ADVERTISEMENT

ಸಾಲಬಾಧೆ: ಬೆಂಕಿ ಹಚ್ಚಿಕೊಂಡು ಚಿಟಗುಪ್ಪ ರೈತ ಆತ್ಮಹತ್ಯೆ

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2025, 20:39 IST
Last Updated 24 ನವೆಂಬರ್ 2025, 20:39 IST
   

ಚಿಟಗುಪ್ಪ(ಹುಮನಾಬಾದ್): ಸಾಲದ ಬಾಧೆಯಿಂದ ರೈತನೊಬ್ಬ ದೇಹಕ್ಕೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲ್ಲೂಕಿನ ಬಸೀರಾಪುರ ಗ್ರಾಮದಲ್ಲಿ ಭಾನುವಾರ ಜರುಗಿದೆ.

ಗ್ರಾಮದ ಭೀಮಣ್ಣ(84) ಆತ್ಮಹತ್ಯೆ ಮಾಡಿಕೊಂಡ ರೈತ ಎಂದು ಗುರುತಿಸಲಾಗಿದೆ. ಭೀಮಣ್ಣ ಅವರು, ಪಿಕೆಪಿಎಸ್ ಹಾಗೂ ಖಾಸಗಿ ಬ್ಯಾಂಕ್ ಸೇರಿದಂತೆ ಸುಮಾರು ₹ 15 ಲಕ್ಷ ಸಾಲ ಮಾಡಿದ್ದರು ಎನ್ನಲಾಗಿದೆ.

ಈ ಕುರಿತು ಬೇಮಳಖೇಡಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.