ಭಾಲ್ಕಿ: ತಾಲ್ಲೂಕಿನ ಚಳಕಾಪುರ ಗ್ರಾಮದಲ್ಲಿ ಏ.12ರಂದು ನಡೆಯಲಿರುವ ಹನುಮಾನ ದೇವರ ಜಯಂತಿ ಮಹೋತ್ಸವ ನಿಮಿತ್ತ ವಾಲ್ ಪೋಸ್ಟರ್‌ಗಳನ್ನು ಬಿಡುಗಡೆ ಮಾಡಲಾಯಿತು.
ದೇವಸ್ಥಾನ ಪ್ರಮುಖ ಬಲವಂತರಾವ್ ಕುಲಕರ್ಣಿ ಮಾತನಾಡಿ, ನಮ್ಮ ಗ್ರಾಮದ ಹನುಮಾನ ದೇವರು ಉತ್ತರಮುಖಿ ಆಗಿರುವುದು ತುಂಬಾ ವಿಶೇಷ. ಹಾಗಾಗಿ ರಾಜ್ಯದ ವಿವಿಧ ಜಿಲ್ಲೆ ಸೇರಿದಂತೆ ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರದಿಂದಲೂ ಹೆಚ್ಚಿನ ಸಂಖ್ಯೆಯಲ್ಲಿ ಅಂದು ಭಕ್ತರು ಆಗಮಿಸುತ್ತಾರೆ. ಜಯಂತಿ ಮಹೋತ್ಸವ ಕಾರ್ಯಕ್ರಮಕ್ಕೆ ಆಗಮಿಸುವ ಭಕ್ತರಿಗೆ ಪ್ರಸಾದ ಮತ್ತು ವಸತಿ ವ್ಯವಸ್ಥೆಯನ್ನು ಮಾಡಲಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಕೃತಾರ್ಥರಾಗಬೇಕು ಎಂದು ತಿಳಿಸಿದರು.
ಪ್ರಮುಖರಾದ ಕಿಶೋರ ಕುಲಕರ್ಣಿ, ಶಿವರಾಜ ಮಾಸುಲ್ದಾರ್, ಶಿವಶರಣಪ್ಪ ಅರದೇಶಿ, ಭೀಮರಾವ್ ಭೀಮಶೆಟ್ಟಿ, ಬಲಭೀಮ ಗೌಡಗಾವೆ, ಹಣಮಂತ ಜೈನಾಪುರ, ಶಿವು ರೊಟ್ಟೆ, ನಾಗನಾಥ ಯಶ್ವಂತ ಜಗನ್ನಾಥ ಕೊಳರೆ, ಕಾಶಿನಾಥ ಬೆಟ್ಟದ, ಸುಭಾಷ ಕೆನಡೆ, ಕಲ್ಲಪ್ಪ ರುದ್ರಪ್ಪನೋರ್ ಸೇರಿದಂತೆ ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.