ADVERTISEMENT

ಆನ್‌ಲೈನ್ ಹೂಡಿಕೆ: ಬೀದರ್ ವ್ಯಕ್ತಿಗೆ ₹2.98 ಕೋಟಿ ವಂಚನೆ

​ಪ್ರಜಾವಾಣಿ ವಾರ್ತೆ
Published 16 ಮೇ 2025, 16:12 IST
Last Updated 16 ಮೇ 2025, 16:12 IST
<div class="paragraphs"><p>ವಂಚನೆ</p></div>

ವಂಚನೆ

   

ಬೀದರ್: ನಗರದ ವ್ಯಕ್ತಿಯೊಬ್ಬರು ಆನ್‌ಲೈನ್‌ನಲ್ಲಿ ಹೂಡಿಕೆ ಮಾಡಿ ₹2.98 ಕೋಟಿ ವಂಚನೆಗೆ ಒಳಗಾಗಿರುವ ಘಟನೆ ನಡೆದಿದೆ.

ಈ ಬಗ್ಗೆ ನಗರದ ಸಿಟಿ ಸೈಬರ್ ಎಕಾನಾಮಿಕ್ ಮತ್ತು ನಾರ್ಕೋಟಿಕ್ಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಬೀದರ್‌ನ ಶಿವನಗರ ನಿವಾಸಿ ರಘುವೀರ ಜೋಶಿ ಎಂಬುವರು ವಂಚನೆಗೆ ಒಳಗಾದವರು. ಎಂಜಿನಿಯರ್ ಪದವೀಧರರಾದ ಇವರು ಆಫ್ರಿಕಾದ ಕಾಂಗೋದಲ್ಲಿ ಕೆಲಸ ಮಾಡಿಕೊಂಡಿದ್ದು, ಕಳೆದ ಫೆಬ್ರವರಿಯಲ್ಲಿ ನಗರಕ್ಕೆ ಬಂದಿದ್ದಾರೆ. ಇವರ ಮೊಬೈಲ್ ಫೇಸ್‌ಬುಕ್ ಖಾತೆಗೆ ಮಾರ್ಚ್ 17ರಂದು ಬಂದ ಜಾಹೀರಾತೊಂದನ್ನು ಕ್ಲಿಕ್ ಮಾಡಿದ ನಂತರ ‘ಬ್ಲಿಂಕ್ಸ್’ ಎಂಬ ಸಂಸ್ಥೆಯಿಂದ ರಿಕ್ವೆಸ್ಟ್ ಬಂದಿದೆ. ಅದನ್ನು ಒಪ್ಪಿಕೊಂಡ ಬಳಿಕ ಅವರಿಗೆ ಆ ಸಂಸ್ಥೆಯ ಪ್ರತಿನಿಧಿಗಳೆಂದು ಹೇಳಿಕೊಂಡಿದ್ದಾರೆ. ತಾವು ಹೂಡಿಕೆ ಮಾಡಿದ ಹಣಕ್ಕೆ ಶೇ. 5ರಷ್ಟು ಹೆಚ್ಚುವರಿ ಹಣ ಕೊಡುವುದಾಗಿ ಹೇಳಿದರು. ಆರಂಭದಲ್ಲಿ ₹10 ಲಕ್ಷ ಹೂಡಿಕೆ ಮಾಡಿ ಶೇ. 5 ರಷ್ಟು ಲಾಭ ಪಡೆದರು. ನಂತರ ನೀವು ಮತ್ತೊಂದು ಟ್ರೇಡಿಂಗ್‌ನಲ್ಲಿ ಹಣ ಹೂಡಿದರೆ ಶೇ. 20ರಷ್ಟು ಲಾಭವಾಗುತ್ತದೆ ನಂಬಿಸಿದರು. ಹೆಚ್ಚುವರಿ ಹಣದ ಆಮಿಷಕ್ಕೆ ಒಳಗಾದ ರಘುವೀರ ಜೋಶಿ ಅವರು ಮತ್ತೆ ಮತ್ತೆ ಹಣ ಹೂಡಿಕೆ ಮಾಡಿ ವಾಪಸ್ ಪಡೆಯಲು ಯತ್ನಿಸಿದಾಗ ಆ ಕಡೆಯಿಂದ ಯಾವುದೇ ರೀತಿಯ ಪ್ರತಿಕ್ರಿಯೆ ಬರಲಿಲ್ಲ. ಆನ್‌ಲೈನ್ ಹೂಡಿಕೆಯಲ್ಲಿ ವಂಚನೆಗೊಳಗಾಗಿದ್ದು ಖಾತ್ರಿಯಾದ ನಂತರ ಮೇ 8ರಂದು ಬೀದರ್ ಸಿಟಿ ಸೈಬರ್ ಎಕಾನಾಮಿಕ್ ಮತ್ತು ನಾರ್ಕೋಟಿಕ್ಸ್ ಠಾಣೆಗೆ ದೂರು ಕೊಟ್ಟಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಾಗಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.