರಿಗೆ ಸಿಗುತ್ತಿಲ್ಲ. ಅಕ್ರಮವಾಗಿ ಚೀಲಗಳನ್ನು ಮಾರಾಟ ಮಾಡಲಾಗುತ್ತಿದೆ ಎಂದು ಹೋಬಳಿಯ ರೈತರು ಸಂಶಯ ವ್ಯಕ್ತಪಡಿಸಿದ್ದಾರೆ.

ಈಗಾಗಲೇ ಕೆಆರ್‌ಐಡಿಎಲ್‌ ವತಿಯಿಂದ ಸುಸಜ್ಜಿತ ಕಟ್ಟಡ ನಿರ್ಮಾಣ ಮಾಡಲಾಗಿದೆ. ಆದರೆ ಕಟ್ಟಡದ ಉದ್ಘಾಟನೆ ಮಾಡದೇ ಹಾಗೆಯೇ ಬೀಡಲಾಗಿದೆ. ಬಾಗಿಲು ಹಾಗೂ ಕಿಟಕಿ ಹಾಳಾಗಲಾರಂಭಿಸಿವೆ.‘ಕಟ್ಟಡದ ಸುತ್ತಲೂ ಗಿಡ–ಗಂಟಿಗಳು ಬೆಳೆದಿವೆ. ಅಲ್ಲದೇ ರಾತ್ರಿ ಸಮಯದಲ್ಲಿ ಕುಡುಕರ ತಾಣವಾಗುತ್ತದೆ. ಕಟ್ಟಡ ಸಂಪೂರ್ಣ ಹಾಳಾಗುವ ಮುನ್ನ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು ಕಟ್ಟಡದ ಉದ್ಘಾಟನೆ ಮಾಡಿ ರೈತರಿಗೆ ಅನುಕೂಲ ಮಾಡಿಕೋಡಬೇಕು’ ಎಂದು ಸಾಮಾಜಿಕ ಕಾರ್ಯಕರ್ತ ಉಮೇಶ ತೆಲಂಗ ಒತ್ತಾಯಿಸುತ್ತಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.