ADVERTISEMENT

ಹುಮನಾಬಾದ್ | ಜಾತ್ರೆಯಿಂದ ಸೌಹಾರ್ದತೆ

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2025, 5:31 IST
Last Updated 13 ಆಗಸ್ಟ್ 2025, 5:31 IST
ಹುಮನಾಬಾದ್ ತಾಲ್ಲೂಕಿನ ಹಳ್ಳಿಖೇಡ್ ಕೆ. ಗ್ರಾಮದಲ್ಲಿ ಆಯೋಜಿಸಿದ್ದ ಧರ್ಮಸಭೆಗೆ ಮಾಜಿ ಸಚಿವ ರಾಜಶೇಖರ ಪಾಟೀಲ ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು
ಹುಮನಾಬಾದ್ ತಾಲ್ಲೂಕಿನ ಹಳ್ಳಿಖೇಡ್ ಕೆ. ಗ್ರಾಮದಲ್ಲಿ ಆಯೋಜಿಸಿದ್ದ ಧರ್ಮಸಭೆಗೆ ಮಾಜಿ ಸಚಿವ ರಾಜಶೇಖರ ಪಾಟೀಲ ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು   

ಹುಮನಾಬಾದ್: ಜಾತ್ರೆಗಳು ಜಾತಿ, ಧರ್ಮ, ಮೇಲು, ಕೀಳು ಎನ್ನದೆ ಎಲ್ಲ ಜನರನ್ನು ಒಂದುಗೂಡಿಸಿ ಜನರಲ್ಲಿ ಸೌಹಾರ್ದತೆಯನ್ನು ಬೆಳೆಸುತ್ತವೆ ಎಂದು ಮಾಜಿ ಸಚಿವ ರಾಜಶೇಖರ ಪಾಟೀಲ ಹೇಳಿದರು.

ತಾಲ್ಲೂಕಿನ ಹಳ್ಳಿಖೇಡ (ಕೆ) ಗ್ರಾಮದ ಕಿನ್ನರಿ ಬೋಮ್ಮಯ್ಯನ ದೇವಸ್ಥಾನದಲ್ಲಿ ನಡೆದ ಕಿನ್ನರಿ ಬೋಮ್ಮಯ್ಯನ ರಥೋತ್ಸವ ಹಾಗೂ ಧರ್ಮ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.

ಜಾತ್ರೆಗಳಲ್ಲಿ ಜಾತಿ ತಾರತಮ್ಯ ಕಾಣುವುದಿಲ್ಲ. ಕೇವಲ ಶ್ರದ್ಧೆ-ಭಕ್ತಿಯಿಂದ ಜಾತ್ರೆ, ಉತ್ಸವಹಬ್ಬಗಳನ್ನು ಆಚರಿಸುತ್ತಾರೆ. ಆದ್ದರಿಂದ ಜಾತ್ರೆ, ಉತ್ಸವ ಹಬ್ಬಗಳು ನಮ್ಮ ದೇಶದ ಸಾಮಾಜಿಕ ಸೌಹಾರ್ದತೆ ಕಾಪಾಡಲು ಸಹಕಾರಿಯಾಗಿವೆ ಎಂದು ಹೇಳಿದರು.

ADVERTISEMENT

ಈ ಸಂದರ್ಭದಲ್ಲಿ ಹಿರೇಮಠ ಸಂಸ್ಧಾನದ ಮೃತ್ಯುಂಜಯ ಶಿವಯೋಗಿ ಶಿವಾಚಾರ್ಯ, ಡೊಂಗರಗಾಂವ ರೇವಣಸಿದ್ದೇಶ್ವರ ಮಠದ ಉದಯ ರಾಜಯೋಗೇಂದ್ರ ಶಿವಾಚಾರ್ಯ, ಹಳ್ಳಿಖೇಡ ಹಿರೇಮಠದ ಪೀಠಾಧಿಪತಿ ಚರಮೂರ್ತಿ ಸಿದ್ದರಾಮ ದೇವರು, ಸುಭಾಷ ವಾರದ ಶಿವಕುಮಾರ ಪಾಟೀಲ, ಸುಭಾಷ ಚೀಲಶೆಟ್ಟಿ, ಅಣ್ಣೆಪ್ಪ ರಟಕಲೆ, ಭಕ್ತರಾಜ ಚಿತ್ತಾಪೂರೆ, ಪ್ರಭುರಾವ ಬಿರಾದಾರ, ಮಲ್ಲಿಕಾರ್ಜುನ ತಟಪಟೆ, ಉದಯಕುಮಾರ ವಾರದ, ರಮೇಶ ವಾರದ, ಶ್ರೀ ಮಹೇಶ ಚೀಲಶಟ್ಟಿ, ಸಂಗಪ್ಪ ಉಪ್ಪಿನ, ಮಹಾದೇವ ಗೋಸ್ವಾಮಿ, ಭೀಮಶಾ ಕೋರಿ, ಗುಂಡಪ್ಪಾ ಕೋರಿ, ಸಂಗಮೇಶ ಸಿದ್ದೇಶ್ವರ, ಪ್ರಕಾಶ ಬಾವಗಿ, ಸಂತೋಷ ಚಿಲಶಟ್ಟಿ, ಭೀಮಶಾ ಸ್ವಂತ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.