ADVERTISEMENT

ಸ್ವಾತಂತ್ರ್ಯ ಹೋರಾಟಗಾರರಿಗೆ ಸನ್ಮಾನ

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2022, 4:23 IST
Last Updated 16 ಆಗಸ್ಟ್ 2022, 4:23 IST
ಖಟಕಚಿಂಚೋಳಿ ಸಮೀಪದ ದುಬಲಗುಂಡಿ ಗ್ರಾಮದ ಅಂತಪ್ಪ ಗಂಗಾ ಕನ್ಯಾ ಪ್ರೌಢ ಶಾಲೆಯಲ್ಲಿ ಸ್ವಾತಂತ್ರ್ಯ ದಿನ ಆಚರಿಸಲಾಯಿತು
ಖಟಕಚಿಂಚೋಳಿ ಸಮೀಪದ ದುಬಲಗುಂಡಿ ಗ್ರಾಮದ ಅಂತಪ್ಪ ಗಂಗಾ ಕನ್ಯಾ ಪ್ರೌಢ ಶಾಲೆಯಲ್ಲಿ ಸ್ವಾತಂತ್ರ್ಯ ದಿನ ಆಚರಿಸಲಾಯಿತು   

ಖಟಕಚಿಂಚೋಳಿ: ಹೋಬಳಿ ಯಾದ್ಯಂತ ಸೋಮವಾರ ಸರ್ಕಾರಿ ಹಾಗೂ ಖಾಸಗಿ ಶಾಲಾ–ಕಾಲೇಜು, ಸರ್ಕಾರಿ ಕಚೇರಿಗಳು, ಸಂಘ ಸಂಸ್ಥೆಗಳಲ್ಲಿ 75ನೇ ಸ್ವಾತಂತ್ರ್ಯ ದಿನವನ್ನು ಸಡಗರ, ಸಂಭ್ರಮದಿಂದ ಆಚರಿಸಲಾಯಿತು.

ಹಳ್ಳಿಖೇಡ ಬಿ: ಇಲ್ಲಿನ ಡಾ ಬಿ.ಆರ್.ಅಂಬೇಡ್ಕರ್ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಾಚಾರ್ಯ ರವಿ ಕಲ್ಯಾಣಿ ಧ್ವಜಾರೋಹಣ ನೆರವೇರಿಸಿದರು. ಉಪನ್ಯಾಸಕರಾದ ಮಹಮ್ಮದ್ ಮುಜಾಹಿದೀನ್ ಪಾಷಾ, ವೈಜಿನಾಥ ಮಡಕೆ ಹಾಗೂ ಕಾಂಬಳೆ ಇದ್ದರು. ದುಬಲಗುಂಡಿ: ಇಲ್ಲಿನ ಸಂಗಮೇಶ್ವರ ಶಿಕ್ಷಣ ಸಂಸ್ಥೆಯ ಅಡಿಯಲ್ಲಿ ನಡೆಯುತ್ತಿರುವ ಅಂತಪ್ಪ ಜ್ಞಾನ ಗಂಗಾ ಸ್ಮಾರಕ ಕನ್ಯಾ ಪ್ರೌಢಶಾಲೆಯಲ್ಲಿ ಸಂಸ್ಥೆ ಅಧ್ಯಕ್ಷ ಸುಭಾಷ ಗಂಗಾ ಧ್ವಜಾರೋಹಣ ನೆರವೇರಿಸಿದರು. ಐದು ಜನ ಹಿರಿಯ ಸ್ವಾತಂತ್ರ್ಯ ಹೋರಾಟಗಾರರನ್ನು ಸನ್ಮಾನಿಸಲಾಯಿತು. ಮುಖ್ಯಶಿಕ್ಷಕ ಪರಮೇಶ್ವರ ಬಿರಾದಾರ, ಶಿಕ್ಷಕರಾದ ಅವಿನಾಶ, ಜಗದೀಶ ಹಾಗೂ ರಾಹುಲ್ ಇದ್ದರು. ಪ್ರಗತಿ ಕೇಂದ್ರ: ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಹಾಗೂ ಸಾಂಸ್ಕೃತಿಕ ಸಂಘದ ಅಡಿಯಲ್ಲಿ ನಡೆಯುತ್ತಿರುವ ಪ್ರಗತಿ ಕೇಂದ್ರದಲ್ಲಿ ಧ್ವಜಾರೋಹಣ ನೆರವೇರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT