ADVERTISEMENT

ಗುರುನಾನಕ ಆಸ್ಪತ್ರೆ: 100 ಡಯಾಲಿಸಿಸ್ ಉಚಿತ

ಡಯಾಲಿಸಿಸ್ ಘಟಕ ಉದ್ಘಾಟನೆ ಕಾರ್ಯಕ್ರಮದಲ್ಲಿ ಘೋಷಣೆ

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2020, 15:43 IST
Last Updated 28 ನವೆಂಬರ್ 2020, 15:43 IST
ಬೀದರ್‌ನ ಗುರುನಾನಕ ಆಸ್ಪತ್ರೆಯಲ್ಲಿ ಡಯಾಲಿಸಿಸ್ ಘಟಕವನ್ನು ಜಿಲ್ಲಾಧಿಕಾರಿ ರಾಮಚಂದ್ರನ್ ಆರ್ ಉದ್ಘಾಟಿಸಿದರು. ಸರ್ದಾರ್ ಬಲಬೀರ್‍ಸಿಂಗ್, ರೇಷ್ಮಾ ಕೌರ್ ಇದ್ದರು
ಬೀದರ್‌ನ ಗುರುನಾನಕ ಆಸ್ಪತ್ರೆಯಲ್ಲಿ ಡಯಾಲಿಸಿಸ್ ಘಟಕವನ್ನು ಜಿಲ್ಲಾಧಿಕಾರಿ ರಾಮಚಂದ್ರನ್ ಆರ್ ಉದ್ಘಾಟಿಸಿದರು. ಸರ್ದಾರ್ ಬಲಬೀರ್‍ಸಿಂಗ್, ರೇಷ್ಮಾ ಕೌರ್ ಇದ್ದರು   

ಬೀದರ್: ಇಲ್ಲಿಯ ಗುರುನಾನಕ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ನೂತನವಾಗಿ ಉದ್ಘಾಟನೆಗೊಂಡಿರುವ ಡಯಾಲಿಸಿಸ್ ಘಟಕವು 100 ಡಯಾಲಿಸಿಸ್‍ಗಳನ್ನು ಉಚಿತವಾಗಿ ಮಾಡಲಿದೆ.

ಆಸ್ಪತ್ರೆಯಲ್ಲಿ ನಡೆದ ಡಯಾಲಿಸಿಸ್ ಘಟಕದ ಉದ್ಘಾಟನಾ ಸಮಾರಂಭದಲ್ಲಿ ಗುರುನಾನಕ್ ಶಿಕ್ಷಣ ಸಮೂಹ ಸಂಸ್ಥೆಯ ಉಪಾಧ್ಯಕ್ಷೆ ರೇಷ್ಮಾ ಕೌರ್ ಈ ಘೋಷಣೆ ಮಾಡಿದರು.

ಜಿಲ್ಲೆಯ ಜನ ಡಯಾಲಿಸಿಸ್‍ಗಾಗಿ ಸೊಲ್ಲಾಪುರ, ಹೈದರಾಬಾದ್‍ನ ಆಸ್ಪತ್ರೆಗಳಿಗೆ ಹೋಗುವುದನ್ನು ತಪ್ಪಿಸಲು ಆಸ್ಪತ್ರೆಯಲ್ಲಿ ಡಯಾಲಿಸಿಸ್ ಘಟಕ ಶುರು ಮಾಡಲಾಗಿದೆ. ಜಿಲ್ಲೆಯ ಜನ ಇದರ ಪ್ರಯೋಜನ ಪಡೆಯಬೇಕು ಎಂದು ಮನವಿ ಮಾಡಿದರು.

ADVERTISEMENT

ಡಯಾಲಿಸಿಸ್ ಘಟಕಕ್ಕೆ ಚಾಲನೆ ನೀಡಿದ ಜಿಲ್ಲಾಧಿಕಾರಿ ರಾಮಚಂದ್ರನ್ ಆರ್. ಮಾತನಾಡಿ, ಗುರುನಾನಕ ಆಸ್ಪತ್ರೆಯು ಅತ್ಯಾಧುನಿಕ ಚಿಕಿತ್ಸಾ ಸೌಲಭ್ಯಗಳೊಂದಿಗೆ ರೋಗಿಗಳಿಗೆ ಉತ್ತಮ ಆರೋಗ್ಯ ಸೇವೆ ಒದಗಿಸುತ್ತಿದೆ ಎಂದು ಹೇಳಿದರು.

ಗುರುನಾನಕ ಝೀರಾ ಪ್ರಬಂಧಕ ಸಮಿತಿಯ ಅಧ್ಯಕ್ಷ ಬಲಬೀರಸಿಂಗ್, ರೇಷ್ಮಾ ಕೌರ್ ಹಾಗೂ ಇತರರ ನೇತೃತ್ವದಲ್ಲಿ ಅನೇಕ ಜನೋಪಯೋಗಿ ಕಾರ್ಯಗಳು ನಡೆಯುತ್ತಿವೆ. ಜನರ ಅನುಕೂಲಕ್ಕಾಗಿ ಸರ್ದಾರ್ ಜೋಗಾಸಿಂಗ್ ಅವರು ಆರಂಭಿಸಿರುವ ಆಸ್ಪತ್ರೆಯನ್ನು ಬಲಬೀರ್‍ಸಿಂಗ್ ಅವರು ಉತ್ತಮವಾಗಿ ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಜಿಲ್ಲಾ ಆಸ್ಪತ್ರೆಯ ಡೀನ್ ಡಾ. ಶಿವಕುಮಾರ ಸಿ.ಆರ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ವಿ.ಜಿ. ರೆಡ್ಡಿ, ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ. ಶಿವಶಂಕರ, ಗುರುನಾನಕ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ನಿಶಾ ಕೌರ್, ಶಿವಶರಣಪ್ಪ ವಾಲಿ, ಸರ್ದಾರ್ ಮನ್‍ಪ್ರೀತ್‍ಸಿಂಗ್ (ಬಂಟಿ), ಪುನೀತ್‍ಸಿಂಗ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.