ADVERTISEMENT

ಬೀದರ್: ವಿದ್ಯಾರ್ಥಿಗಳಿಂದ ಪಾರಂಪರಿಕ ನಡಿಗೆ

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2021, 13:36 IST
Last Updated 25 ನವೆಂಬರ್ 2021, 13:36 IST
ಪಾರಂಪರಿಕ ನಡಿಗೆ ನಿಮಿತ್ತ ಕರ್ನಾಟಕ ಕಾಲೇಜು ವಿದ್ಯಾರ್ಥಿಗಳು ಬೀದರ್ ತಾಲ್ಲೂಕಿನ ಅಲಿಯಬಾದ್ ಸಮೀಪದ ಹಳೆಯ ಬಾವಿಯನ್ನು ವೀಕ್ಷಿಸಿದರು
ಪಾರಂಪರಿಕ ನಡಿಗೆ ನಿಮಿತ್ತ ಕರ್ನಾಟಕ ಕಾಲೇಜು ವಿದ್ಯಾರ್ಥಿಗಳು ಬೀದರ್ ತಾಲ್ಲೂಕಿನ ಅಲಿಯಬಾದ್ ಸಮೀಪದ ಹಳೆಯ ಬಾವಿಯನ್ನು ವೀಕ್ಷಿಸಿದರು   

ಬೀದರ್: ಇಲ್ಲಿಯ ಕರ್ನಾಟಕ ಕಾಲೇಜಿನ ಇತಿಹಾಸ ವಿಭಾಗದ ವಿದ್ಯಾರ್ಥಿಗಳಿಂದ ಟೀಂ ಯುವಾ ಸಹಯೋಗದೊಂದಿಗೆ ನಗರದಲ್ಲಿ ಪಾರಂಪರಿಕ ನಡಿಗೆ ನಡೆಯಿತು.

ಕೆಆರ್‍ಇ ಸಂಸ್ಥೆ ಕಾರ್ಯದರ್ಶಿ ಸಿದ್ರಾಮ ಪಾರಾ, ಸದಸ್ಯ ಸಿದ್ಧರಾಜ ಪಾಟೀಲ ಹಾಗೂ ಪ್ರಾಚಾರ್ಯ ಮಲ್ಲಿಕಾರ್ಜುನ ಚಲ್ವಾ ಜಂಟಿಯಾಗಿ ನಡಿಗೆಗೆ ಚಾಲನೆ ನೀಡಿದರು.

ನಡಿಗೆ ಪ್ರಯುಕ್ತ ನೌಬಾದ್ ಹತ್ತಿರದ ಅಲಿಯಾಬಾದ್‍ನ ಸುರಂಗ ಬಾವಿ, ಮದರ್ ವೆಲ್‍ಗೆ ಭೇಟಿ ನೀಡಲಾಯಿತು. ವಿದ್ಯಾರ್ಥಿಗಳಿಗೆ ಸುರಂಗ ಬಾವಿ ವ್ಯವಸ್ಥೆ ಕುರಿತು ಮಾಹಿತಿ ಕೊಡಲಾಯಿತು.

ADVERTISEMENT

ಕಾಲೇಜಿನ ಉಪನ್ಯಾಸಕಿಯರಾದ ಲಕ್ಷ್ಮಿ ಎನ್. ಕುಂಬಾರ, ಡಾ. ಆಶಾ ಮುದ್ದಾ, ಡಾ. ದಿಲೀಪಕುಮಾರ, ಆನಂದ, ಐಸಿಐಸಿ ಸಹಾಯಕ ಸಂಯೋಜಕ ರಾಜಮೋಹನ್ ಪರದೇಶಿ, ಟೀಂ ಯುವಾ ಸಂಚಾಲಕ ವಿನಯ್ ಮಾಳಗೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.