ADVERTISEMENT

ಗುರುನಾನಕ ಕಾಲೇಜು: ನೀಟ್ ಸಾಧಕರಿಗೆ ಸನ್ಮಾನ

​ಪ್ರಜಾವಾಣಿ ವಾರ್ತೆ
Published 2 ನವೆಂಬರ್ 2021, 14:26 IST
Last Updated 2 ನವೆಂಬರ್ 2021, 14:26 IST
ಬೀದರ್‌ನ ಗುರುನಾನಕ ಪದವಿಪೂರ್ವ ವಿಜ್ಞಾನ ಕಾಲೇಜಿನಲ್ಲಿ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯಲ್ಲಿ ಸಾಧನೆಗೈದ ವಿದ್ಯಾರ್ಥಿನಿಯರಾದ ಕೆ. ಸ್ನೇಹಾ ದಯಾನಂದ ಕಾರಬಾರಿ ಮತ್ತು ಸ್ನೇಹಾ ಪ್ರದೀಪ್ ಅವರನ್ನು ಗುರುನಾನಕ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷೆ ರೇಷ್ಮಾ ಕೌರ್ ಸನ್ಮಾನಿಸಿದರು. ಅಪರಂಜಿನಿ, ಕವಿತಾ, ಸವಿತಾ, ಜಯಪ್ರಕಾಶ, ಎನ್. ರಾಜು ಇದ್ದರು

ಬೀದರ್: ಪ್ರಸಕ್ತ ಸಾಲಿನ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (ನೀಟ್)ಯಲ್ಲಿ ಸಾಧನೆಗೈದ ವಿದ್ಯಾರ್ಥಿನಿಯರನ್ನು ಇಲ್ಲಿಯ ಗುರುನಾನಕ ಪದವಿಪೂರ್ವ ವಿಜ್ಞಾನ ಕಾಲೇಜಿನಲ್ಲಿ ಸನ್ಮಾನಿಸಲಾಯಿತು.

ಅಖಿಲ ಭಾರತ ಮಟ್ಟದಲ್ಲಿ 734ನೇ ರ್‍ಯಾಂಕ್‌ ಪಡೆದ ಕೆ. ನೇಹಾ ದಯಾನಂದ ಕಾರಬಾರಿ ಹಾಗೂ 505 ಅಂಕ ಗಳಿಸಿದ ನೇಹಾ ಪ್ರದೀಪ್ ಅವರನ್ನು ಗುರುನಾನಕ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷೆ ರೇಷ್ಮಾ ಕೌರ್ ಸನ್ಮಾನಿಸಿದರು.

ಆಡಳಿತ ಮಂಡಳಿ ಮಾರ್ಗದರ್ಶನ, ಪರಿಣಾಮಕಾರಿ ಬೋಧನೆ ಹಾಗೂ ವಿದ್ಯಾರ್ಥಿಗಳ ಕಠಿಣ ಪರಿಶ್ರಮದಿಂದ ನೀಟ್‍ನಲ್ಲಿ ಉತ್ತಮ ಫಲಿತಾಂಶ ಲಭಿಸಿದೆ ಎಂದು ಅವರು ಹೇಳಿದರು.

ADVERTISEMENT

ಸನ್ಮಾನ ಸ್ವೀಕರಿಸಿದ ವಿದ್ಯಾರ್ಥಿನಿಯರು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು. ಪ್ರಾಚಾರ್ಯೆ ಅಪರಂಜಿನಿ, ಆಡಳಿತಾಧಿಕಾರಿ ಜಯಪ್ರಕಾಶ, ಗುರುನಾನಕ ಶಾಲೆ ಪ್ರಾಚಾರ್ಯರಾದ ಎನ್ ರಾಜು, ಕವಿತಾ, ಸವಿತಾ, ಮುಖ್ಯಶಿಕ್ಷಕರಾದ ಅಮ್ಜದ್ ಅಲಿ, ಆರಿಫ್ ಹಾದಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.