ADVERTISEMENT

ಕಟಾವಿಗೆ ಬಂದ ಹೆಸರು ಬೆಳೆಗೆ ಹಾನಿ

​ಪ್ರಜಾವಾಣಿ ವಾರ್ತೆ
Published 31 ಆಗಸ್ಟ್ 2021, 4:37 IST
Last Updated 31 ಆಗಸ್ಟ್ 2021, 4:37 IST
ಔರಾದ್ ತಾಲ್ಲೂಕಿನ ಸೋರಳ್ಳಿ ಗ್ರಾಮದ ಹೊಲಗಳಲ್ಲಿ ನೀರು ನುಗ್ಗಿದೆ
ಔರಾದ್ ತಾಲ್ಲೂಕಿನ ಸೋರಳ್ಳಿ ಗ್ರಾಮದ ಹೊಲಗಳಲ್ಲಿ ನೀರು ನುಗ್ಗಿದೆ   

ಔರಾದ್: ತಾಲ್ಲೂಕಿನಾದ್ಯಂತ ಭಾನುವಾರ ಸಂಜೆಯಿಂದ ಧಾರಾಕಾ ರವಾಗಿ ಮಳೆ ಸುರಿಯುತ್ತಿದೆ.

ವಡಗಾಂವ್, ಜಮಗಿ ಹೋಬಳಿಯಲ್ಲಿ ಮಳೆಯ ಪ್ರಮಾಣ ಜಾಸ್ತಿ ಇದೆ. ಹೀಗಾಗಿ ಈ ಪ್ರದೇಶದಲ್ಲಿ ಹೊಲಗಳಿಗೆ ನೀರು ನುಗ್ಗಿದೆ. ಜಡಿ ಮಳೆಯಿಂದ ಕೃಷಿ ಚವಟುವಟಿಕೆ ನಿಂತು ಹೋಗಿದೆ. ಇದರಿಂದಾಗಿ ಕಟಾಗಿವೆ ಬಂದ ಹೆಸರು ಬೆಳೆ ಮಳೆಯಲ್ಲಿ ತೊಯ್ದು ಹಾನಿಯಾಗುತ್ತಿದೆ.

ಕಳೆದ 1 ತಿಂಗಳಿನಿಂದ ಮಳೆ ಇಲ್ಲದೆ ಬೆಳೆಗಳು ಬಾಡುತ್ತಿದ್ದವು. ಭಾನುವಾರದಿಂದ ಬೀಳುತ್ತಿರುವ ಮಳೆ ಬೆಳೆಗಳಿಗೆ ಅನುಕೂಲವಾಗಿದೆ. ಆದರೆ ಕಟಾವು ಹಂತದಲ್ಲಿರುವ ಹೆಸರು ಇಳುವರಿ ಮೇಲೆ ಸ್ವಲ್ಪ ಪರಿಣಾಮವಾಗಲಿದೆ ಎಂದು ರೈತ ಗೋವಿಂದ ಇಂಗಳೆ ಹೇಳಿದ್ದಾರೆ.

ADVERTISEMENT

ಮಳೆಯಿಂದ ಬೆಳೆ ಹಾನಿಯಾದರೆ ರೈತರು ತಕ್ಷಣ ವಿಮೆ ಕಂಪನಿಗೆ ಸಂಪರ್ಕಿಸುವಂತೆ ಸಹಾಯಕ ಕೃಷಿ ನಿರ್ದೇಶಕ ಎಂ. ಅನ್ಸಾರಿ ತಿಳಿಸಿದ್ದಾರೆ.

ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ವಿಮಾ ಯೋಜನೆಯಡಿ ವಿಮೆ ಮಾಡಿಸಿದ ರೈತರು ಪ್ರಕೃತಿ ವಿಕೋಪದಡಿ ಪರಿಹಾರ ಪಡೆಯಲು ಅವಕಾಶವಿದೆ. ಹೀಗಾಗಿ ಮಳೆ ಜಾಸ್ತಿಯಾಗಿ ಬೆಳೆ ಹಾನಿಯಾದರೆ 72 ಗಂಟೆಯೊಳಗೆ ವಿಮಾ ಕಂಪನಿಗೆ ಸಂಪರ್ಕಿಸಿ ದೂರು ನೀಡಬೇಕು.

1800-200-5142 ಅಥವಾ 1800-267-4030 ಸಹಾಯವಾಣಿಗೆ ಸಂಪರ್ಕಿಸಬೇಕು. ವಿಮೆ ಕಂಪನಿ ತಾಲ್ಲೂಕು ಸಂಯೋಜಕ ಪವನಸಿಂಗ್, ಮೊ:8971897192 ಸಂಖ್ಯೆಗೆ ಕರೆ ಮಾಡಿ ಮಾಹಿತಿ ಪಡೆಯುವಂತೆ ಸಲಹೆ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.